Tata Technologies IPO: ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟ ಟಾಟಾ ಟೆಕ್ನಾಲಜಿಸ್!
Tata Technologies IPO: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್ ಇಂಜಿನಿಯರಿಂಗ್ ಸೇವೆಗಳ ಸಂಸ್ಥೆಯಾಗಿದೆ. 3 ದಿನಗಳ ಕೊಡುಗೆಯ ಅಂತಿಮ ದಿನವಾದ ಶುಕ್ರವಾರ ಟಾಟಾ ಟೆಕ್ನಾಲಜೀಸ್ ಐಪಿಒ 69.43 ಪಟ್ಟು ಹೆಚ್ಚು ಚಂದಾದಾರಿಕೆ ಪಡೆದುಕೊಂಡಿತ್ತು.
ನವದೆಹಲಿ: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ತನ್ನ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ತಂದುಕೊಟ್ಟಿದೆ. ಟಾಟಾ ಟೆಕ್ 2004ರ ನಂತರ ಅಂದರೆ ಸುಮಾರು 19 ವರ್ಷಗಳ ಬಳಿಕ ಟಾಟಾ ಸಮೂಹದ ಮೊದಲ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಆಗಿತ್ತು. ಸುಮಾರು 2 ದಶಕಗಳ ಬಳಿಕ ಬಂದ ಈ ಐಪಿಒಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು.
ಟಾಟಾ ಸಮೂಹವು ಕಳೆದ ಮಾರ್ಚ್ ತಿಂಗಳಿನಲ್ಲಿ ಮಾರುಕಟ್ಟೆಗಳ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ಐಪಿಒ ಅರ್ಜಿಯನ್ನು ಸಲ್ಲಿಸಿತ್ತು. ಟಾಟಾ ಟೆಕ್ನಾಲಜೀಸ್ ಐಪಿಒಗೆ ಸೆಬಿ ಅನುಮೋದನೆ ನೀಡಿದ ಬಳಿಕ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. 2004ರ ಜುಲೈನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಟಾಟಾ ಕಂಪನಿಯ ಕೊನೆಯ ಐಪಿಒ ಆಗಿತ್ತು. ಇದೀಗ ಟಾಟಾ ಸಮೂಹದ ಹೊಸ ಕಂಪನಿ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದು, ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿದೆ.
ಇದನ್ನೂ ಓದಿ: Indian Railways: ಭಾರತದಲ್ಲಿ ಫುಲ್ ಟ್ರೈನ್ ಬುಕ್ ಮಾಡೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?
ಶೇ.140ರಷ್ಟು ಬಂಪರ್ ಲಾಭ!
ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್ ಇಂಜಿನಿಯರಿಂಗ್ ಸೇವೆಗಳ ಸಂಸ್ಥೆಯಾಗಿದೆ. 3 ದಿನಗಳ ಕೊಡುಗೆಯ ಅಂತಿಮ ದಿನವಾದ ಶುಕ್ರವಾರ ಟಾಟಾ ಟೆಕ್ನಾಲಜೀಸ್ ಐಪಿಒ 69.43 ಪಟ್ಟು ಹೆಚ್ಚು ಚಂದಾದಾರಿಕೆ ಪಡೆದುಕೊಂಡಿತ್ತು. ಟಾಟಾ ಕಂಪನಿಯು ಐಪಿಒ ಕೊಡುಗೆ ಬೆಲೆಯನ್ನು ಪ್ರತಿ ಈಕ್ವಿಟಿ ಷೇರಿಗೆ ಮೊದಲು 475-500 ರೂ. ನಿಗದಿಪಡಿಸಿತ್ತು. ಬಳಿಕ 500 ರೂ.ಗೆ ನಿಗದಿಪಡಿಸಿತು. ಗುರುವಾರ BSE & NSEಯಲ್ಲಿ ಟಾಟಾ ಟೆಕ್ ಷೇರು 1,200 ರೂ.ಗೆ ಲಿಸ್ಟ್ ಆಗುವ ಮೂಲಕ ಹೂಡಿಕೆದಾರರಿಗೆ ಶೇ.140ರಷ್ಟು ಬಂಪರ್ ಲಾಭವನ್ನು ನೀಡಿದೆ.
ಟಾಟಾ ಟೆಕ್ನಾಲಜೀಸ್ ಗುರುವಾರ 1,200 ರೂ.ಗೆ ಲಿಸ್ಟ್ ಆಯಿತು. ಬಳಿಕ ಈ ಷೇರು ಗರಿಷ್ಠ 1,440 ರೂ. ಮತ್ತು ಕನಿಷ್ಟ 960 ರೂ.ನಂತೆ ವಹಿವಾಟು ನಡೆಸಿತ್ತು. ಒಟ್ಟು 4,65,79,444 ಷೇರುಗಳು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿದವು. ಮಾರುಕಟ್ಟೆಯ ವಹಿವಾಟಿನ ಅಂತ್ಯಕ್ಕೆ ಈ ಷೇರು 1,313 ರೂ.ನಂತೆ ವಹಿವಾಟು ನಡೆಸುತ್ತಿತ್ತು. ಐಪಿಒದಲ್ಲಿ ಷೇರು ಸಿಗದೆ ನಿರಾಸೆಗೊಂಡ ಹೂಡಿಕೆದಾರರು ಈ ಷೇರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಪರಿಣಾಮ ಷೇರು ಲಿಸ್ಟ್ ಆದ ಬೆಲೆಗಿಂತಲೂ 125 ರೂ.(ಶೇ.10.42)ನಷ್ಟು ಏರಿಕೆ ಕಂಡಿತು.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆಯ ಲಾಭವೇನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.