Income Tax Slab : ಬಜೆಟ್ 2023 ಅನ್ನು ಕೆಲವೇ ದಿನಗಳಲ್ಲಿ ಮಂಡಿಸಲಾಗುವುದು. ಈ ಬಾರಿಯ ಬಜೆಟ್ ಮೇಲೆ ಜನ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡಬಹುದಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯಿತಿಯನ್ನೂ ತೆರಿಗೆದಾರರು ನಿರೀಕ್ಷಿಸುತ್ತಿದ್ದಾರೆ. ತೆರಿಗೆ ವಿನಾಯಿತಿ   ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಜನಸಾಮಾನ್ಯರದ್ದು. ಅಲ್ಲದೆ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸಬಹುದು ಎನ್ನುವ ಭರವಸೆಯನ್ನು ಕೂಡಾ ಜನರು ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರವರಿ 1, 2023 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಭಾಷಣವನ್ನು ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

ಬಜೆಟ್ 2023 : 
ಬಜೆಟ್‌ಗೆ ಮೊದಲು ತೆರಿಗೆ ಸ್ಲ್ಯಾಬ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಪ್ರಸ್ತುತ, ಎರಡು ತೆರಿಗೆ ಸ್ಲ್ಯಾಬ್‌ಗಳ ಪ್ರಕಾರ ತೆರಿಗೆ ಸಂಗ್ರಹಿಸಲಾಗುತ್ತದೆ. ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿ ಮೂಲಕ ತೆರಿಗೆ ಸಂಗ್ರಹ ನಡೆಯುತ್ತದೆ. ಎರಡೂ ತೆರಿಗೆ ಸ್ಲ್ಯಾಬ್‌ಗಳಲ್ಲಿ 5% ತೆರಿಗೆಯನ್ನು ವಿಧಿಸುವ ಕುರಿತ ಮಾಹಿತಿ ನೀಡಲಿದ್ದೇವೆ. 


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ


ಆದಾಯ ತೆರಿಗೆ :
ಹಳೆಯ ತೆರಿಗೆ ಪದ್ಧತಿ ಬಗ್ಗೆ ಹೇಳುವುದಾದರೆ, ನಿಮ್ಮ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿದ್ದರೆ,  2022-23 ರ ಹಣಕಾಸು ವರ್ಷದ ಪ್ರಕಾರ, ವಾರ್ಷಿಕ 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ವಯಸ್ಸು 60 ರಿಂದ 80 ವರ್ಷಗಳ ನಡುವೆ ಇದ್ದರೆ, ವಾರ್ಷಿಕ 3 ಲಕ್ಷದಿಂದ ವಾರ್ಷಿಕ 5 ಲಕ್ಷದವರೆಗಿನ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ.


ಆದಾಯ ತೆರಿಗೆ ಸ್ಲ್ಯಾಬ್ :
ಇದರ ಹೊರತಾಗಿ, 2022-23 ರ ಹಣಕಾಸು ವರ್ಷದ ಪ್ರಕಾರ ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ಸಲ್ಲಿಸುವುದಾದರೆ, ಎಲ್ಲಾ ವಯಸ್ಸಿನವರು, 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.