ಪೋಸ್ಟ್ ಆಫೀಸಿನ ಈ ಸ್ಕೀಮ್ ಗಳಲ್ಲಿ ಹಣ ಡಬಲ್ ಆಗಲಿದೆ
ಅಂಚೆ ಕಚೇರಿಯ 1 ವರ್ಷದಿಂದ 3 ವರ್ಷಗಳವರೆಗಿನ ಟೈಂ ಡೆಪಾಸಿಟ್ ಮೇಲೆ 5.5% ಬಡ್ಡಿ ನೀಡಲಾಗುತ್ತದೆ. ನೀವು ಅದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
ನವದೆಹಲಿ: Post Office Saving Schemes: ಪೋಸ್ಟ್ ಆಫೀಸ್ ನಲ್ಲಿ ಅನೇಕ ಉಳಿತಾಯ ಯೋಜನೆಗಳಿವೆ. ಈ ಯೋಜನೆಗಳ ಮೇಲೆ ಭರವಸೆಯಿಟ್ಟು ಇಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆಗಳಲ್ಲಿ (Post office scheme) ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುತ್ತೇವೆ ಎಂಬ ಭಯ ಇರುವುದಿಲ್ಲ. ಹೂಡಿದ ಹಣಕ್ಕೆ ಸರಿಯಾದ ರಿಟರ್ನ್ ಸಿಗುತ್ತದೆ. ಯಾವ ಯೋಜನೆಗಳಲ್ಲಿ ಎಷ್ಟು ಹಣ ಇರಿಸಿದರೆ, ಹಣ ಎಷ್ಟು ಸಮಯದ ನಂತರ ದ್ವಿಗುಣಗೊಳ್ಳುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಪೋಸ್ಟ್ ಆಫೀಸ್ ಟೈಂ ಡೆಪಾಸಿಟ್ :
ಅಂಚೆ ಕಚೇರಿಯ 1 ವರ್ಷದಿಂದ 3 ವರ್ಷಗಳವರೆಗಿನ ಟೈಂ ಡೆಪಾಸಿಟ್ (Time deposit) ಮೇಲೆ 5.5% ಬಡ್ಡಿ ನೀಡಲಾಗುತ್ತದೆ. ನೀವು ಅದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂತೆಯೇ, ನೀವು 5 ವರ್ಷಗಳ ಟೈಂ ಡೆಪಾಸಿಟ್ ಮೇಲೆ 6.7% ಬಡ್ಡಿಯನ್ನು ಪಡೆಯ ಬಹುದು. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ (Investment) ಮಾಡಿದರೆ, ನಿಮ್ಮ ಹಣವು ಸುಮಾರು 10.75 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಇದನ್ನೂ ಓದಿ : PF Balance Transfer: ಹಳೆಯ ಕಂಪನಿಯ PF Balance ಹೊಸ ಖಾತೆಗೆ ವರ್ಗಾಯಿಸಲು ಈ ಸಿಂಪಲ್ ಕೆಲಸ ಮಾಡಿ
2. ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಅಕೌಂಟ್:
ನಿಮ್ಮ ಹಣವನ್ನು ನೀವು ಪೋಸ್ಟ್ ಆಫೀಸ್ (Post office) ಉಳಿತಾಯ ಖಾತೆಯಲ್ಲಿ ಇಟ್ಟರೆ, ಹಣವು ದ್ವಿಗುಣಗೊಳ್ಳಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಇಲ್ಲಿ ಕೇವಲ 4.0 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ, ನಿಮ್ಮ ಹಣವು 18 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
3. ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್:
ನಿಮಗೆ ಪ್ರಸ್ತುತ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ನಲ್ಲಿ ಶೇಕಡಾ 5.8 ರಷ್ಟು ಬಡ್ಡಿ (Interest) ನೀಡಲಾಗುತ್ತಿದೆ, ಆದ್ದರಿಂದ ಹಣವನ್ನು ಈ ಬಡ್ಡಿದರದೊಂದಿಗೆ ಹೂಡಿಕೆ ಮಾಡಿದರೆ, ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
4. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :
ಪ್ರಸ್ತುತ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 6.6 ಶೇಕಡಾ ಬಡ್ಡಿ ಸಿಗುತ್ತದೆ. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಇದನ್ನೂ ಓದಿ : ಅಬ್ಬರಿಸುತ್ತಲೇ ಇದೆ ಕೋವಿಡ್ : ಈ ಬಾರಿಯೂ ಸಾಲ ಮೊರಟೋರಿಯಂ ಆಗಲಿದೆಯಾ?
5. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ :
ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ 7.4% ಬಡ್ಡಿಯನ್ನು ಪಾವತಿಸಲಾಗುತ್ತದೆ. ಸುಮಾರು 9.73 ವರ್ಷಗಳಲ್ಲಿ ನಿಮ್ಮ ಹಣ ಈ ಯೋಜನೆಯಲ್ಲಿ ದ್ವಿಗುಣಗೊಳ್ಳುತ್ತದೆ.
6. ಪೋಸ್ಟ್ ಆಫೀಸ್ ಪಿಪಿಎಫ್:
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಪ್ರಸ್ತುತ ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ, ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳು ತೆಗೆದುಕೊಳ್ಳುತ್ತದೆ.
7. ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಖಾತೆ:
ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಲ್ಲಿ ಪ್ರಸ್ತುತ 7.6% ನಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. ಬಾಲಕಿಯರಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ, ಹಣವನ್ನು ದ್ವಿಗುಣಗೊಳಿಸಲು ಸುಮಾರು 9.47 ವರ್ಷಗಳು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ : ಕ್ಯೂಆರ್ ಸ್ಕ್ಯಾನ್ ವಂಚನೆಗೆ ಬಲಿಯಾಗಬೇಡಿ..! ಇಲ್ಲಿದೆ ಅಗತ್ಯ ಮಾಹಿತಿ
8. ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ :
ಪ್ರಸ್ತುತ, ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ನಲ್ಲಿ (NSC) 6.8% ಬಡ್ಡಿ ನೀಡಲಾಗುತ್ತಿದೆ. ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಮೇಲೆ ಕೂಡಾ ವಿನಾಯಿತಿ ಪಡೆಯಬಹುದು. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.59 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
9. ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ:
ಪ್ರಸ್ತುತ, ಅಂಚೆ ಕಚೇರಿ ಕಿಸಾನ್ ವಿಕಾಸ್ ಪತ್ರ (KVP) ಯೋಜನೆಯಲ್ಲಿ ಶೇ 6.9 ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಬಡ್ಡಿದರದೊಂದಿಗೆ, ಇಲ್ಲಿ ಹೂಡಿಕೆ ಮಾಡಿದ ಮೊತ್ತವು 124 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಇದನ್ನೂ ಓದಿ : Life Insurance Policy: ಸರಿಯಾದ 'ಜೀವ ವಿಮಾ ಪಾಲಿಸಿ' ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.