Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು

ಅಟಲ್ ಪಿಂಚಣಿ ಯೋಜನೆ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಕೆಲಸದ ವರ್ಷಗಳಲ್ಲಿ ಸಣ್ಣ ಮೊತ್ತವನ್ನು ಹೂಡುವ ಮೂಲಕ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

Written by - Puttaraj K Alur | Last Updated : Jan 23, 2023, 10:55 PM IST
  • ಅಟಲ್ ಪಿಂಚಣಿ ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದೆ
  • ಅಸಂಘಟಿತ ವಲಯದ ಕಾರ್ಮಿಕರು ಸಣ್ಣ ಮೊತ್ತದ ಹೂಡಿಕೆ ಮಾಡಬಹುದು
  • ಈ ಯೋಜನೆಯಡಿ ಮಾಸಿಕ 1,000 ರಿಂದ 5,000 ರೂ. ಪಿಂಚಣಿ ಸಿಗುತ್ತದೆ
Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು   title=
ಅಟಲ್ ಪಿಂಚಣಿ ಯೋಜನೆ

ನವದೆಹಲಿ: ಪಿಂಚಣಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳ ಮೂಲಕ ಜನರಿಗೆ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಇವುಗಳಲ್ಲಿ ಅನೇಕ ಪಿಂಚಣಿ ಯೋಜನೆಗಳನ್ನು ಕೇಂದ್ರ ಸರ್ಕಾರವೂ ನಡೆಸುತ್ತಿದೆ. ಈ ಪೈಕಿ ಅಟಲ್ ಪಿಂಚಣಿ ಯೋಜನೆಯೂ ಒಂದು. ಅಟಲ್ ಪಿಂಚಣಿ ಯೋಜನೆಯು ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾಗಿದ್ದು, ಪ್ರತಿ ತಿಂಗಳು ಸಣ್ಣ ಕೊಡುಗೆ ನೀಡುವ ಮೂಲಕ ಸ್ವಯಂಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು ಕೆಲಸಗಾರರು ಮತ್ತು ಕಾರ್ಮಿಕರನ್ನು ಉತ್ತೇಜಿಸುತ್ತದೆ. ಇದರ ಪಿಂಚಣಿ ಯೋಜನೆಯ ಮೂಲಕ ಭವಿಷ್ಯದಲ್ಲಿ ನಿಮ್ಮ ನಿವೃತ್ತಿಗಾಗಿ ಹಣವನ್ನು ಸಂಗ್ರಹಿಸಬಹುದು.

ಅಟಲ್ ಪಿಂಚಣಿ ಯೋಜನೆ

ಅಟಲ್ ಪಿಂಚಣಿ ಯೋಜನೆ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಕೆಲಸದ ವರ್ಷಗಳಲ್ಲಿ ಸಣ್ಣ ಮೊತ್ತವನ್ನು ಹೂಡುವ ಮೂಲಕ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಡಿ 60 ವರ್ಷ ವಯಸ್ಸಿನ ನಂತರ ಗ್ರಾಹಕರಿಗೆ ಮಾಸಿಕ ಪಿಂಚಣಿಯು ತಿಂಗಳಿಗೆ 1,000 ರಿಂದ 5,000 ರೂ. ವ್ಯಾಪ್ತಿಯಲ್ಲಿ ಖಾತರಿ ಇರುತ್ತದೆ. ಆದರೆ ಈ ಪಿಂಚಣಿ ಮೊತ್ತವು ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Good News: ಮತ್ತೆ ಬಿಡುಗಡೆಯಾಗಲಿದೆ Yamaha RX100..!

ನಾಮಿನಿ

ಚಂದಾದಾರರ ಮರಣದ ಸಂದರ್ಭದಲ್ಲಿ ಯೋಜನೆಯಲ್ಲಿರುವ ನಾಮಿನಿಯು ಠೇವಣಿ ಮಾಡಿದ ಮೊತ್ತ ಅಥವಾ ಪಿಂಚಣಿ ಮೊತ್ತವನ್ನು ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ. ಅದೇ ರೀತಿ ಭಾರತ ಸರ್ಕಾರವು ಚಂದಾದಾರರ ಕೊಡುಗೆಯೊಂದಿಗೆ ಸಹ ಕೊಡುಗೆ ನೀಡುತ್ತದೆ. ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗೆ ಒಳಪಡದ ಮತ್ತು ತೆರಿಗೆದಾರರಲ್ಲದವರಿಗೆ ಸರ್ಕಾರದ ಸಹ-ಕೊಡುಗೆ ಲಭ್ಯವಿದೆ.

ಬ್ಯಾಂಕ್ ಖಾತೆ

18-40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಮತ್ತು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಈ ಯೋಜನೆಯ ಲಾಭ ಪಡೆಯಲು ಜನರು KYC ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಇದನ್ನೂ ಓದಿ: Bikes Sales: ಕೇವಲ 5 ಸಾವಿರಕ್ಕೆ ಈ ಅಗ್ಗದ ಮತ್ತು ಶಕ್ತಿಶಾಲಿ ಬೈಕ್ ಮನೆಗೆ ತನ್ನಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News