Tomato Price Hike In Bengaluru: ಅಕಾಲಿಕ ಮಳೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಬೆಲೆ ಗಗನಮುಖಿಯಾಗಿದ್ದು ಪ್ರಸ್ತುತ, ಅಡುಗೆ ಮನೆಯ ಪ್ರಮುಖ ತರಕಾರಿಗಳಲ್ಲಿ ಒಂದಾದ ಟೊಮಾಟೊ ಕೊಳ್ಳುವವರ ಕಣ್ಣನ್ನು ಕೆಂಪಾಗಿಸುತ್ತಿದೆ. ಉತ್ಪಾದನೆಯಲ್ಲಿ ಭಾರೀ ಕುಸಿತದಿಂದಾಗಿ ಈ ಬೆಲೆ ಏರಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳಂತಹ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬಜೆಟ್ ಭಾರೀ ಅಸ್ತವ್ಯಸ್ತಗೊಂಡಿದೆ. ಒಂದು ತಿಂಗಳಲ್ಲೇ ಟೊಮೇಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ರೂ.65ರಿಂದ ರೂ.70 ದರದಲ್ಲಿ ಮಾರಾಟವಾಗುತ್ತಿದ್ದರೆ, ಚಿಲ್ಲರೆ ವ್ಯಾಪಾರದಲ್ಲಿ ಇದರ ಬೆಲೆ ಶತಕದತ್ತ ದಾಪುಗಾಲಿಡುತ್ತಿದೆ.
ಇದನ್ನೂ ಓದಿ- ಬೆಲೆ ಏರಿಕೆಯಿಂದ ಬಡವಾಯ್ತು ಜನಸಾಮಾನ್ಯನ ಜೀವನ
ಉತ್ತರ ಪ್ರದೇಶ, ಪಂಜಾಬ್‌ವರೆಗಿನ ಮಂಡಿಗಳಲ್ಲಿ 65 ರಿಂದ 70 ರೂ.ವರೆಗೆ ಮಾರಾಟವಾಗುತ್ತಿರುವ ಟೊಮಾಟೊ, ಚಿಲ್ಲರೆ ವ್ಯಾಪಾರಿಗಳ ಬಳಿ ಪ್ರತಿ ಕೆಜಿಗೆ 100 ರೂಪಾಯಿವರೆಗೆ ಮಾರಟವಾಗುತ್ತಿದೆ.
ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಟೊಮಾಟೊ ದರ ಈ ರೀತಿ ಇತ್ತು:
ವಾಸ್ತವವಾಗಿ, ತಿಂಗಳ ಹಿಂದೆ ಹುಳಿ ಟೊಮಾಟೊ ಚಿಲ್ಲರೆ ಅಂಗಡಿಗಳಲ್ಲಿ 10 ರಿಂದ 20 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಅದೇ ಸಮಯದಲ್ಲಿ, ಕಳೆದೆರಡು ವಾರಗಳ ಹಿಂದೆ ಅಂದರೆ ಹದಿನೈದು ದಿನಗಳ ಹಿಂದೆ ಸಗಟು ವ್ಯಾಪಾರದಲ್ಲಿ 30 ರಿಂದ 35 ರೂ. ಗಳಿಗೆ ಮಾರಾಟವಾಗುತ್ತಿದ್ದ ಟೊಮಾಟೊ ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆಜಿಗೆ 40ರಿಂದ 45 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಇದೀಗ ಇದರ ಬೆಲೆ ದುಪ್ಪಟ್ಟಾಗಿದ್ದು ಟೊಮಾಟೊ ಬೆಲೆ 100ರ ಗಡಿ ದಾಟುತ್ತಿದೆ.
ಇದನ್ನೂ ಓದಿ- Cashless India: ಮುಂದಿನ 3 ವರ್ಷಗಳಲ್ಲಿ ದೇಶದ ಶೇ.50ರಷ್ಟು ವಹಿವಾಟು ಕ್ಯಾಶ್‌ಲೆಸ್!
ದೇಶದ ಬಹುತೇಕ ಭಾಗಗಳಲ್ಲಿ ಸುಡು ಬಿಸಿಲಿನ ಝಳದಿಂದಾಗಿ ಟೊಮಾಟೊ ಬೆಲೆ ಕುಸಿದಿದ್ದರೆ ಇನ್ನೂ ಕೆಲವೆಡೆ ಬಿಪರ್‌ಜಾಯ್ ಚಂಡಮಾರುತದಿಂದಾಗಿ ಟೊಮಾಟೊ ಉತ್ಪಾದನೆ ಕುಸಿತ ಕಂಡಿದೆ. ವಾಸ್ತವವಾಗಿ, ಗುಜರಾತ್, ಮಹಾರಾಷ್ಟ್ರ ಟೊಮಾಟೊ ಉತ್ಪಾದಿಸುವ ರಾಜ್ಯಗಳಲ್ಲಿ ಅಗ್ರ ಸ್ಥಾನದಲ್ಲಿವೆ. ಈ ರಾಜ್ಯಗಳಲ್ಲಿ ಬಿಪರ್‌ಜಾಯ್ ಚಂಡಮಾರುತದಿಂದಾಗಿ ಈ ವರ್ಷ ಬಿತ್ತನೆ ಕಡಿಮೆಯಾಗಿ ಉತ್ಪಾದನೆಯಲ್ಲಿ ಇಳಿಕೆ ಆಗಿರುವುದೇ ಟೊಮಾಟೊ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಮುಂಬರುವ ವಾರಗಳಲ್ಲಿ ಟೊಮಾಟೊ ಬೆಲೆ ಗಣನೀಯವಾಗಿ ಕಡಿಮೆ ಆಗುವ ನಿರೀಕ್ಷೆಯಿದೆ. ಅನೇಕ ಸ್ಥಳಗಳಲ್ಲಿ ಶೀಘ್ರದಲ್ಲೇ ಕೊಯ್ಲು ಪ್ರಾರಂಭಿಸುವುದರಿಂದ ಟೊಮಾಟೊ ಬೆಲೆ ಕಡಿಮೆಯಾಗಬಹುದು. ಆದರೆ ಟೊಮಾಟೊ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಭಾರೀ ಮಳೆಯಾದರೆ, ಬೆಲೆಗಳು ಸ್ಥಿರವಾಗಿ ಉಳಿಯಬಹುದು ಎಂದು ಸಹ ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.