ಕಬ್ಬು ಬೆಳೆಗಾರರಿಗೆ 9,499 ಕೋಟಿ ರೂ. ಬಾಕಿ: ಕೇಂದ್ರ ಸರ್ಕಾರದ ಮಾಹಿತಿ
Sugarcane payments: ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿಯವರು ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವುದು ನಿರಂತರ ಪ್ರಕ್ರಿಯೆ ಆಗಿದ್ದು, ಕಳೆದ 5 ವರ್ಷಗಳಿಂದ ಬಾಕಿ ಪಾವತಿ ಮೊತ್ತದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ನವದೆಹಲಿ: ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಮಾರುಕಟ್ಟೆ ವರ್ಷಕ್ಕೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 1.04 ಲಕ್ಷ ಕೋಟಿ ರೂ. ಪಾವತಿಸಿದ್ದು, ಇನ್ನೂ 9,499 ಕೋಟಿ ರೂ.ನಷ್ಟು ಪಾವತಿಸಬೇಕಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿಯವರು ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವುದು ನಿರಂತರ ಪ್ರಕ್ರಿಯೆ ಆಗಿದ್ದು, ಕಳೆದ 5 ವರ್ಷಗಳಿಂದ ಬಾಕಿ ಪಾವತಿ ಮೊತ್ತದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
2020-21ನೇ ಅವಧಿಗೆ ಶೇ 99.9ರಷ್ಟು ಕಬ್ಬು ಬಾಕಿಯನ್ನು ರೈತರಿಗೆ ಪಾವತಿಸಲಾಗಿದೆ. 2022-23ನೇ ಅವಧಿಗೆ ಜುಲೈ 17ರವರೆಗೆ ಶೇ.91.6ರಷ್ಟು ಬಾಕಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಚಿವಾಲಯದ ಮಾಹಿತಿಯ ಪ್ರಕಾರ, ಒಟ್ಟು ಕಬ್ಬಿನ ಬಾಕಿಯ ಪೈಕಿ ಉತ್ತರ ಪ್ರದೇಶದ ಕಾರ್ಖಾನೆ ಮಾಲೀಕರು ರೈತರಿಗೆ ₹6,315 ಕೋಟಿ ಮೊತ್ತದ ಬಾಕಿಯನ್ನು ಪಾವತಿಸಬೇಕಾಗಿದೆ . ಗುಜರಾತ್‌ನಲ್ಲಿ ₹1,651 ಕೋಟಿ ಹಾಗೂ ಮಹಾರಾಷ್ಟ್ರದಲ್ಲಿ ₹631 ಕೋಟಿ ರೂ. ಕಬ್ಬಿನ ಬಾಕಿ ಇದೆ.
ಇದನ್ನೂ ಓದಿ: ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಲೋಕಸಭಾದಿಂದ ಕಾಂಗ್ರೆಸ್‌ನ ಅಧೀರ್ ಚೌಧರಿ ಅಮಾನತು
ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ಹಣವನ್ನು ತ್ವರಿತವಾಗಿ ಪಾವತಿಸಲು, ಕೇಂದ್ರ ಸರ್ಕಾರವು ಅಗತ್ಯವಿರುವ ವಿವಿಧ ನೀತಿ ಕ್ರಮಗಳನ್ನು ಜಾರಿಗೆ ತಂದಿದೆ. ಕಬ್ಬಿನ (ನಿಯಂತ್ರಣ) ಆದೇಶ, 1966ರ ಕಲಂ 3 (1)ರಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಬ್ಬಿನ ಸರ್ಕಾರ-ನಿರ್ದೇಶಿತ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಈ ಕ್ರಮಗಳಲ್ಲಿ ಸೇರಿದೆ. ಹೆಚ್ಚುವರಿಯಾಗಿ ಎಕ್ಸ್-ಮಿಲ್ ಬೆಲೆಗಳಲ್ಲಿ ಯಾವುದೇ ಬೆಲೆ ಕುಸಿತವನ್ನು ತಡೆಗಟ್ಟಲು ಮತ್ತು ಸಂಗ್ರಹವಾದ ಕಬ್ಬಿನ ಬಾಕಿಯನ್ನು ತೆರವುಗೊಳಿಸಲು ಸಹಾಯ ಮಾಡಲು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ದರವನ್ನು ಆರಂಭದಲ್ಲಿ ಕೆಜಿಗೆ ₹29 ನಿಗದಿಪಡಿಸಿ , ನಂತರ ₹31ಕ್ಕೆ ಪರಿಷ್ಕರಿಸಲಾಯಿತು.
2014-15ರ ಸಕ್ಕರೆ ಋತುವಿನಿಂದ 2020-21ರವರೆಗೆ 7 ವರ್ಷಗಳ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರವು ₹18,000 ಕೋಟಿಗೂ ಹೆಚ್ಚು ಆರ್ಥಿಕ ಸಹಾಯವನ್ನು ವಿಸ್ತರಿಸಿದೆ. ಈ ಆರ್ಥಿಕ ನೆರವಿನಿಂದ ರೈತರ ಬಾಕಿ ಹಣ ಸಕಾಲದಲ್ಲಿ ಮನ್ನಾ ಆಗಿದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಕ್ರಮದಲ್ಲಿ, ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಯನ್ನು ಬೇರೆಡೆಗೆ ತಿರುಗಿಸಲಾಗಿದೆ. ಇದು ಆರಂಭಿಕ ಹಂತದಲ್ಲಿ ಕಬ್ಬು ರೈತರಿಗೆ ನೀಡಬೇಕಾದ ಬಾಕಿಗಳನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಮುಂದುವರೆದ ಗದ್ದಲ ಗಲಾಟೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.