Tata Car Sales In 2022: 2022ರಲ್ಲಿ ಭಾರತೀಯ ಕಾರು ತಯಾರಕ ಕಂಪನಿಯೊಂದು ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ, ಹ್ಯುಂಡೈ ಸೇರಿದಂತೆ ಹಲವು ದೊಡ್ಡ ದೊಡ್ಡ ಕಂಪನಿಗಳ ನಿದ್ದೆಗೆಡಿಸಿದೆ. 1998 ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ ಟಾಟಾ ಮೋಟಾರ್ಸ್ ಕಳೆದ ವರ್ಷ 2022ರಲ್ಲಿ ಅರ್ಧ ಮಿಲಿಯನ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ,  2021 ರಲ್ಲಿ 3.31 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್, ಕಳೆದ ವರ್ಷ 5,26,798 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಕಂಪನಿಯ ಕಾರುಗಳ ಮಾರಾಟ ಸುಮಾರು 59% ಹೆಚ್ಚಳವಾಗಿದೆ. 2022ರಲ್ಲಿ ಟಾಟಾ ಮೋಟಾರ್ಸ್ ಕಂಪನಿಯ  ನೆಕ್ಸಾನ್, ಪಂಚ್, ಟಿಯಾಗೊ, ಎಲೆಕ್ಟ್ರಿಕ್ ಮಾದರಿಗಳು ಮತ್ತು ಸಿಎನ್‌ಜಿ ಮಾದರಿಗಳು ಹೆಚ್ಚು ಮಾರಾಟವಾದ ಕಾರುಗಳಾಗಿವೆ. ಇವುಗಳಲ್ಲಿ, ಟಾಟಾದ ನೆಕ್ಸಾನ್ ಅತ್ಯಧಿಕ ಮಾರಾಟವಾದ ಕಾರ್ ಆಗಿದೆ. 


ಇದನ್ನೂ ಓದಿ- ಮಾರ್ಚ್ ಅಂತ್ಯದವರೆಗೆ ಈ ಕೆಲಸ ಮಾಡದಿದ್ದರೆ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಪ್ಯಾನ್ ಕಾರ್ಡ್


ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್) ಶೈಲೇಶ್ ಚಂದ್ರ, ಕಂಪನಿಯು ಕಳೆದ ವರ್ಷ 2022ರಲ್ಲಿ ಕಾರು ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ವರ್ಷವೂ ಉತ್ತಮ ಮಾರಾಟ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕಾರುಗಳಲ್ಲಿ ಆಂತರಿಕ ದಹನಕಾರಿ ಎಂಜಿನ್ (ಐಸಿಇ) ಮಾದರಿಗಳಿಗೆ ಉತ್ತಮ ಬೇಡಿಕೆಯಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಸಿಎನ್‌ಜಿ ಟ್ರಿಮ್‌ಗಳು ಈ ವರ್ಷ ಉತ್ತಮ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.


ಕಳೆದ ವರ್ಷ ಟಾಟಾ ಮೋಟಾರ್ಸ್ ಸುಮಾರು 43,000 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು (ನೆಕ್ಸಾನ್ ಇವಿ ಪ್ರೈಮ್, ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಟಿಗೋರ್ ಇವಿ ಸೇರಿದಂತೆ) ಮಾರಾಟ ಮಾಡಿದೆ. ಈ ವರ್ಷ ಟಾಟಾ ತನ್ನ ಪಂಚ್ ಇವಿ ಮತ್ತು ಟಿಯಾಗೊ ಇವಿ ಬ್ಲಿಟ್ಜ್ ಬಿಡುಗಡೆಯೊಂದಿಗೆ ಇವಿ ಉತ್ಪನ್ನ ಪೋರ್ಟ್ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲು ಶ್ರಮಿಸಲಿದೆ ಎಂದವರು ತಿಳಿಸಿದರು.


ಇದನ್ನೂ ಓದಿ- Best Mileage Car: 35 ಕಿಮೀ ಮೈಲೇಜ್, ಅದ್ಭುತ ವೈಶಿಷ್ಟ್ಯಗಳು, ಬೆಲೆ ಕೇವಲ 5.25 ಲಕ್ಷ


ಗಮನಾರ್ಹವಾಗಿ, ಟಾಟಾ ಮೋಟಾರ್ಸ್ ಮಾತ್ರವಲ್ಲದೆ, ದೇಶದ ಅತಿ ದೊಡ್ಡ ಕಾರು ಕಂಪನಿಗಳಾದ  ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ 2022ರಲ್ಲಿ ಮಾರುತಿಯ ಕಂಪನಿಯ ಕಾರು ಮಾರಾಟದಲ್ಲಿ 23% ಹೆಚ್ಚಳವಾಗಿದ್ದರೆ ಹುಂಡೈ ಕಂಪನಿಯ ಕಾರುಗಳ ಮಾರಾಟದಲ್ಲಿ 9.4% ಹೆಚ್ಚಳವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.