ನವದೆಹಲಿ : Aadhaar Services : ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaara card) ಅತ್ಯಗತ್ಯ ದಾಖಲೆಯಾಗಿದೆ. ಇದಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಮಾಹಿತಿಯು ಮೊಬೈಲ್ ನಲ್ಲಿಯೇ ಲಭ್ಯವಿರುತ್ತದೆ. ಆದರೆ ದೇಶದಲ್ಲಿ ಅದೆಷ್ಟೋ ಜನ ಇನ್ನೂ ಇಂಟರ್ನೆಟ್ ಬಳಸುವುದಿಲ್ಲ.  ಅಂಥವರಿಗಾಗಿ UIDAI ಹೊಸ ಸೌಲಭ್ಯವನ್ನು ಆರಂಭಿಸಿದೆ. ಇದರ ಪ್ರಕಾರ ಕೇವಲ ಒಂದು SMS ಮೂಲಕ ಇಂಟರ್ನೆಟ್ ಇಲ್ಲದೆ ಆಧಾರ್ ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

UIDAI ನೀಡುತ್ತಿದೆ ಹೊಸ ಸೌಲಭ್ಯ : 
UIDAI ಆಧಾರ್‌ಗೆ ಸಂಬಂಧಿಸಿದ ಕೆಲವು ಸೇವೆಗಳನ್ನು ಆರಂಭಿಸಿದೆ. ಅದನ್ನು SMS ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಯುಐಡಿಎಐ ವೆಬ್‌ಸೈಟ್ ತೆರೆಯುವ ಅಗತ್ಯವಿಲ್ಲ ಅಥವಾ ಆಧಾರ್ (Aadhaar) ಆಪ್ ಡೌನ್‌ಲೋಡ್ ಕೂಡಾ ಮಾಡಬೇಕಿಲ್ಲ. ಅಂದರೆ, ಇದಕ್ಕಾಗಿ ಸ್ಮಾರ್ಟ್‌ಫೋನ್‌ನ (Smartphone) ಅಗತ್ಯವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯವಿಲ್ಲದ ಸರಳ ಫೀಚರ್ ಫೋನ್‌ನಿಂದಲೂ ಈ ಸೇವೆಗಳನ್ನು ಪಡೆಯಬಹುದು.


ಇದನ್ನೂ ಓದಿ : SBI New Rule: ಯಾವುದೇ ವಹಿವಾಟಿಗೂ ಮೊದಲು ಬ್ಯಾಂಕಿನ ಈ ನಿಯಮ ನಿಮಗೂ ತಿಳಿದಿರಲಿ


ಸಿಗುತ್ತದೆ ವರ್ಚುವಲ್ ಐಡಿ ಸೇರಿದಂತೆ ಅನೇಕ ಸೌಲಭ್ಯಗಳು : 
ಈ ಸೇವೆಯೊಂದಿಗೆ, ಬಳಕೆದಾರರು ಆಧಾರ್‌ಗೆ ಸಂಬಂಧಿಸಿದ ಹಲವು ಸೇವೆಗಳಾದ ವರ್ಚುವಲ್ ಐಡಿಯ ಜನರೇಶನ್, ಆಧಾರ್ ಅನ್ನು ಲಾಕ್ (Aadhaar lock) ಅಥವಾ ಅನ್‌ಲಾಕ್ ಮಾಡುವುದು. ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್‌ಲಾಕ್ ಮಾಡುವ ಸೌಲಭ್ಯ ಇದರಲ್ಲಿದೆ. ಇಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಹೆಲ್ಪ್ ಲೈನ್ ನಂಬರ್ 1947 ಗೆ SMS ಕಳುಹಿಸಬೇಕು.  ಈ ರೀತಿ ಕೇವಲ ಒಂದು SMS ಮೂಲಕ ಆಧಾರ್ ಸಂಬಂಧಿತ ಸೇವೆಗಳನ್ನು ಪಡೆಯಬಹುದು. 


ವರ್ಚುವಲ್ ಐಡಿ ಜನರೇಟ್ (Virtual ID) ಮಾಡುವುದು ಹೀಗೆ : 
1. ವರ್ಚುವಲ್ ಐಡಿಯನ್ನು ಜನರೇಟ್ ಮಾಡಲು ಮೊಬೈಲ್‌ನ ಮೆಸೇಜ್ ಬಾಕ್ಸ್ ಗೆ ಹೋಗಿ GVID (SPACE)  ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ನಮೂದಿಸಿ ಮತ್ತು ಅದನ್ನು 1947 ಗೆ ಕಳುಹಿಸಿ.
2. ನಿಮ್ಮ VID ಪಡೆಯಲು RVID (SPACE) ಎಂದು ಟೈಪ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ.
3. ನೀವು OTP ಅನ್ನು ಎರಡು ರೀತಿಯಲ್ಲಿ ಪಡೆಯಬಹುದು. ಮೊದಲು ನಿಮ್ಮ ಆಧಾರ್ ಸಂಖ್ಯೆಯ ಮೂಲಕ, ಎರಡನೆಯದು ನಿಮ್ಮ ವಿಐಡಿ ಮೂಲಕ.
4. ಆಧಾರ್ ಗೆ OTP ಟೈಪ್ ಮಾಡಿ- GETOTP (ಸ್ಪೇಸ್) ಮತ್ತು ನಿಮ್ಮ ಆಧಾರ್ ನ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ.
5. VID ಯಿಂದ OTP ಪಡೆಯಲು - GETOTP (ಸ್ಪೇಸ್) ಮತ್ತು SMS ನಲ್ಲಿ ನಿಮ್ಮ ಅಧಿಕೃತ ವರ್ಚುವಲ್ ID ಯ ಕೊನೆಯ 6 ಅಂಕೆಗಳನ್ನು ನಮೂದಿಸಿ


ಇದನ್ನೂ ಓದಿ :  IRCTC iPay: ಈಗ ರೈಲು ಟಿಕೆಟ್ ರದ್ದತಿ ಮೇಲೆ ತಕ್ಷಣವೇ ಸಿಗಲಿದೆ ರೀಫಂಡ್


ಆಧಾರ್ ಅನ್ನು ಲಾಕ್ ಮಾಡುವುದು ಮತ್ತು ಅನ್ಲಾಕ್ ಮಾಡುವುದು ಹೇಗೆ ?
ನೀವು ಕೇವಲ ಒಂದು SMS ಮೂಲಕ ನಿಮ್ಮ ಆಧಾರ್ ಅನ್ನು ಲಾಕ್ ಅಥವಾ ಅನ್ಲಾಕ್ ಮಾಡಬಹುದು. ಇದರ ಪ್ರಯೋಜನವೆಂದರೆ ಯಾವುದೇ ವ್ಯಕ್ತಿ ನಿಮ್ಮ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗೆ ಬೇಕಾದಾಗ ನೀವು ಅದನ್ನು ಲಾಕ್ ಮಾಡಬಹುದು .. ಇನ್ನು ನಿಮಗೆ ಬೇಕಾದಾಗ ಅನ್ಲಾಕ್ ಮಾಡಿಕೊಳ್ಳಬಹುದು. 


SMS ಮೂಲಕ ಆಧಾರ್ ಅನ್ನು ಲಾಕ್ ಮಾಡಿ :
1. SMS TEXT ಗೆ ಹೋಗಿ  GETOTP (SPACE) ಮತ್ತು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ.
2. OTP ಸ್ವೀಕರಿಸಿದ ತಕ್ಷಣ ಎರಡನೇ SMS ಕಳುಹಿಸಬೇಕು. ಇದಕ್ಕಾಗಿ LOCKUID (SPACE) ಆಧಾರ್‌ನ ಕೊನೆಯ 4 ಅಂಕೆಗಳನ್ನು ನಮೂದಿಸಿ.


SMS ಮೂಲಕ ಆಧಾರ್ ಅನ್ ಲಾಕ್ ಮಾಡಿ :
1: SMS ಗೆ ಹೋಗಿ GETOTP (SPACE) ಎಂದು ಟೈಪ್ ಮಾಡಿ ನಂತರ ನಿಮ್ಮ VID ಯ ಕೊನೆಯ 6 ಅಂಕೆಗಳನ್ನು ನಮೂದಿಸಿ.
2: OTP ಸ್ವೀಕರಿಸಿದ ತಕ್ಷಣ ಎರಡನೇ SMS ಕಳುಹಿಸಬೇಕು.  UNLOCK (SPACE) ಎಂದು ಬರೆದು,  VID ಯ ಕೊನೆಯ 6 ಅಂಕೆಗಳನ್ನು ಹಾಕಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ