ಮುಂಬೈ:  ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಒಂದು ತಿಂಗಳವರೆಗೆ ಹಣ ವಿತ್ ಡ್ರಾ ಮಿತಿಯನ್ನು ₹ 25,000ಕ್ಕೆ ನಿಗದಿಪಡಿಸಿದೆ. ಬ್ಯಾಂಕ್​ನ ಆರ್ಥಿಕ ಪರಿಸ್ಥಿತಿ ನಿರಂತರವಾಗಿ ಕುಸಿತ ಕಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ (Central Government) ಸ್ಪಷ್ಟಪಡಿಸಿದೆ. ಈ ಹಿಂದೆ ರಿಸರ್ವ್ ಬ್ಯಾಂಕ್ ಪಿಎಂಸಿ ಬ್ಯಾಂಕ್ ಮೇಲೆ ಕೂಡ ಇಂತಹ ನಿಷೇಧ ಹೇರಿತ್ತು. 


COMMERCIAL BREAK
SCROLL TO CONTINUE READING

ಹೌದು... ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ ಬ್ಯಾಂಕಿನ ಮೇಲೆ ಒಂದು ತಿಂಗಳ ತಾತ್ಕಾಲಿಕ ನಿಷೇಧವನ್ನು ವಿಧಿಸಲಾಗಿದೆ. ಇದನ್ನು ನವೆಂಬರ್ 17 ರಿಂದ ಡಿಸೆಂಬರ್ 16 ರವರೆಗೆ ಜಾರಿಗೆ ತರಲಾಗಿದೆ.  ಈ ಆದೇಶವನ್ನು ಎಬಿಐ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 


Lakshmi Vilas Bank) ಆರ್ಥಿಕ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆಯ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣದ ಪಾವತಿ ಮತ್ತು ಮದುವೆ ವೆಚ್ಚಗಳಂತಹ ಉದ್ದೇಶಗಳಿಗಾಗಿ ಠೇವಣಿದಾರರಿಗೆ ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ ₹ 25,000 ಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.


ಆರ್‌ಬಿಐ ಮಹತ್ವದ ಹೆಜ್ಜೆ: ಜನವರಿ 1ರಿಂದ Cheque ಮೂಲಕ ಪಾವತಿ ನಿಯಮಗಳಲ್ಲಿ ಬದಲಾವಣೆ


ಬ್ಯಾಂಕಿನ ಆರ್ಥಿಕ ಸ್ಥಿತಿ ಹದಗೆಡುತ್ತಿರುವುದರಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ ಬ್ಯಾಂಕ್​ನ  ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಲಾಗಿದ್ದು, ಕೆನರಾ ಬ್ಯಾಂಕ್​ನ ಮಾಜಿ ನಾನ್-ಎಕ್ಸಿಕ್ಯುಟಿವ್ ಚೇರ್ಮನ್ ಟಿ.ಎನ್. ಮನೋಹರನ್ ಅವರನ್ನು ಲಕ್ಷ್ಮಿ ವಿಲಾಸ್ ಬ್ಯಾಂಕ್​ನ ನಿರ್ವಾಹಕರಾಗಿ ನೇಮಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. 


ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ


ಠೇವಣಿದಾರರ ಮತ್ತು ಹಣಕಾಸು ಮತ್ತು ಬ್ಯಾಂಕಿಂಗ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 
ವಿಶ್ವಾಸಾರ್ಹ ಪುನರುಜ್ಜೀವನ ಯೋಜನೆಯ ಅನುಪಸ್ಥಿತಿಯಲ್ಲಿ, ಆಸಕ್ತಿಯನ್ನು ರಕ್ಷಿಸುವ ಸಲುವಾಗಿ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ನಿಷೇಧವನ್ನು ವಿಧಿಸಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬೇರೆ ಪರ್ಯಾಯಗಳಿಲ್ಲ ಎಂದು ಆರ್‌ಬಿಐ  (RBI) ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.