Income Tax: ಬಜೆಟ್ ಗೂ ಮುನ್ನವೇ ಪ್ರಕಟಗೊಂಡ ಸಂತಸದ ಸುದ್ದಿ! ಈ ಜನರಿಗೆ ಸಿಗಲಿದೆ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ

ITR Login: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020 ರ ಕೇಂದ್ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ, ಇದರಲ್ಲಿ ವ್ಯಕ್ತಿಗಳು ಮತ್ತು HUF ಗಳು (ಹಿಂದೂ ಅವಿಭಜಿತ ಕುಟುಂಬಗಳು) ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡದೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುವ ಆಯ್ಕೆ ಇದೆ. ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ವಿಭಿನ್ನವಾಗಿವೆ.  

Written by - Nitin Tabib | Last Updated : Dec 17, 2022, 01:03 PM IST
  • ವಾಸ್ತವದಲ್ಲಿ, ಹೊಸ ತೆರಿಗೆ ಪದ್ಧತಿಯ ದರಗಳನ್ನು ವಯಸ್ಸಿನ ಆಧಾರದ ಮೇಲೆ ವ್ಯತ್ಯಾಸ ಮಾಡಲಾಗಿಲ್ಲ.
  • ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ವಿಭಿನ್ನವಾಗಿವೆ.
Income Tax: ಬಜೆಟ್ ಗೂ ಮುನ್ನವೇ ಪ್ರಕಟಗೊಂಡ ಸಂತಸದ ಸುದ್ದಿ! ಈ ಜನರಿಗೆ ಸಿಗಲಿದೆ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ title=
Income Tax

Income Tax Slab: ಜನರ ಆದಾಯ ಹೆಚ್ಚಾದಂತೆ ಆದಾಯಕ್ಕೆ ಅನುಗುಣವಾಗಿ ಅವರು ತೆರಿಗೆ ಪಾವತಿಸಬೇಕಾಗುತ್ತದೆ. ಜನರ ಆದಾಯವು ಒಂದೊಮ್ಮೆ ತೆರಿಗೆ ವ್ಯಾಪ್ತಿಗೆ ಒಳಪಟ್ಟಾಗ, ಜನರು ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಿವಿಧ ಆದಾಯ ಗುಂಪುಗಳಿಗೆ ಆದಾಯ ತೆರಿಗೆ ಸ್ಲ್ಯಾಬ್‌ಗಳು ವಿಭಿನ್ನವಾಗಿವೆ. ಇದೇ ವೇಳೆ, ಜನರು ಎರಡು ತೆರಿಗೆ ಪದ್ಧತಿಗೆ ಅನುಗುಣವಾಗಿ ಆದಾಯ ತೆರಿಗೆಯನ್ನು ಪಾವತಿಸಬಹುದು. ಇವುಗಳಲ್ಲಿ ಒಂದು ಹಳೆಯ ತೆರಿಗೆ ಪದ್ಧತಿಯಾಗಿದ್ದಾರೆ, ಇನ್ನೊಂದು ಹೊಸ ತೆರಿಗೆ ಪದ್ಧತಿಯಾಗಿದೆ.

ತೆರಿಗೆ ಪದ್ಧತಿ
ಹಣಕಾಸು ಸಚಿವರು 2020 ರ ಕೇಂದ್ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ, ಇದರಲ್ಲಿ ವ್ಯಕ್ತಿಗಳು ಮತ್ತು HUF ಗಳು (ಹಿಂದೂ ಅವಿಭಜಿತ ಕುಟುಂಬಗಳು) ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡದೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುವ ಆಯ್ಕೆ ಇದೆ. ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ವಿಭಿನ್ನವಾಗಿವೆ. ಆದಾಗ್ಯೂ, ತೆರಿಗೆದಾರರ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿದ್ದರೆ, ಅವರು ವಾರ್ಷಿಕವಾಗಿ ರೂ 2.5 ಲಕ್ಷಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ-Ration Card Update: ಶೀಘ್ರದಲ್ಲಿಯೇ ಈ ಜನರ ಪಡಿತರ ಚೀಟಿ ರದ್ದಾಗಲಿದೆ, ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಸರ್ಕಾರ

ಆದಾಯ ತೆರಿಗೆ
60 ವರ್ಷಕ್ಕಿಂತ ಕಡಿಮೆ ವಯಸ್ಸಿನ ತೆರಿಗೆದಾರರು 2.5 ಲಕ್ಷದಿಂದ 5 ಲಕ್ಷದ ವಾರ್ಷಿಕ ಆದಾಯ ಹೊಂದಿದ್ದರೆ, ಅವರು ತಮ್ಮ ಹೆಚ್ಚುವರಿ ಆದಾಯದ ಮೇಲೆ ಶೇ.5 ರಷ್ಟು ತೆರಿಗೆ ಪಾವತಿಸಬೇಕು. ಆದಾಗ್ಯೂ, ಈ ಜನರು ಶೇ.5 ರಷ್ಟು ತೆರಿಗೆ ವಿನಾಯ್ತಿಯನ್ನು ಕೂಡ ಪಡೆಯಬಹುದು.  ಆದರೆ ಕೆಲವರಿಗೆ ಹೆಚ್ಚಿನ ವಾರ್ಷಿಕ ಆದಾಯದ ಮೇಲೂ ಸರ್ಕಾರದಿಂದ ತೆರಿಗೆ ವಿನಾಯಿತಿ ನೀಡುತ್ತದೆ.

ಇದನ್ನೂ ಓದಿ-Yamaha RX100 ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ! ಎದೆಬಡಿತ ಹೆಚ್ಚಿಸುವ ಮಾಹಿತಿ ಬಹಿರಂಗ

ಈ ಜನರಿಗೆ 5 ಲಕ್ಷ ಆದಾಯದವರೆಗೆ ತೆರಿಗೆ ವಿನಾಯ್ತಿ ಸಿಗುತ್ತದೆ
ವಾಸ್ತವದಲ್ಲಿ, ಹೊಸ ತೆರಿಗೆ ಪದ್ಧತಿಯ ದರಗಳನ್ನು ವಯಸ್ಸಿನ ಆಧಾರದ ಮೇಲೆ ವ್ಯತ್ಯಾಸ ಮಾಡಲಾಗಿಲ್ಲ. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ, 60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ವಾರ್ಷಿಕ 3 ಲಕ್ಷ ರೂಪಾಯಿ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಮತ್ತೊಂದೆಡೆ, ಸೂಪರ್ ಸೀನಿಯರ್ ಸಿಟಿಜನ್ಸ್ ಅಂದರೆ ಯಾರ ವಯಸ್ಸು 80 ವರ್ಷಕ್ಕಿಂತ ಹೆಚ್ಚಾಗಿದೆಯೋ ಅಂತಹ ಜನರು ತಮ್ಮ 5 ವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News