ಮುಂಬೈ: ಅಧಿಕಾರಕ್ಕೆ ಬಂದ ಕೇವಲ ಎರಡೇ ವಾರಕ್ಕೆ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್ ದರ ಇಳಿಸಿದೆ. ಈ ಮೂಲಕ ಜನರಿಗೆ ದೊಡ್ಡ ಪರಿಹಾರ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಸರ್ಕಾರ ಕಡಿತಗೊಳಿಸಿದೆ. ಇದರ ಪರಿಣಾಮ ಮಹಾರಾಷ್ಟ್ರದಲ್ಲಿ ಪೆಟ್ರೋಲ್ 5 ರೂ. ಮತ್ತು ಡೀಸೆಲ್ 3 ರೂ.ನಷ್ಟು ಅಗ್ಗವಾಗಿದೆ.


COMMERCIAL BREAK
SCROLL TO CONTINUE READING

ಕಳೆದ ತಿಂಗಳು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ರಚನೆಯಾದ ಹೊಸ ಸರ್ಕಾರದ 2ನೇ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ ಕ್ರಮವಾಗಿ 5 ಮತ್ತು 3 ರೂ.ಗಳಷ್ಟು ಕಡಿಮೆ ಮಾಡುತ್ತದೆ ಎಂದು ಸಭೆಯ ನಂತರ ಸಿಎಂ ಏಕನಾಥ್ ಶಿಂಧೆ ಹೇಳಿದರು.


ಇದನ್ನೂ ಓದಿ: ಬೆಂಗಳೂರಿನಿಂದ ಕಾಶಿಗೆ ತೆರಳಬೇಕೇ! ಕರ್ನಾಟಕ ಸರ್ಕಾರದಿಂದ ವಿಶೇಷ ವ್ಯವಸ್ಥೆ


ಇಂದಿನಿಂದಲೇ ಪರಿಷ್ಕೃತ ದರ ಜಾರಿ


ಮುಂಬೈನಲ್ಲಿ ಪೆಟ್ರೋಲ್ ಬೆಲೆ 111.35 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 97.28 ರೂ. ಇತ್ತು. ವ್ಯಾಟ್ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 106.35 ರೂ. ಮತ್ತು ಡೀಸೆಲ್ 97.28 ರೂ.ಗೆ ಇಳಿಕೆ ಕಂಡಿದೆ. ಅದೇ ರೀತಿ ಪುಣೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.88 ರೂ. ಮತ್ತು ಡೀಸೆಲ್ ಲೀಟರ್‌ಗೆ 92.37 ರೂ.ನಂತೆ ಮಾರಟವಾಗುತ್ತಿದೆ. ಹೊಸ ದರಗಳು ಜಾರಿಯಾದ ನಂತರ ಥಾಣೆಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.49 ರೂ.ಗೆ ಇಳಿಯಲಿದ್ದು,. ಡೀಸೆಲ್ ಬೆಲೆ ಲೀಟರ್‌ಗೆ 94.42 ರೂ.ಗೆ ಇಳಿಕೆ ಕಾಣಲಿದೆ.


ಇತರ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ..?


ನವದೆಹಲಿ -  96.72 ರೂ.


ಕೋಲ್ಕತ್ತಾ - 111.35 ರೂ.


ಚೆನ್ನೈ - 102.63 ರೂ.


ಗುವಾಹಟಿ - 96.48 ರೂ.


ಡೀಸೆಲ್ ದರ ಹೀಗಿದೆ:-


ದೆಹಲಿ – 89.62 ರೂ.


ಕೋಲ್ಕತ್ತಾ - 92.76 ರೂ.


ಚೆನ್ನೈ - 94.24 ರೂ.


ಗುವಾಹಟಿ - 84.37 ರೂ.


ಅಬಕಾರಿ ಸುಂಕ ಕಡತಗೊಳಿಡಿದ್ದ ಕೇಂದ್ರ ಸರ್ಕಾರ


ಈ ಹಿಂದೆ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಕೇಂದ್ರವು ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ ಮೇಲೆ 6 ರೂ. ಕಡಿತಗೊಳಿಸಿತ್ತು. ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯ ಸರ್ಕಾರಗಳು ಸಹ ವ್ಯಾಟ್ ಅನ್ನು ಕಡಿಮೆ ಮಾಡಿದ್ದವು. ಬಿಜೆಪಿಯೇತರ ಆಡಳಿತದ ಕೆಲವು ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ಕೂಡ ವ್ಯಾಟ್ ಅನ್ನು ಕಡಿಮೆ ಮಾಡಿದ್ದವು.


ಇದನ್ನೂ ಓದಿ: Bumper Discount on Cars: ಈ ಕಾರುಗಳ ಮೇಲೆ ಸಿಗುತ್ತಿದೆ 94,000 ರೂ.ವರೆಗಿನ ಭರ್ಜರಿ ಡಿಸ್ಕೌಂಟ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.