Tata Tiago EV: ಬಿಡುಗಡೆಯಾಗುತ್ತಲೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ ಈ ಇಲೆಕ್ಟ್ರಿಕ್ ಕಾರ್
Tata Tiago EV Waiting Period: ಇದುವರೆಗೆ ಈ ಹ್ಯಾಚ್ಬ್ಯಾಕ್ ಎಲೆಕ್ಟ್ರಿಕ್ ಕಾರಿಗಾಗಿ ಕಂಪನಿ ಸುಮಾರು 20 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಜನರ್ವರಿ 2023ರಿಂದ ಈ ಕಾರಿನ ವಿತರಣೆ ಆರಂಬವಾಗಲಿದೆ. ಪ್ರಸ್ತುತ ಈ ಕಾರಿನ ವೇಟಿಂಗ್ ಪಿರಿಯಡ್ 4 ತಿಂಗಳದ್ದಾಗಿದೆ. ಕೆಲ ಆಯ್ದ ನಗರಗಳಲ್ಲಿ ಈ ಅವಧಿ 2 ತಿಂಗಳದ್ದಾಗಿದೆ.
Tata Tiago EV Bookings: ಟಾಟಾ ಮೋಟಾರ್ಸ್ ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಭಾರಿ ಅಬ್ಬರಿಸುತ್ತಿದೆ ಮತ್ತು ಮಾರುಕಟ್ಟೆಯಲ್ಲಿ ಶೇ.70ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್, ಟಿಗೊರ್ ಮತ್ತು ಟಿಯಾಗೊದ ಎಲೆಕ್ಟ್ರಿಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಬಹಳ ಮುಂದಿದೆ. ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರಾಗಿದೆ. ಪ್ರಸ್ತುತ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಗ್ಗದ ಎಲೆಕ್ಟ್ರಿಕ್ ಕಾರ್ ಟಾಟಾ ಟಿಯಾಗೊ ಇವಿಗೂ ಕೂಡ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ-ಆರ್ಥಿಕ ಕುಸಿತದ ಭೀತಿಯನ್ನು ಎದುರಿಸುತ್ತಿದೆಯಾ ಅಮೆಜಾನ್?
ಟಾಟಾ ಟಿಯಾಗೊ EV ಬುಕಿಂಗ್, ಕಾಯುವ ಅವಧಿ ಮತ್ತು ಬ್ಯಾಟರಿ ಪ್ಯಾಕ್
ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗಾಗಿ ಕಂಪನಿಯು ಇದುವರೆಗೆ 20,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಇದರ ವಿತರಣೆಯು ಜನವರಿ 2023 ರಲ್ಲಿ ಆರಂಭವಾಗಲಿದೆ. ಪ್ರಸ್ತುತ, ಈ ಕಾರಿಯ ವೇಟಿಂಗ್ ಪಿರಿಯಡ್ 4 ತಿಂಗಳದ್ದಾಗಿರಲಿದೆ. ಆದರೆ, ಕೆಲ ಆಯ್ದ ನಗರಗಳಲ್ಲಿ ಇದು ಕೇವಲ 2 ತಿಂಗಳು ಮಾತ್ರ ಇದೆ. ಟಾಟಾ ಮೋಟಾರ್ಸ್ ಹೊಸ Tiago EV ಬೆಲೆಗಳನ್ನು ಸೆಪ್ಟೆಂಬರ್ 28 ರಂದು ಘೋಶಿಸಿತ್ತು ಮತ್ತು ಅದರ ಬುಕಿಂಗ್ ಅನ್ನು ಅಕ್ಟೋಬರ್ 10, 2022 ರಿಂದ ಆರಂಭಿಸಿದೆ ಎಂಬುದು ಇಲ್ಲೀ ಉಲ್ಲೇಖನೀಯ. ಇದು XE, XT, XZ+ ಮತ್ತು XZ+ ಟೆಕ್ ಲಕ್ಸ್ ಟ್ರಿಮ್‌ಗಳಲ್ಲಿ ಬರುತ್ತದೆ. ಇದು ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದೆ - 19.2kWh ಮತ್ತು 24kWh. ಎರಡೂ ಬ್ಯಾಟರಿ ಪ್ಯಾಕ್‌ಗಳು IP67 ರೇಟ್ ಆಗಿವೆ.
ಇದನ್ನೂ ಓದಿ -Modi ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಭಾರಿ ಲಾಭ, ಈ ನಿಯಮ ಜಾರಿಗೊಳಿಸಲಿದೆ EPFO
ಟಾಟಾ ಟಿಯಾಗೊ EV ಮೋಟಾರ್, ಪವರ್ ಮತ್ತು ಸ್ಪೀಡ್
ಇದರ ಎಲೆಕ್ಟ್ರಿಕ್ ಮೋಟಾರ್ 74bhp ಮತ್ತು 114Nm ಟಾರ್ಕ್ ಉತ್ಪಾದನೆಯ ಜೊತೆಗೆ 24kWh ಬ್ಯಾಟರಿ ಬ್ಯಾಕಪ್ ಹೊಂದಿದೆ. ಆದರೆ, ಇದು 19.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 61bhp ಮತ್ತು 110Nm ಟಾರ್ಕ್ ಉತ್ಪಾದನೆಯನ್ನು ನೀಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ 8 ವರ್ಷಗಳು/1,60,000 ಕಿಮೀ ವಾರಂಟಿಯೊಂದಿಗೆ ಬರುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್‌ನೊಂದಿಗೆ Tiago 6.2 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಪಡೆಯಬಹುದು. ಆದರೆ ದೊಡ್ಡ ಬ್ಯಾಟರಿಯೊಂದಿಗಿನ ರೂಪಾಂತರವು 5.7 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಪಡೆದುಕೊಳ್ಳುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.