"ನೀವು ಜಯಲಲಿತಾ ಸೀರೆ ಎಳೆದಿದ್ದು ಮರೆತಿದ್ದೀರಾ?" ಡಿಎಂಕೆ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ 

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ದಾಳಿಗೆ ತಿರುಗೇಟು ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರನ್ನು ನೆನಪಿಸಿದ್ದಾರೆ.

Written by - Manjunath N | Last Updated : Aug 10, 2023, 05:51 PM IST
  • ನಂತರ ಅವರು ಮಾರ್ಚ್ 25, 1989 ರಂದು ತಮಿಳುನಾಡು ವಿಧಾನಸಭೆಯಲ್ಲಿ ಶ್ರೀಮತಿ ಜಯಲಲಿತಾ ಅವರ ಸೀರೆಯನ್ನು ಎಳೆದ ಘಟನೆಯನ್ನು ವಿವರಿಸಿದರು.
  • "ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು, ಡಿಎಂಕೆ ಸದಸ್ಯರು ಗಲಾಟೆ ಮಾಡಿ, ನಕ್ಕರು.
  • ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಮರಳುತ್ತೇನೆ ಎಂದು ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಿದರು.
 "ನೀವು ಜಯಲಲಿತಾ ಸೀರೆ ಎಳೆದಿದ್ದು ಮರೆತಿದ್ದೀರಾ?" ಡಿಎಂಕೆ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ  title=

ನವದೆಹಲಿ: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ದಾಳಿಗೆ ತಿರುಗೇಟು ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರನ್ನು ನೆನಪಿಸಿದ್ದಾರೆ.

ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತು ಡಿಎಂಕೆ ನಾಯಕಿ ಕನಿಮೊಳಿ ಅವರ ಟೀಕೆಗೆ ಪ್ರತಿಯಾಗಿ ಮಾತನಾಡಿದ ಅವರು , "ಮಹಿಳೆಯರು ಎಲ್ಲಿಯಾದರೂ ಬಳಲುತ್ತಿದ್ದಾರೆ, ಅದು ಮಣಿಪುರ ಅಥವಾ ರಾಜಸ್ಥಾನ ಅಥವಾ ದೆಹಲಿ, ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಆದರೆ ಅದರಲ್ಲಿ ಯಾವುದೇ ರಾಜಕೀಯ ಇರಬಾರದು" ಎಂದು ಹೇಳಿದರು.

ನಂತರ ಅವರು ಮಾರ್ಚ್ 25, 1989 ರಂದು ತಮಿಳುನಾಡು ವಿಧಾನಸಭೆಯಲ್ಲಿ ಶ್ರೀಮತಿ ಜಯಲಲಿತಾ ಅವರ ಸೀರೆಯನ್ನು ಎಳೆದ ಘಟನೆಯನ್ನು ವಿವರಿಸಿಸುತ್ತಾ. "ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು, ಡಿಎಂಕೆ ಸದಸ್ಯರು ಗಲಾಟೆ ಮಾಡುತ್ತಾ ನಗುತ್ತಿದ್ದರು.ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಮರಳುತ್ತೇನೆ ಎಂದು ಜಯಲಲಿತಾ ಪ್ರಮಾಣ ಮಾಡಿದರು, ಇದಾದ ಎರಡು ವರ್ಷಗಳ ನಂತರ ಅವರು ಮತ್ತೆ ಮುಖ್ಯಮಂತ್ರಿಯಾದರು" ಎಂದು ಹೇಳಿದರು

ಇದನ್ನೂ ಓದಿ: 0 ವರ್ಷ ಮೇಲ್ಪಟ್ಟ ನಂತರ ತೂಕ ಇಳಿಕೆಗೆ ಈ ಅಂಶಗಳೇ ಸಹಾಯವಾಗುವುದು! ಟ್ರೈ ಮಾಡಿ ನೋಡಿ

ಪ್ರತಿಭಟನಾನಿರತ ಡಿಎಂಕೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಕೌರವ ಸಭೆಯ ಬಗ್ಗೆ ಮಾತನಾಡುತ್ತಿದ್ದೀರಿ, ದ್ರೌಪದಿಯ ಬಗ್ಗೆ ಮಾತನಾಡುತ್ತಿದ್ದೀರಿ, ಡಿಎಂಕೆ ಜಯಲಲಿತಾ ಅವರನ್ನು ಮರೆತಿದೆಯೇ? ಎಂದು ಕುಟುಕಿದರು.ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಹಣಕಾಸು ಸಚಿವರು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇದೆ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ ಸೀತಾರಾಮನ್ "ಸೆಂಗೊಲ್" ನ್ಯಾಯದ ಸಂಕೇತವಾಗಿ ಹೊಸ ಸಂಸತ್ತಿನಲ್ಲಿ ಸ್ಥಾಪಿಸಲಾದ ರಾಜದಂಡವಾಗಿದೆ.  ಆದರೆ ಅದನ್ನು ಮರೆತು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.ಅದು ತಮಿಳರಿಗೆ ಮಾಡಿದ ಅವಮಾನ ಅಲ್ಲವೇ ? ಎಂದು ಪ್ರಶ್ಜಿಸಿದರು.

ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರನ ಆತ್ಮಹತ್ಯೆಗೆ ಸಿದ್ದರಾಮಯ್ಯ, ಡಿಕೆಶಿ ಹೊಣೆ: ಬಿಜೆಪಿ ಆರೋಪ

ದೇಶದ ಅತ್ಯಂತ ಹಳೆಯ ಶೈವ ಮಠಗಳಲ್ಲಿ ಒಂದಾದ ತಮಿಳುನಾಡಿನ ತಿರುವವಡುತುರೈ ಅಧೀನಂ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ರಾಜದಂಡವನ್ನು ಅರ್ಪಿಸಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News