ನವದೆಹಲಿ: ಹೊಸ ವರ್ಷದ ಆರಂಭದಿಂದ ಬ್ಯಾಂಕಿಂಗ್ ನಿಯಮಗಳು (Banking Rules) ಗಮನಾರ್ಹವಾಗಿ ಬದಲಾಗುತ್ತಿವೆ.ಸಂಪರ್ಕವಿಲ್ಲದ ಕಾರ್ಡ್ ಪಾವತಿಗಾಗಿ (Contactless Cash Payment) ನಿಯಮಗಳಲ್ಲಿ ಇದು ಪ್ರಮುಖ ಬದಲಾವಣೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹೊಸ ನಿಯಮಗಳನ್ನು ಪ್ರಕಟಿಸಿರುವ ಆರ್ಬಿಐ ಗವರ್ನರ್ (RBI Governer), ಇನ್ಮುಂದೆ ಕಾರ್ಡ್ ಮೂಲಕ ಹಣ ಪಾವತಿಸಲು 'ಪಿನ್ ಕೋಡ್' ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶಾಪಿಂಗ್ ಇತ್ಯಾದಿಗಳಲ್ಲಿ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಇದರ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ-ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕಡಿಮೆ ಆಗಲ್ಲ EMI
ಡೆಬಿಟ್ ಕಾರ್ಡ್ ಪೇಮೆಂಟ್ ಗೆ PIN ಅಗತ್ಯವಿಲ್ಲ
'ಒನ್ ನೇಷನ್ ಒನ್ ಕಾರ್ಡ್' ಯೋಜನೆಯಡಿ ನೀಡಲಾಗುವ ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಮಾಡಲಾಗುವ ಹಣ ಪಾವತಿಗಳಿಗೆ ಈ ಬದಲಾವಣೆಗಳು ಅನ್ವಯಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikant Das) ಹೇಳಿದ್ದಾರೆ. ಯಾವುದೇ ಪಿನ್ ಇಲ್ಲದೆ ಈ ಕಾರ್ಡ್ಗಳಿಂದ 5 ಸಾವಿರ ರೂಪಾಯಿಗಳವರೆಗೆ ಸುಲಭವಾಗಿ ಹಣ ಪಾವತಿಸಬಹುದು. ಪ್ರಸ್ತುತ, ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಪಿನ್ ಇಲ್ಲದೆ 2 ಸಾವಿರ ರೂಪಾಯಿಗಳವರೆಗೆ ಹಣ ಪಾವತಿ ಮಾಡಬಹುದು ಎಂಬುದು ಇಲ್ಲಿ ಗಮನಾರ್ಹ.
ಇದನ್ನು ಓದಿ- ಈ Bank ನ ಡಿಜಿಟಲ್ ವ್ಯವಹಾರಕ್ಕೆ ತಡೆ ನೀಡಿ, Credit Card ಕುರಿತು ಈ ಸಲಹೆ ನೀಡಿದೆ RBI
ಇದುವರೆಗೆ ಈ ನಿಯಮಗಳು ಅನ್ವಯಿಸುತ್ತಿದ್ದವು
ಸಂಪರ್ಕವಿಲ್ಲದ ಹಣ ಪಾವತಿಗೆ ಪ್ರಸ್ತುತ ಗರಿಷ್ಠ ಮಿತಿ 2,000 ರೂ. ಇದೆ. ಒಂದು ದಿನದಲ್ಲಿ 5 ಸಂಪರ್ಕವಿಲ್ಲದ ವಹಿವಾಟುಗಳನ್ನು ಮಾಡಬಹುದು. ಈ ಮೊತ್ತಕ್ಕಿಂತ ಹೆಚ್ಚಿನದನ್ನು ಪಾವತಿಸಲು, ಪಿನ್ ಅಥವಾ ಒಟಿಪಿ ಅಗತ್ಯವಿದೆ. ಆದರೆ ಆರ್ಬಿಐ ನಿಯಮಗಳ ಪ್ರಕಾರ, ಜನವರಿ 1 ರಿಂದ ಸಂಪರ್ಕವಿಲ್ಲದ ಹಣ ಪಾವತಿಯ ಗರಿಷ್ಠ ಮಿತಿ 5 ಸಾವಿರ ರೂ. ಇರಲಿದೆ.
ಇದನ್ನು ಓದಿ- 20 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದ ಆರ್ಬಿಐ
ಸ್ವಯಂಚಾಲಿತವಾಗಿ ಹಣ ಪಾವತಿಯಾಗುತ್ತದೆ
ಸಂಪರ್ಕವಿಲ್ಲದ ಕ್ರೆಡಿಟ್ ಕಾರ್ಡ್ಗಳಲ್ಲಿ ಪಾವತಿಯಲ್ಲಿ ಎರಡು ತಂತ್ರಗಳನ್ನು ಬಳಸಲಾಗುತ್ತದೆ - ನಿಯರ್ ಫೀಲ್ಡ್ ಕಮ್ಯುನಿಕೇಷನ್ (Near Field Communication) ಮತ್ತು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID). ಈ ತಂತ್ರಜ್ಞಾನಗಳನನ್ನು ಹೊಂದಿರುವ ಯಂತ್ರದ ಬಳಿ ಕಾರ್ಡ್ ತಂದಾಗ, ಸ್ವಯಂಚಾಲಿತವಾಗಿ ಹಣ ಪಾವತಿಯಾಗುತ್ತದೆ. ಇದಕ್ಕಾಗಿ ಕಾರ್ಡ್ ಅನ್ನು ಯಂತ್ರದಿಂದ 2 ರಿಂದ 5 ಸೆಂಟಿಮೀಟರ್ ವ್ಯಾಪ್ತಿಯಲ್ಲಿ ಇರಿಸಿ ಹಣ ಪಾವತಿ ಮಾಡಬಹುದು. ಈ ಕಾರ್ಡ್ ಅನ್ನು ಯಾವುದೇ ಯಂತ್ರದಲ್ಲಿ ಸೇರಿಸುವ ಅಥವಾ ಸ್ವೈಪ್ ಮಾಡುವ ಅಗತ್ಯವಿಲ್ಲ. ಪಿನ್ ಅಥವಾ ಒಟಿಪಿ ಅಗತ್ಯವಿಲ್ಲ.
ಇದನ್ನು ಓದಿ-ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?
ಈ ಕಾರಣದಿಂದ ವಿಶೇಷವಾಗಿವೆ ಸಂಪರ್ಕರಹಿತ ಕಾರ್ಡ್ ಗಳು
ಈ ಕಾರ್ಡ್ ಸ್ಮಾರ್ಟ್ ಕಾರ್ಡ್ ನಂತೆ ಕಾರ್ಯನಿರ್ವಹಿಸುತ್ತದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ, ಭಾರತೀಯ ಕಂಪನಿ ರುಪೇ ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಜಾರಿಗೊಳಿಸಿದೆ.
ಇದನ್ನು ಓದಿ- ಮುಂದಿನ ತಿಂಗಳಿನಿಂದ Money Transfer ನಿಯಮದಲ್ಲಾಗಲಿದೆ ಬದಲಾವಣೆ... ನೀವೂ ತಿಳಿದುಕೊಳ್ಳಿ
ಇನ್ಮುಂದೆ ಹೊಸ Rupay ಕಾರ್ಡ್ ಗಳಲ್ಲಿ ಈ ತಂತ್ರಜ್ಞಾನ ಬಳಸಲಾಗುವುದು
ಇನ್ಮುಂದೆ ದೇಶದ ಯಾವುದೇ ಬ್ಯಾಂಕ್ ಗೆ Rupay ಜಾರಿಗೊಳಿಸುವ ನೂತನ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವೈಶಿಷ್ಟ್ಯ ಇರಲಿದೆ. ಇವು ಇತರ ಯಾವುದೇ ವ್ಯಾಲೆಟ್ ಸೇವೆಯಂತೆಯೇ ಕಾರ್ಯ ನಿರ್ವಹಿಸಲಿವೆ. ಈ ತಂತ್ರಜ್ಯಾನದ ಸಹಾಯದಿಂದ ಕಾರ್ಡ್ ಹೊಂದಿದವರು ವ್ಯವಹಾರಕ್ಕಾಗಿ ಕಾರ್ಡ್ ಸ್ವೈಪ್ ಮಾಡುವ ಆವಶ್ಯಕತೆ ಇಲ್ಲ. PoS ಯಂತ್ರದ ಮೇಲೆ ಕಾರ್ಡ್ ಇಟ್ಟರೆ ಸಾಕು, ಹಣ ಸ್ವಯಂಚಾಲಿತವಾಗಿ ಪಾವತಿಯಾಗಲಿದೆ.