Cibil Score: ಸಾಲವನ್ನು ತೆಗೆದುಕೊಳ್ಳಲು ಹೋದಾಗ ಬ್ಯಾಂಕ್‌ಗಳು ಮೊದಲು  ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿದೆ ಎಂಬುದನ್ನು ಪರಿಶೀಲಿಸುತ್ತವೆ. ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್  ರಿಪೋರ್ಟ್ ಕಾರ್ಡ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಗ್ರಾಹಕರ ಹಿಂದಿನ ಸಾಲಗಳು, ಅದರ ಮರುಪಾವತಿಯಂತಹ ಇತಿಹಾಸವನ್ನು ಒಳಗೊಂಡಿರುತ್ತದೆ. 


COMMERCIAL BREAK
SCROLL TO CONTINUE READING

ಉತ್ತಮ ಸಿಬಿಲ್ ಸ್ಕೋರ್ ಎಷ್ಟಿರಬೇಕು? 
ಸಿಬಿಲ್ ಸ್ಕೋರ್ (CIBIL Score) ಅನ್ನು 300 ರಿಂದ 900 ರ ನಡುವೆ ನಿರ್ಧರಿಸಲಾಗುತ್ತದೆ. ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದಿದ್ದಾಗ ಅದು ಸಿಬಿಲ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಕೆಟ್ಟ ಸಿಬಿಲ್ ಸ್ಕೋರ್ ಎನ್ನಲಾಗುತ್ತದೆ. 


ಇದನ್ನೂ ಓದಿ- PF ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ !


ಸಿಬಿಲ್ ಸ್ಕೋರ್ ಹದಗೆಟ್ಟಿದ್ದರೆ, ಬ್ಯಾಂಕ್‌ನಿಂದ ಸಾಲ (Banking Loan) ಪಡೆಯುವುದು ತುಂಬಾ ಕಷ್ಟವಾಗುತ್ತದೆ. ಒಂದೊಮ್ಮೆ ಸಾಲ ಪಡೆದರೂ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. 


ಕೆಲವು ತಪ್ಪುಗಳಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಹದಗೆಟ್ಟಿದ್ದರೆ, ಅದನ್ನು ಸುಧಾರಿಸಲು ನೀವು ಬಯಸಿದರೆ, ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಒಂದು ದಿನದ ಕೆಲಸವಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹದಗೆಟ್ಟ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಲು ಆರು ತಿಂಗಳಿನಿಂದ ಒಂದು ವರ್ಷ ಬೇಕಾಗಬಹುದು. ಆದಾಗ್ಯೂ, ಕ್ರೆಡಿಟ್ ಸ್ಕೋರ್ ತುಂಬಾ ಕಡಿಮೆಯಾಗಿದ್ದರೆ ಇದನ್ನು ಸುಧಾರಿಸಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. 


ಇದನ್ನೂ ಓದಿ- ಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನ


ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸಬಹುದು. ಅವುಗಳೆಂದರೆ... 
* ಯಾವುದೇ ಲೋನ್ ಇಎಂಐ ಅನ್ನು ಸರಿಯಾದ ಸಮಯಕ್ಕೆ ಪಾವತಿಸಿ. 
* ನೀವು ಕ್ರೆಡಿಟ್ ಸ್ಕೋರ್ ಬಳಕೆದಾರರಾಗಿದ್ದರೆ ಅದರ ಗರಿಷ್ಠ ಮಿತಿಯ 30 ಪ್ರತಿಶತಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. 
* ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು  ಪಾವತಿಸಲು ಮರೆಯಬೇಡಿ. 
* ಅಸುರಕ್ಷಿತ ಸಾಲಗಳನ್ನು ತೆಗೆದುಕೊಳ್ಳದೆ ಇರುವುದು. 
* ಯಾರೊಬ್ಬರ ಸಾಲದ ಖಾತರಿದಾರರಾಗುವಾಗ ಚಿಂತನಶೀಲರಾಗಿ ನಿರ್ಧಾರ ಕೈಗೊಳ್ಳುವುದು. 
* ಜಂಟಿ ಸಾಲ ತೆಗೆದುಕೊಳ್ಳುವಾಗ ನೀವು ಯಾರೊಂದಿಗೆ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿವಹಿಸುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.