Ratan Tata: ದೇಶದ ಅತಿದೊಡ್ಡ ಕೈಗಾರಿಕೋದ್ಯಮಿ, ರತನ್ ನಾವಲ್ ಟಾಟಾ  ಅವರ ಕಂಪನಿ ಟಾಟಾ ಗ್ರೂಪ್ ವಿದ್ಯುತ್ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಇದಕ್ಕಾಗಿ ಯೋಜನೆಯನ್ನೂ ಸಹ ರೂಪಿಸಿದೆ. ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹವಾಗಿರುವ ಟಾಟಾ ಗ್ರೂಪ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ (Renewable Energy Sector) ಹೂಡಿಕೆ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 20,000 ಕೋಟಿ ರೂ.ಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಪ್ರತಿ ಗಂಟೆಗೆ ಸುಮಾರು 2.28 ಕೋಟಿ ರೂ.: 
ಹೌದು, ರತನ್ ಟಾಟಾ ಅವರ ಟಾಟಾ ಪವರ್ (Tata Power) ಈಗ ತನ್ನ ಬಹುಪಾಲು ಬಂಡವಾಳ ವೆಚ್ಚವನ್ನು ನವೀಕರಿಸಬಹುದಾದ ಇಂಧನದಲ್ಲಿ ಖರ್ಚು ಮಾಡಲು ಸಜ್ಜಾಗಿದ್ದು, ಇದಕ್ಕಾಗಿ  2024-25ರ ಆರ್ಥಿಕ  ವರ್ಷದಲ್ಲಿ 20,000 ಕೋಟಿ ರೂ.ಗಳ ( ಪ್ರತಿ ಗಂಟೆಗೆ ಸುಮಾರು 2.28 ಕೋಟಿ ರೂ.) ಯೋಜನೆಯನ್ನು ಕಂಪನಿ ಸಿದ್ಧಪಡಿಸಿದೆ. ಟಾಟಾ ಗ್ರೂಪ್ನ ಈ ಬೃಹತ್ ಯೋಜನೆಯು ದೇಶದ ಘಟಾನುಘಟಿ ಉದ್ಯಮಿಗಳಾಗಿರುವ ಮುಖೇಶ್ ಅಂಬಾನಿ (Mukesh Ambani) ಮತ್ತು ಗೌತಮ್ ಅದಾನಿಗೆ (Gautam Adani)  ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  


ಕಂಪನಿಯ 105 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಉದ್ದೇಶಿಸಿ ಮಾತನಾಡಿದ ಟಾಟಾ ಪವರ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ (Power Chairman Natarajan Chandrasekaran), "ಟಾಟಾ ಪವರ್ 2024-25ರ ಹಣಕಾಸು ವರ್ಷದಲ್ಲಿ 20,000 ಕೋಟಿ ರೂ. ಕ್ಯಾಪೆಕ್ಸ್ ಅನ್ನು ಹೂಡಿಕೆ ಮಾಡಲು ಯೋಜಿಸಿದೆ. ಕಳೆದ ಹಣಕಾಸು ವರ್ಷಕ್ಕಿಂತ ಈ ಮೊತ್ತ ದುಪ್ಪಟ್ಟಾಗಿದೆ. ಇದರ ಹೆಚ್ಚಿನ ಭಾಗವು ಕಂಪನಿಯ ನವೀಕರಿಸಬಹುದಾದ ಇಂಧನ ಬಂಡವಾಳವನ್ನು ವೇಗಗೊಳಿಸಲು ಮತ್ತು ಪ್ರಸರಣ ಮತ್ತು ವಿತರಣಾ ವ್ಯವಹಾರಗಳಿಗೆ ಸಮತೋಲನವನ್ನು ನೀಡುತ್ತದೆ. ಕಂಪನಿಯು ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳಲ್ಲಿ ಭಾಗವಹಿಸುವಿಕೆಯನ್ನು ಅನ್ವೇಷಿಸುತ್ತದೆ" ಎಂದು ತಮ್ಮ ಕಾರ್ಯತಂತ್ರವನ್ನು ವಿವರಿಸಿದರು. 


ಇದನ್ನೂ ಓದಿ- NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು


ಇತರ ರಾಜ್ಯಗಳಲ್ಲಿನ ವಿತರಣಾ ವಿಸ್ತರಣೆ ಅವಕಾಶಗಳ ಲಾಭ ಪಡೆಯಲು ಟಾಟಾ ಪವರ್ ಹೂಡಿಕೆ ಮಾಡಲಿದೆ ಎಂದು ಷೇರುದಾರರ ಸಭೆಯಲ್ಲಿ ಟಾಟಾಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಮಾಹಿತಿ ನೀಡಿದರು. 


ಅಂಬಾನಿ-ಅದಾನಿಗೆ ಹೆಚ್ಚಾಗಲಿದೆ  ಟೆನ್ಷನ್: 
ಇನ್ನೂ ಟಾಟಾ ಪವರ್‌ನ ಈ ಮಹತ್ವದ ಹೆಜ್ಜೆಯು ರಿಲಯನ್ಸ್ (Reliance) ಮತ್ತು ಅದಾನಿ ಗ್ರೂಪ್ (Adani Group) ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಾಸ್ತವವಾಗಿ, ಮುಖೇಶ್ ಅಂಬಾನಿಯವರ ರಿಲಯನ್ಸ್ ಮತ್ತು ಗೌತಮ್ ಅದಾನಿ ಅವರ  ಅದಾನಿ ಪವರ್ ಕಂಪನಿಗಳು ಕೂಡ ಈ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಿವೆ. ಇದೀಗ ಈ ವಲಯದಲ್ಲಿ ಟಾಟಾ ಪವರ್ ಹೂಡಿಕೆಯನ್ನು ಹೆಚ್ಚಿಸುವುದರಿಂದ ಮೂವರ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. 


ಇದನ್ನೂ ಓದಿ- credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯ


ರಿಲಯನ್ಸ್ ಇಂಡಸ್ಟ್ರೀಸ್ ಹಸಿರು ಶಕ್ತಿಯಲ್ಲಿ $ 75 ಶತಕೋಟಿ ಹೂಡಿಕೆಯನ್ನು ಘೋಷಿಸಿದೆ, ಆದರೆ ಅದಾನಿ ಗ್ರೂಪ್ 2030 ರ ವೇಳೆಗೆ ಹಸಿರು ಇಂಧನ ಕ್ಷೇತ್ರದಲ್ಲಿ 2.3 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದೆ. ಇದೀಗ ಈ ವಲಯದಲ್ಲಿ ಟಾಟಾ ಹೂಡಿಕೆ ಹೆಚ್ಚುತ್ತಿದ್ದು, ಈ ಮೂಲಕ ಅಂಬಾನಿ-ಅದಾನಿ ಕಂಪನಿಗಳಿಗೆ ಭಾರೀ ಪೈಪೋಟಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.