Tata Best Selling Car: ಮೇ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಟಾದ ಕಾರುಗಳು
Tata Best Selling Car: ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 74,973 ವಾಹನಗಳನ್ನು ಮಾರಾಟ ಮಾಡಿದೆ. 2022ರ ಮೇ ತಿಂಗಳಿಗೆ ಹೋಲಿಸಿದ್ರೆ 76,210 ಯೂನಿಟ್‍ಗಳು ಅಂದ್ರೆ ಶೇ.2ರಷ್ಟು ಕಡಿಮೆಯಾಗಿದೆ.
ನವದೆಹಲಿ: ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್‌ನ ಕಾರುಗಳ ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ಪ್ರಸ್ತುತ ಇದು ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ 3ನೇ ಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 74,973 ವಾಹನಗಳನ್ನು ಮಾರಾಟ ಮಾಡಿದೆ. 2022ರ ಮೇ ತಿಂಗಳಿಗೆ ಹೋಲಿಸಿದ್ರೆ 76,210 ಯೂನಿಟ್‍ಗಳು ಅಂದ್ರೆ ಶೇ.2ರಷ್ಟು ಕಡಿಮೆಯಾಗಿದೆ. ಟಾಟಾ ಮೋಟಾರ್ಸ್ 3ನೇ ಸ್ಥಾನದಲ್ಲಿದ್ದರೂ, ಕಂಪನಿಯ ಕಾರೊಂದು ಇನ್ನುಳಿದ ಟಾಪ್ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ. ಮಾರಾಟದ ವಿಷಯದಲ್ಲಿ ಮಾರುತಿ ಬ್ರೆಝಾ ಮತ್ತು ಆಲ್ಟೊವನ್ನು ಇದು ಹಿಂದಿಕ್ಕಿದೆ. ಟಾಟಾ ಮೋಟಾರ್ಸ್‍ನ ಹೆಚ್ಚು ಮಾರಾಟವಾದ ಕಾರಿನ ಮಾಹಿತಿ ಇಲ್ಲಿದೆ ನೋಡಿ.
ಟಾಟಾ ನೆಕ್ಸಾನ್: ಇದು ಟಾಟಾ ಮೋಟಾರ್ಸ್‌ನ ಅತಿಹೆಚ್ಚು ಮಾರಾಟವಾದ ಕಾರು. ಮೇ 2023ರಲ್ಲಿ ಟಾಟಾ ನೆಕ್ಸಾನ್‌ನ 14,423 ಯೂನಿಟ್‍ಗಳನ್ನು ಮಾರಾಟ ಮಾಡಲಾಗಿದೆ. 1 ವರ್ಷದ ಹಿಂದೆ ಅಂದರೆ ಮೇ 2022ರಲ್ಲಿ ಇದು 14,614 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ನೆಕ್ಸಾನ್ ಮಾರಾಟದಲ್ಲಿ ಶೇ.1ರಷ್ಟು ಕುಸಿತ ಕಂಡುಬಂದಿದೆ. ಟಾಟಾ ನೆಕ್ಸಾನ್ ಹಲವಾರು ಬಾರಿ ದೇಶದ ಅತಿಹೆಚ್ಚು ಮಾರಾಟವಾಗುವ SUV ಆಗಿದೆ. ಆದಾಗ್ಯೂ ಈ ಬಾರಿ ಇದು ಹ್ಯುಂಡೈ ಕ್ರೆಟಾ ನಂತರ 2ನೇ ಸ್ಥಾನದಲ್ಲಿದೆ. ಮಾರುತಿ ಬ್ರೆಝಾ ಇದಕ್ಕಿಂತ ಕೆಳಗಿದೆ.
ಇದನ್ನೂ ಓದಿ: Maruti Discount Offer: ಮಾರುತಿಯ ಈ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯ..!
ಬೆಲೆ ಮತ್ತು ವೈಶಿಷ್ಟ್ಯಗಳು: ಟಾಟಾ ನೆಕ್ಸಾನ್ ಬೆಲೆಯು 7.80 ಲಕ್ಷ ರೂ.ದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್‌ಗೆ 14.30 ಲಕ್ಷ ರೂ.ವರೆಗೂ ಇದೆ. ಇದು ದೇಶದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹೆಚ್ಚಿನ ಸಾಮರ್ಥ್ಯದ ಉಕ್ಕಿನ ರಚನೆಯನ್ನು ಇದರಲ್ಲಿ ಬಳಸಲಾಗಿದೆ. ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ ನೀವು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಪಡೆಯುತ್ತೀರಿ. ಇದು ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ರೋಲ್-ಓವರ್ ಮಿಟಿಗೇಶನ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಪ್ರಿ-ಫಿಲ್ ಮತ್ತು ಬ್ರೇಕ್ ಡಿಸ್ಕ್ ವೈಪಿಂಗ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.. ಇದು EBD ಜೊತೆಗೆ ABS, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎತ್ತರ ಹೊಂದಾಣಿಕೆ ಸೀಟ್‌ಬೆಲ್ಟ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಏರ್ ಪ್ಯೂರಿಫೈಯರ್, ಆಟೋ ಡಿಮ್ಮಿಂಗ್ IRVM ಅನ್ನು ಹೊಂದಿದೆ.
ಎಂಜಿನ್ ಮತ್ತು ಪ್ರಸರಣ(Engine and Transmission): ಟಾಟಾ ನೆಕ್ಸಾನ್ 2 ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ: 1.2-ಲೀಟರ್, 3-ಸಿಲಿಂಡರ್, ಟರ್ಬೊ-ಪೆಟ್ರೋಲ್ ಯೂನಿಟ್ (120PS ಮತ್ತು 170Nm) ಮತ್ತು 1.5-ಲೀಟರ್, 4 ಸಿಲಿಂಡರ್, ಡೀಸೆಲ್ ಎಂಜಿನ್ ಯೂನಿಟ್ (115PS ಮತ್ತು 260Nm). 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ AMT ಗೇರ್‌ಬಾಕ್ಸ್‌ಗೆ ಆಯ್ಕೆಗಳಿವೆ.
ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ ಈ ರೀತಿ ಇದೆ:
ನೆಕ್ಸಾನ್ ಪೆಟ್ರೋಲ್ MT: 17.33 kmpl
ನೆಕ್ಸಾನ್ ಪೆಟ್ರೋಲ್ AMT: 17.05 kmpl
ನೆಕ್ಸಾನ್ ಡೀಸೆಲ್ MT: 23.22 kmpl
ನೆಕ್ಸಾನ್ ಡೀಸೆಲ್ AMT: 24.07 kmpl
ಇದನ್ನೂ ಓದಿ: Maruti Discount Offer: ಮಾರುತಿಯ ಈ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.