Aadhar Card Online Verification:  ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ರೀತಿಯ ಹಗರಣ ಮುನ್ನಲೆಗೆ ಬಂದಿದ್ದು, ಇಂತಹ ವಂಚನೆಯನ್ನು ತಪ್ಪಿಸಲು ಎಚ್ಚರಿಕೆಯಿಂದ ಇರುವಂತೆ ಯುಐಡಿಎಐ ಸಾಮಾಜಿಕ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಏನಿದು ಹಗರಣ? 
ಇತ್ತೀಚಿನ ದಿನಗಳಲ್ಲಿ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಳಲಾಗುತ್ತಿದೆ. ಆದರೆ, ಇಂತಹ ಸಂದೇಶಗಳಿಂದ ತುಂಬಾ ಎಚ್ಚರಿಕೆ ಇರುವಂತೆ ಆಧಾರ್ ಕಾರ್ಡ್ ಒದಗಿಸುವ ಯುಐಡಿಎಐ ಎಚ್ಚರಿಕೆ ನೀಡಿದ್ದು, ಸರ್ಕಾರವು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಗುರುತಿನ ಪುರಾವೆ (POI) ಅಥವಾ ವಿಳಾಸದ ಪುರಾವೆ (POA) ನಂತಹ ದಾಖಲೆಗಳನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ- ತ್ವರಿತವಾಗಿ ಐಟಿಆರ್ ಮರುಪಾವತಿ ಪಡೆಯಲು ಈಗಲೇ ಈ ಕೆಲಸ ಮಾಡಿ


ಟ್ವಿಟ್ಟರ್ ಪೋಸ್ಟ್ ಮೂಲಕ ಈ ಕುರಿತಂತೆ ಮಾಹಿತಿ ನೀಡಿರುವ ಯುಐಡಿಎಐ, ಸರ್ಕಾರವು ಎಂದಿಗೂ ಆಧಾರ್ ನವೀಕರಣಗಳಿಗಾಗಿ ಇಮೇಲ್ ಅಥವಾ ವಾಟ್ಸಾಪ್‌ಗಳನ್ನು ಮಾಡುವುದಿಲ್ಲ. ಸರ್ಕಾರದ ಹೆಸರಿನಲ್ಲಿ ಆಧಾರ್ ಸಂಖ್ಯೆಗೆ ಸಂಬಂಧಿಸಿಡ್ಸ ಯಾವುದೇ ಇಮೇಲ್, ವಾಟ್ಸಾಪ್ ಸಂದೇಶಗಳು ಬಂದರೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. 


ಇನ್ನೂ ಈ ಕುರಿತಂತೆ ಸರ್ಕಾರದಿಂದಲೂ ಸಲಹೆ ನೀಡಲಾಗಿದ್ದು, ಆಧಾರ್ ಬಹಳ ಸೂಕ್ಷ್ಮ ಗುರುತಿನ ಸಂಖ್ಯೆ ಮತ್ತು ಇದು ಭಾರತದ ಪ್ರಜೆ ಎಂಬುದಕ್ಕೆ ಪುರಾವೆಯಾಗಿದೆ. ವಂಚಕರು ವ್ಯಕ್ತಿಯ ಆಧಾರ್ ಸಂಖ್ಯೆಯ ಮೂಲಕ ವಂಚನೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಹಗರಣಗಳು ಹೆಚ್ಚಾಗುತ್ತಲೇ ಇವೆ. 


ಇದನ್ನೂ ಓದಿ- ಪಿಎಫ್ ಖಾತೆಯಲ್ಲಿ ಬಡ್ಡಿ ಜಮಾ ಆಗುತ್ತಿಲ್ಲವೇ? ಕಾರಣ ತಿಳಿಯಿರಿ! 


ನಾನಾ ರೀತಿಯಲ್ಲಿ ವಂಚಕರು ಆಧಾರ್ ಬಳಕೆದಾರರ ಸಂಖ್ಯೆಯನ್ನು ಪಡೆದು ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ಎಚ್ಚರಿಸಿರುವ ಸರ್ಕಾರ, ವಂಚಕರು ಹಲವು ರೀತಿಯಲ್ಲಿ ಆಧಾರ್ ಅನ್ನು ಟ್ಯಾಂಪರ್ ಮಾಡಬಹುದು. ನಿಮ್ಮ ಆಧಾರ್ ಸಂಖ್ಯೆಯನ್ನು ಪಡೆದು ನಕಲಿ ಆಧಾರ್ ಸೃಷ್ಟಿಸಬಹುದು. ಇಲ್ಲವೇ, ನಿಮ್ಮ ಆಧಾರ್ ವಿವರಗಳನ್ನು ಕದಿಯಲು ಯುಐಡಿಎಐ ಡೇಟಾಬೇಸ್ ಅನ್ನು ಸಹ ಹ್ಯಾಕ್ ಮಾಡಬಹುದು ಎಂದು ಎಚ್ಚರಿಸಿದೆ.  ಇಂತಹ ಯಾವುದೇ ವಂಚನೆಯನ್ನು ತಪ್ಪಿಸಲು, ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸರ್ಕಾರ ಕೇಳಿಕೊಂಡಿದೆ. ಮಾತ್ರವಲ್ಲದೆ, ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಬಳಸಿಕೊಂಡು ಜನರು ತಮ್ಮ ಆಧಾರ್ ಅನ್ನು ಪರಿಶೀಲಿಸುವಂತೆ  ಸಲಹೆಯನ್ನು ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.