ನವದೆಹಲಿ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಹಬ್ಬದ ಉತ್ಸಾಹವನ್ನು ದ್ವಿಗುಣಗೊಳಿಸುವ ಆಫರ್ ಪ್ರಕಟಿಸಿದೆ. ಟಾಟಾ ಮೋಟಾರ್ಸ್ 'ಭಾರತದ ಎರಡನೇ ದೀಪಾವಳಿ' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಸಣ್ಣ ವಾಣಿಜ್ಯ ವಾಹನ (ಎಸ್‌ಸಿವಿ) ಮತ್ತು ಪಿಕ್-ಅಪ್ ಶ್ರೇಣಿಯ  Tata Ace, Tata Yodha  ಮತ್ತು ಟಾಟಾ ಇಂಟ್ರಾ (Tata Intra) ಗ್ರಾಹಕರಿಗೆ ಆಶ್ವಾಸಿತ ಉಡುಗೊರೆಗಳ ಜೊತೆಗೆ ಅದೃಷ್ಟದ ಡ್ರಾವನ್ನು ಪ್ರಯತ್ನಿಸಲು ಅವಕಾಶ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಟಾಟಾದ ಬಂಪರ್ ಪ್ರಸ್ತಾಪವು ಗೋಲ್ಡ್ ವೋಚರ್ ಗಳಿಂದ ಎಲ್ಇಡಿ ಟಿವಿಗಳು (LED TV), ವಾಷಿಂಗ್ ಮಿಷನ್, ಮೊಬೈಲ್ ಫೋನ್ಗಳು ಮತ್ತು ಫ್ಲ್ಯೂ ವೋಚರ್ ಗಳವರೆಗೆ ಉಡುಗೊರೆಗಳನ್ನು ಒಳಗೊಂಡಿದೆ. ಈ ಬಂಪರ್ ಕೊಡುಗೆ 30 ನವೆಂಬರ್ 2020 ರವರೆಗೆ ಮಾನ್ಯವಾಗಿರುತ್ತದೆ.


ನಿಮ್ಮ ಖಾತೆಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಏಕೆ ಇಡಬಾರದು?


ಟಾಟಾ ಏಸ್ 15 ವರ್ಷಗಳನ್ನು ಪೂರೈಸುತ್ತದೆ:
ಟಾಟಾ ಏಸ್‌ (Tata Ace) ಮಾರುಕಟ್ಟೆಗೆ ಲಗ್ಗೆಯಿಟ್ಟು 15 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ಅಭಿಯಾನವನ್ನು ಘೋಷಿಸಲಾಗಿದೆ. ಇಷ್ಟು ವರ್ಷಗಳ ಪ್ರಯಾಣದಲ್ಲಿ ಎಸ್‌ಸಿವಿ ಯ 22 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಟಾಟಾ ಮೋಟಾರ್ಸ್ (Tata Motors) ತನ್ನ ಸಂಪೂರ್ಣ ಶ್ರೇಣಿಯ ಬಿಎಸ್ 6 ವಾಹನಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ ಎಂದು ಹೇಳಿದರು. 


ವಯಸ್ಕರು-ಮಕ್ಕಳ ಸೇಫ್ಟಿಗಾಗಿ ಭಾರತೀಯ ರಸ್ತೆಗಳಲ್ಲಿ ಸುರಕ್ಷಿತವಾದ 7 ಕಾರುಗಳಿವು


ಈಗಾಗಲೇ 50 ಸಾವಿರಕ್ಕೂ ಹೆಚ್ಚು ಬಿಎಸ್ 6 ಎಸ್‌ಸಿವಿಗಳು ರಸ್ತೆಗಳಲ್ಲಿವೆ. ಹೊಸ ಶ್ರೇಣಿಯು ಇತ್ತೀಚಿನ ತಂತ್ರಜ್ಞಾನ, ಹೆಚ್ಚು ಆರಾಮದಾಯಕವಾದ ಕ್ಯಾಬಿನ್‌ಗಳು, ಹೆಚ್ಚಿನ ಇಂಧನ ದಕ್ಷತೆ ಮತ್ತು ಒಟ್ಟಾರೆ ಕಡಿಮೆ ವೆಚ್ಚದಾಯಕವಾಗಿದೆ ಎಂದು ಕಂಪನಿ ತಿಳಿಸಿದೆ.


ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್-ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ


ಟಾಟಾ ಮೋಟಾರ್ಸ್‌ನ ವಾಣಿಜ್ಯ ವ್ಯವಹಾರ ಘಟಕದ ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ರಾಜೇಶ್ ಕೌಲ್ ಮಾತನಾಡಿ, ಟಾಟಾ ಮೋಟಾರ್ಸ್ ತನ್ನ ಗ್ರಾಹಕರ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡುವ ಮೂಲಕ ಯಾವಾಗಲೂ ತನ್ನ ಪರಂಪರೆಯನ್ನು ನಿರ್ಮಿಸಿಕೊಂಡಿದೆ. ಭಾರತದಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುವ ನಮ್ಮ ನಿರಂತರ ಪ್ರಯತ್ನದಲ್ಲಿ, ಟಾಟಾ ಮೋಟಾರ್ಸ್ ತನ್ನ ಸಂಭಾವ್ಯ ಗ್ರಾಹಕರಿಗೆ ಉತ್ತಮ ವ್ಯವಹಾರಗಳನ್ನು ತರುವ ಗುರಿ ಹೊಂದಿದೆ. 'ಭಾರತದ ಎರಡನೇ ದೀಪಾವಳಿ' ಅಭಿಯಾನಕ್ಕೆ ಕಳೆದ ವರ್ಷ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ವರ್ಷ ಅದನ್ನು ಮರಳಿ ತರಲು ನಮಗೆ ತುಂಬಾ ಸಂತೋಷವಾಗಿದೆ ಎಂದರು.