Gautam Adani Business : ಗೌತಮ್ ಅದಾನಿ ದೇಶದ ಎರಡನೇ ಶ್ರೀಮಂತ ವ್ಯಕ್ತಿ.ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ 6,77,520 ಕೋಟಿ ರೂ. ಇವರು ಅದಾನಿ ಗ್ರೂಪ್ ನ ಅಧ್ಯಕ್ಷರಾಗಿದ್ದಾರೆ.ಅದಾನಿ ಗ್ರೂಪ್ ವಿವಿಧ ಕಂಪನಿಗಳನ್ನು ಒಳಗೊಂಡಿದೆ. ಅದಾನಿ ಗ್ರೂಪ್ ನ  10 ಕಂಪನಿಗಳು ಸುಮಾರು 16,00,000 ಕೋಟಿ ರೂ.ಗಳ ಸಾಮೂಹಿಕ ಮಾರುಕಟ್ಟೆ ಬಂಡವಾಳವನ್ನು ಹೊಂದಿವೆ.ಅಂತಹ ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಇವರದ್ದೇ ಮುಖ್ಯಪಾತ್ರ :
ಗೌತಮ್ ಅದಾನಿಯವರ ಬಹುಕೋಟಿ ಸಾಮ್ರಾಜ್ಯದ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡಿದ ಒಬ್ಬ ವ್ಯಕ್ತಿ ಮಲಯ ಮಹಾದೇವಯ್ಯ. ಅವರು ಅದಾನಿ ವ್ಯವಹಾರದಲ್ಲಿ ಬಹಕ ಮುಖ್ಯ ಪಾತ್ರ ವಹಿಸಿದ್ದಾರೆ. ಅವರನ್ನು ಗೌತಮ್ ಅದಾನಿಯ ಬಲಗೈ ಎಂದೇ ಕರೆಯಲಾಗುತ್ತದೆ. ಮಲಯ ಮಹಾದೇವಯ್ಯ ಗೌತಮ್ ಅದಾನಿ ಅವರ ಬಾಲ್ಯದ ಗೆಳೆಯ. ಅದಾನಿ ಗ್ರೂಪ್‌ಗೆ ಸೇರುವ ಮೊದಲು ಅವರು ಸಹಾಯಕ ಪ್ರಾಧ್ಯಾಪಕರಾಗಿದ್ದರು. 


ಇದನ್ನೂ ಓದಿ : ಕೋಟಕ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕಠಿಣ ಕ್ರಮ, ಹಳೆಯ ಗ್ರಾಹಕರ ಮೇಲೆ ಏನು ಪರಿಣಾಮ?


ಮಲಯ್ ಯಾವ ಹುದ್ದೆಯಲ್ಲಿದ್ದಾರೆ  : 
ಮಲಯ್ ಮಹಾದೇವಯ್ಯ ಅದಾನಿ ಪೋರ್ಟ್ಸ್ ಮತ್ತು SEZ ನ ನಿರ್ದೇಶಕರಾಗಿದ್ದಾರೆ.ಇದಲ್ಲದೆ, ಅವರು ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL)ನ ಸಿಇಒ ಕೂಡಾ ಆಗಿದ್ದಾರೆ.ಇದು ಬಂದರು ಮತ್ತು ಲಾಜಿಸ್ಟಿಕ್ಸ್, ರೈಲ್ವೆ,ಆರೋಗ್ಯ, ವೈದ್ಯಕೀಯ ಶಿಕ್ಷಣ, ಮೂಲಸೌಕರ್ಯ ಎಂಜಿನಿಯರಿಂಗ್, ಶಿಕ್ಷಣ ಮತ್ತು ಸಮೂಹದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತದೆ.ಅದಾನಿ ಗ್ರೂಪ್‌ನ CSR ವಿಭಾಗವಾದ ಅದಾನಿ ಫೌಂಡೇಶನ್‌ನ ಟ್ರಸ್ಟಿ ಕೂಡಾ ಆಗಿದ್ದಾರೆ.


ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ :
ಅದಾನಿ ಗ್ರೂಪ್‌ನೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಮಲಯ ಮಹಾದೇವಯ್ಯ ಅಹಮದಾಬಾದ್‌ನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ಡೆಂಟಲ್ ಸರ್ಜರಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಗುಜರಾತ್ ವಿಶ್ವವಿದ್ಯಾಲಯದಿಂದ  ಕೋಸ್ಟಲ್ ಇಕಾಳಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 


ಇದನ್ನೂ ಓದಿIndian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!


ಮಲಯ ಮಹಾದೇವಯ್ಯ ಅನೇಕ ವೃತ್ತಿಪರ ಸಂಘಗಳ ಸದಸ್ಯರೂ ಆಗಿದ್ದಾರೆ : 
1992 ರಲ್ಲಿ, ಮಲಯ ಮಹಾದೇವಯ್ಯ ಅದಾನಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.ಮುಂದ್ರಾ ಬಂದರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಪರಿಕಲ್ಪನೆಯಿಂದ ಹಿಡಿದು ಅನುಷ್ಠಾನದವರೆಗೆ ಅವರ ಪಾತ್ರ ಬಹಳ ಮುಖ್ಯ. ಮಲಯ ಮಹಾದೇವಯ್ಯ ಹಲವಾರು ವೃತ್ತಿಪರ ಸಂಘಗಳ ಸದಸ್ಯರಾಗಿದ್ದಾರೆ.ಸೆಂಟರ್ ಫಾರ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ (CEPT), ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM), ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಮತ್ತು ಗುಜರಾತ್ ಫೆಡರೇಶನ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತೊಡಗಿಸಿಕೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.