Tata Motors: ಟಾಟಾ ಮೋಟಾರ್ಸ್‌ನ ಪ್ರಮುಖ ಎಲೆಕ್ಟ್ರಿಕ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ!

Tata Motors EV offers: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ 10-30 ಸಾವಿರ ರೂ.ದಷ್ಟು ಆಫರ್ ನೀಡಲಾಗುತ್ತಿದೆ. ಪಂಚ್ EV ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 10.99-15.49 ಲಕ್ಷ ರೂ. ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 421KM ಮೈಲೇಜ್ ನೀಡುತ್ತದೆ.

Tata Motors EV offerʼs: ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ EV ಕಾರುಗಳ ಮೇಲೆ ಜುಲೈ ಅವಧಿಯ ಆಫರ್‌ಗಳನ್ನು ಘೋಷಿಸಿದೆ. ನೆಕ್ಸಾನ್ EV, ಟಿಯಾಗೋ EV ಮತ್ತು ಪಂಚ್ EV ಕಾರುಗಳ ಮೇಲೆ ಹೊಸ ಆಫರ್‌ಗಳು ಲಭ್ಯವಿದೆ. ಈ ಆಫರ್‌ಗಳಲ್ಲಿ ಗ್ರಾಹಕರು ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ & ಕಾರ್ಪೊರೇಟ್ ಆಫರ್ ಜೊತೆ ಗ್ರೀನ್ ಬೋನಸ್ ಸಹ ಪಡೆಯಬಹುದು. ಟಾಟಾ ಮೋಟಾರ್ಸ್ ಇದುವರೆಗೆ 20 ಲಕ್ಷಕ್ಕೂ SUV ಕಾರುಗಳನ್ನು ಮಾರಾಟ ಮಾಡಿದೆ. ಇದೀಗ ಟಾಟಾ ಮೋಟಾರ್ಸ್‌ ತನ್ನ ಎಲೆಕ್ಟ್ರಿಕ್ SUV ಮಾದರಿಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಟಾಟಾ ಮೋಟಾರ್ಸ್‌ನ ಆಫರ್‌ ಪೈಕಿ ನೆಕ್ಸಾನ್ EV ಖರೀದಿಯ ಮೇಲೆ ಒಟ್ಟು 1.30 ಲಕ್ಷ ರೂ.ವರೆಗೆ ಆಫರ್ ನೀಡುತ್ತಿದೆ. ಇದರಲ್ಲಿ ಗ್ರಾಹಕರು 70 ಸಾವಿರ ರೂ.ವರೆಗೆ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದು. ನೆಕ್ಸಾನ್ ಕಾರಿನ ಎಂಪವರ್ಡ್ ಪ್ಲಸ್ LR ಮತ್ತು ಎಂಪವರ್ಡ್ NR ಡಾರ್ಕ್ ಆವೃತ್ತಿಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ನೆಕ್ಸಾನ್ ಕಾರು ಎಕ್ಸ್ ಶೋರೂಂ ಪ್ರಕಾರ 14.49 ಲಕ್ಷ ರೂ.ನಿಂದ 19.49 ಲಕ್ಷ ರೂ. ಬೆಲೆ ಹೊಂದಿದೆ. ಈ ಹೊಸ EV ಕಾರಿನಲ್ಲಿ 30kWh ಮತ್ತು 40.5kWh ಬ್ಯಾಟರಿ ಆಯ್ಕೆಗಳಿದ್ದು, ಇವು ಪ್ರತಿ ಚಾರ್ಜ್‌ಗೆ 325 ರಿಂದ 456KM ಮೈಲೇಜ್ ನೀಡುತ್ತವೆ.

2 /4

ನೆಕ್ಸಾನ್ EV ಬಳಿಕ ಟಾಟಾ ಕಂಪನಿಯು ಟಿಯಾಗೋ EV ಕಾರಿನ ಮೇಲೂ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ. ಟಿಯಾಗೋ EV ಖರೀದಿಯ ಮೇಲೆ 10 ಸಾವಿರದಿಂದ 50 ಸಾವಿರ ರೂ.ವರೆಗೆ ಆಫರ್ ನೀಡಲಾಗುತ್ತಿದೆ. ಇದರಲ್ಲಿ ಗ್ರಾಹಕರು ಗ್ರೀನ್ ಬೋನಸ್ ಸಹ ಪಡೆಯಬಹುದು. ಇದು ಎಕ್ಸ್ ಶೋರೂಂ ಪ್ರಕಾರ 7.99 ಲಕ್ಷದಿಂದ 11.89 ಲಕ್ಷ ರೂ. ಬೆಲೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ 315KM ಮೈಲೇಜ್ ನೀಡುತ್ತದೆ. 

3 /4

ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ ಕಾರು 19.2kWh & 24kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿನ ಬೇಸ್ ಆವೃತ್ತಿಗಳಿಗೆ ಕಡಿಮೆ ಆಫರ್ ನೀಡಲಾಗಿದೆ. ಅದರಂತೆ ಟಾಪ್ ಎಂಡ್ ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದ್ದು, ಇದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

4 /4

ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ 10 ಸಾವಿರದಿಂದ 30 ಸಾವಿರ ರೂ.ದಷ್ಟು ಆಫರ್ ನೀಡಲಾಗುತ್ತಿದೆ. ಪಂಚ್ EV ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 10.99 ಲಕ್ಷದಿಂದ 15.49 ಲಕ್ಷ ರೂ. ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 421KM ಮೈಲೇಜ್ ನೀಡುತ್ತದೆ.