ಕೇಂದ್ರ ಸರ್ಕಾರ ಹೆಣ್ಣು ಮಗುವಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದ್ದಲ್ಲಿ ಅದಕ್ಕೆ ಸುಕುನ್ಯಾ ಸಮೃದ್ಧಿ ಯೋಜನೆ(SSY) ಉತ್ತಮ ಆಯ್ಕೆ. ಮಗು ಹುಟ್ಟಿದಾಗಿನಿಂದಲೇ ಸ್ವಲ್ಪ ಸ್ವಲ್ಪ ಉಳಿತಾಯ ಮಾಡುವ ಮೂಲಕ ಅಧಿಕ ಲಾಭಾ ಗಳಿಸುವ ಯೋಜನೆ ಇದಾಗಿದೆ. ಪಡೆಯಬಹುದು. 


COMMERCIAL BREAK
SCROLL TO CONTINUE READING

ಖಾತೆ ತೆರೆಯುವುದು ಹೇಗೆ?: ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಆಕೆಯ ಪೋಷಕರು ಈ ಯೋಜನೆ(Yojana) ಆಧಾರದ ಮೇಲೆ ಖಾತೆ ಮಗುವಿನ ಉನ್ನತ ಶಿಕ್ಷಣ, ಮದುವೆ ಸಂದರ್ಭದಲ್ಲಿ ಈ ಯೋಜನೆ ಮೂಲಕ ದುಪ್ಪಟ್ಟು ಉಳಿತಾಯ ತೆರೆಯಬೇಕು. ಮಗುವಿನ ಜನ್ಮ ದಾಖಲೆ ಇದಕ್ಕೆ ಕಡ್ಡಾಯ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆ ಲಾಭ ಪಡೆಯಬಹುದು. ಒಂದು ವೇಳೆ ತ್ರಿವಳಿ ಹೆಣ್ಣುಮಕ್ಕಳು ಹುಟ್ಟಿದರೆ, ಅವರು ಕೂಡ ಈ ಲಾಭ ಪಡೆಯಬಹುದು.


LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್


ಠೇವಣಿ ಎಷ್ಟು?: ಕನಿಷ್ಠ 250 ರೂ ಠೇವಣಿಯೊಂದಿಗೆ ಈ ಯೋಜನೆ ಆರಂಭಿಸಬಹುದು. ವರ್ಷಕ್ಕೆ ಗರಿಷ್ಠ 1.5 ಲಕ್ಷ ಹಣವನ್ನು ಕೂಡ ಠೇವಣಿ ಹೂಡಬಹುದು. 15 ವರ್ಷಗಳವರೆಗೆ ಪ್ರತಿ ತಿಂಗಳ ಹಣವನ್ನು ಹೂಡಿಕೆ ಮಾಡಬೇಕು. ಒಂದು ವೇಳೆ ಕನಿಷ್ಠ ಹಣವನ್ನು ವರ್ಷಕ್ಕೆ ಠೇವಣಿ ಇಡದಿದ್ದರೆ, ಖಾತೆ ನಿಷ್ಕ್ರಿಯ ಗೊಳ್ಳಲಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಖಾತೆ ತೆರೆದ 15 ವರ್ಷದ ಒಳಗೆ 50ರೂ ದಂಡದ ಹಣ ಕಟ್ಟಿ ಪುನಃ ಖಾತೆ ಸಕ್ರಿಯಗೊಳಿಸಬಹುದು.


Netflix Free: ಇಂದು ಮತ್ತು ನಾಳೆ ನೀವು ಉಚಿತವಾಗಿ Netflix


ಠೇವಣಿಗೆ ಬಡ್ಡಿ ಎಷ್ಟು ಸಿಗುತ್ತೆ?: ಪ್ರಸ್ತುತ ಈ ವಾರ್ಷಿಕ ಠೇವಣಿಗೆ 8.4ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ವಾರ್ಷಿಕವಾಗಿ ಗರಿಷ್ಠ ಠೇವಣಿ 45 ಲಕ್ಷವನ್ನು ಹೂಡಿದ್ದರೆ, ಖಾತೆ ಮೆಚ್ಯೂರ್​ ಆಗುವ ಸಂದರ್ಭದಲ್ಲಿ 73 ಲಕ್ಷವನ್ನು ಪಡೆಯಬಹುದು. ಅಂದರೆ. 15 ವರ್ಷ 45 ಲಕ್ಷ ಹೂಡಿಕೆ ಮಾಡಿದ್ದರೆ, 21ನೇ ವರ್ಷಕ್ಕೆ 73 ಲಕ್ಷ ಪಡೆಯಬಹುದು.


Debit & Credit Card Payment Rule: ನೂತನ ವರ್ಷದಿಂದ ಈ ನಿಯಮದಲ್ಲಿ ದೊಡ್ಡ ಬದಲಾವಣೆ, ನಿಮಗೂ ತಿಳಿದಿರಲಿ


ಖಾತೆ ನಿರ್ವಹಣೆ ಹೇಗೆ?: ಈ ಖಾತೆಯನ್ನು ತಂದೆ ಅಥವಾ ಪೋಷಕರು ಮಾತ್ರ ತೆರೆಯಬಹುದು.


ರೋಶ್ನಿ ನಾಡರ್ ಮಲ್ಹೋತ್ರಾಗೆ ಭಾರತದ ಅಗ್ರ ಶ್ರೀಮಂತ ಮಹಿಳೆಯ ಪಟ್ಟ....!


ಒಂದು ವೇಳೆ ಈ ಖಾತೆದಾರರು ಸಾವನ್ನಪ್ಪಿದರೆ, ಸಾವಿನ ಪ್ರಮಾಣ ಸಲ್ಲಿಕೆ ಮಾಡಿ ಖಾತೆ ಮುಚ್ಚಬೇಕು. ಈ ವೇಳೆ ಬಡ್ಡಿ ಸಮೇತ ಠೇವಣಿ ಹಣ ಹೆಣ್ಣುಮಗುವಿನ ತಂದೆ ಅಥವಾ ಪೋಷಕರಿಗೆ ಸೇರಲಿದೆ. ಒಂದು ವೇಳೆ ತಂದೆ ಅಥವಾ ಪೋಷಕರು ಸಾವನ್ನಪ್ಪಿದರೆ ಉಳಿತಾಯಕ್ಕೆ ತಕ್ಕ ಬಡ್ಡಿ ಪಡೆಯಬಹುದು.


ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡ್ರಾ? EMI ತೀರಿಸಲು ಸಹಾಯ ಮಾಡುತ್ತಿವೆ Insurance ಕಂಪನಿಗಳು