GST Tax Rate on SUV: ಇತ್ತೀಚೆಗೆ ಮುಕ್ತಾಯವಾದ ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ, ಅನೇಕ ವಸ್ತುಗಳಿಗೆ ಜಿಎಸ್‌ಟಿ ದರಗಳನ್ನು ಶೇ.5 ಅಥವಾ 0 ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ. ವಿಶೇಷವೆಂದರೆ ದೇಶದಲ್ಲಿ ಮಾರಾಟವಾಗುವ ಹಲವು ಎಸ್ ಯುವಿ ಕಾರುಗಳೂ ಈ ಪಟ್ಟಿಯಲ್ಲಿ ಶಾಮೀಲಾಗಿವೆ. ಪ್ರಸ್ತುತ, ಎಸ್‌ಯುವಿ ಕಾರುಗಳಿಗೆ ಶೇ. 20 ರಿಂದ 22 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಎಸ್‌ಯುವಿ ಕಾರುಗಳ ವ್ಯಾಖ್ಯಾನವನ್ನು ಬಿಡುಗಡೆ ಮಾಡಿದ್ದಾರೆ, ಇದು ದೇಶಾದ್ಯಂತ ಅನ್ವಯಿಸಲಿದೆ ಮತ್ತು ಯಾವ ವಾಹನಗಳು ಈ ವ್ಯಾಪ್ತಿಗೆ ಬರುವುದಿಲ್ಲವೋ, ಆ ಕಾರುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಜಿಎಸ್‌ಟಿ ಕೌನ್ಸಿಲ್ ಪ್ರಕಾರ, 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ, 4,000 ಎಂಎಂ ಉದ್ದ ಮತ್ತು 170 ಎಂಎಂಗಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಎಸ್‌ಯುವಿ ಎಂದು ವರ್ಗೀಕರಿಸಲಾಗುತ್ತದೆ. ಪ್ರಸ್ತುತ ಈ ಕಾರುಗಳ ಮೇಲೆ 20-22% GST ಹೊರತುಪಡಿಸಿ, ಅಬಕಾರಿ ಸುಂಕ, ವ್ಯಾಟ್, ರಸ್ತೆ ತೆರಿಗೆ, ಮೋಟಾರು ವಾಹನ ತೆರಿಗೆ ಸೇರಿದಂತೆ ಇತರ ಸುಮಾರು ಶೇ.50 ರಷ್ಟು ಅನ್ವಯವಾಗುತ್ತದೆ. ಆದಾಗ್ಯೂ, ಸಣ್ಣ ಅಥವಾ ಕಾಂಪ್ಯಾಕ್ಟ್ SUV ಖರೀದಿಸಲು ಯೋಚಿಸುತ್ತಿರುವ ಖರೀದಿದಾರರಿಗೆ ಇದು ಒಂದು ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.

ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ನಂತಹ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಗಳು ಇದೀಗ ಹಣಕಾಸು ಸಚಿವೆ ನೀಡಿದ ವ್ಯಾಖ್ಯಾನದ ಆಧಾರದ ಮೇಲೆ ಅಗ್ಗವಾಗಬಹುದು. ಇವುಗಳ ಮೇಲೆ ಕೇವಲ ಶೇ.5 ರಷ್ಟು GST ಅನ್ವಯಿಸುವ ಸಾಧ್ಯತೆ ಇದೆ.


ಇದನ್ನೂ ಓದಿ-Earn Money From Home: ಈ ಅಗ್ಗದ ಮಶೀನ್ ಬಳಸಿ ಮನೆಯಿಂದಲೇ ಲಕ್ಷಾಂತರ ಸಂಪಾದಿಸಿ


ಈ ಕಾರುಗಳ ಇಂಜಿನ್‌ನಿಂದ ಉದ್ದದವರೆಗೆ, ಎಲ್ಲವೂ ಚಿಕ್ಕದಾಗಿದೆ
ಮಾರುತಿ ಸುಜುಕಿ ಬ್ರೆಝಾಕ್ಕೆ ಕುರಿತು ಹೇಳುವುದಾದರೆ, ಇದು 1,462 cc ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ ಮತ್ತು 3,995 mm ಉದ್ದವನ್ನು ಹೊಂದಿದೆ. ಆದರೂ ಗ್ರೌಂಡ್ ಕ್ಲಿಯರೆನ್ಸ್ ವಿಷಯದಲ್ಲಿ ಇದು 200 ಮಿ.ಮೀ. ರಷ್ಟಿದೆ. ಇದೇ ರೀತಿ, ಹ್ಯುಂಡೈ ವೆನ್ಯೂನಲ್ಲಿ 1,493 cc ಡೀಸೆಲ್ ಎಂಜಿನ್ ಮತ್ತು ಎರಡು ಪೆಟ್ರೋಲ್ (998 cc ಮತ್ತು 1,197 cc) ಇಂಜಿನ್ ಲಭ್ಯವಿದೆ. ಇದರ ಉದ್ದ 3,995 ಮಿಮೀ ಮತ್ತು ಗ್ರೌಂಡ್ ಕ್ಲಿಯರೆನ್ಸ್ 190-195 ಮಿಮೀಗಳಷ್ಟಿದೆ. ಕಿಯಾ ಸೋನೆಟ್ ಸಹ ವೆನ್ಯೂನ ರೀತಿಯ ಉದ್ದದೊಂದಿಗೆ ಅದೇ ಎಂಜಿನ್ ಆಯ್ಕೆಗಳನ್ನು ಹೊಂದಿದೆ.


ಇದನ್ನೂ ಓದಿ-Income Tax: ಬಜೆಟ್ ಗೂ ಮುನ್ನವೇ ಪ್ರಕಟಗೊಂಡ ಸಂತಸದ ಸುದ್ದಿ! ಈ ಜನರಿಗೆ ಸಿಗಲಿದೆ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ


ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಕುರಿತು ಹೇಳುವುದಾದರೆ, ನೆಕ್ಸಾನ್ 1,497 ಸಿಸಿ ಡೀಸೆಲ್ ಮತ್ತು 1,199 ಸಿಸಿ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. ಇದರ ಉದ್ದ 3,993mm ಮತ್ತು ಗ್ರೌಂಡ್ ಕ್ಲಿಯರೆನ್ಸ್ 209mm ಆಗಿದೆ. ಇದೇ ರೀತಿ ರೀತಿ, XUV300 ನಲ್ಲಿ 1,497cc ಡೀಸೆಲ್ ಮತ್ತು 1,199cc ಪೆಟ್ರೋಲ್ ಎಂಜಿನ್‌ಗಳನ್ನು ನೀಡಲಾಗಿದೆ. ಇದರ ಉದ್ದ 3,995mm ಮತ್ತು ಗ್ರೌಂಡ್ ಕ್ಲಿಯರೆನ್ಸ್ 180mm ಆಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.