Swavalambi Sarathi Scheme: ವಾಹನ ಖರೀದಿಸಲು ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ ನೀಡುವ ಸ್ವಾವಲಂಬಿ ಸಾರಥಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಯುವ ಜನರು ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸದೃಢರಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದು ನಾವು ಈ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.  


COMMERCIAL BREAK
SCROLL TO CONTINUE READING

ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ಪಡೆದ ಟ್ಯಾಕ್ಸಿ /ಗೂಡ್ಸ್ ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ.ವರೆಗೆ, ಪ್ರಯಾಣಿಕ ಆಟೋ ರಿಕ್ಷಾ ಖರೀದಿಸಲು ಗರಿಷ್ಠ 75 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಈ ಯೋಜನೆಯ ವಿವರ ಹೀಗಿದೆ ನೋಡಿ.  


ಇದನ್ನೂ ಓದಿ: ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶವಿಲ್ಲ


ಅರ್ಜಿ ಸಲ್ಲಿಸಲು ಯಾರು ಅರ್ಹರು?


  • ಹಿಂದುಳಿದ ವರ್ಗ ಪ್ರ-1, 2A, 2B, 3A ಮತ್ತು 3B

  • 21 ರಿಂದ 45 ವರ್ಷದ ಒಳಗಿನ ನಿರುದ್ಯೋಗಿ ಯುವಕರಾಗಿರಬೇಕು

  • ಕುಟುಂಬ ವಾರ್ಷಿಕ ಆದಾಯವು 98 ಸಾವಿರದಿಂದ 1.2 ಲಕ್ಷ ರೂಪಾಯಿಯ ಒಳಗೆ ಇರಬೇಕು.

  • ವಾಹನದ ಪರವಾನಗಿ: ಲಘುವಾಹನ /ಲೈಟ್

  • ವಾಹನದ ವಿವರಗಳು: ಟೂರಿಸ್ಟ್ ಅಥವಾ ಗೂಡ್ಸ್ ವಾಹನಗಳು


ಸಾಲದ ವಿವರ


  • ಘಟಕ ವೆಚ್ಚ: ಶೇ.50ರಷ್ಟು

  • ಸಹಾಯಧನ: ಗರಿಷ್ಠ 3 ಲಕ್ಷ ರೂ.ಗಳು

  • 4 ಚಕ್ರ ವಾಹನ ಖರೀದಿಗೆ: ಹಳದಿ ಬೋರ್ಡ್ ಕಡ್ಡಾಯ


ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು


ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‌ಬುಕ್ ಮತ್ತು ಇತ್ತೀಚಿನ ಭಾವಚಿತ್ರ


ಯಾವ ನಿಗಮದಲ್ಲಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದು?


ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ & ಅರೆ- ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ.


ಈ ಯೋಜನೆಯ ಸೌಲಭವನ್ನು ಪಡೆಯಲು ಇಚ್ಛಿಸುವವರು ನಿಮ್ಮ ಹತ್ತಿರದ ಗ್ರಾಂ ಒನ್, ಕರ್ನಾಟಕ ಒನ್ ಅಥವಾ ಆನ್ಲೈನ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್: https://sevasindhu.karnataka.gov.in/Sevasindhu/Kannada


ಇದನ್ನೂ ಓದಿ: ವಕ್ಫ್‌ ಬೋರ್ಡ್‌ ತಿದ್ದುಪಡಿ ವಿಧೇಯಕ ಮಂಡನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.