ನವದೆಹಲಿ : ಆಧಾರ್ ಕಾರ್ಡ್ ಇಂದಿನ ಕಾಲದಲ್ಲಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕಿಂಗ್ ಮತ್ತೆ ಸರ್ಕಾರಿ ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ನಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ನವೀಕರಿಸಬೇಕು. ಇದರ ಅಡಿಯಲ್ಲಿ, ಯುಐಡಿಎಐ ಕೂಡ ಆಧಾರ್ಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡುತ್ತಿದೆ. ಒಂದು ಬಿಗ್ ಅಪ್ಡೇಟ್ ನೀಡಿದೆ, UIDAI ಇತ್ತೀಚೆಗೆ ಆಧಾರ್ ಗೆ ಸಂಬಂಧಿಸಿದ ಎರಡು ಸೇವೆಗಳನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಿದೆ. ಇದು ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ.
ವಿಳಾಸ ದೃಡೀಕರಣ ಪತ್ರ
ಮುಂದಿನ ಆದೇಶದವರೆಗೆ ವಿಳಾಸ ದೃಡೀಕರಣ ಪತ್ರದ ಮೂಲಕ ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ನವೀಕರಿಸುವ ಸೌಲಭ್ಯವನ್ನು ಯುಐಡಿಎಐ(UIDAI) ನಿಲ್ಲಿಸಿದೆ. ಬಾಡಿಗೆದಾರರು ಅಥವಾ ಇತರ ಆಧಾರ್ ಕಾರ್ಡ್ ಹೊಂದಿರುವವರು ಈ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು. UIDAI ತನ್ನ ವೆಬ್ಸೈಟ್ನಿಂದ ವಿಳಾಸ ದೃಡೀಕರಣ ಪತ್ರಕ್ಕೆ ಸಂಬಂಧಿಸಿದ ಆಯ್ಕೆಯನ್ನು ತೆಗೆದುಹಾಕಿದೆ. UIDAI ಪ್ರಕಾರ, 'ಮುಂದಿನ ಆದೇಶದವರೆಗೆ ಅಡ್ರೆಸ್ ಅಪ್ಡೇಟ್ ಲೆಟರ್ ಸೌಲಭ್ಯವನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ : Today Gold-Silver Price : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಮತ್ತೆ ಏರಿಕೆ ಆದ ಚಿನ್ನದ ಬೆಲೆ
ಈ ಇತರ ಮಾನ್ಯ ವಿಳಾಸ ಪುರಾವೆಗಳ ಪಟ್ಟಿಯಿಂದ (https://uidai.gov.in/images/commdoc/valid_documents_list.pdf) ಯಾವುದಾದರೂ ಒಂದು ವಿಳಾಸ ಪುರಾವೆ ಮೂಲಕ ನಿಮ್ಮ ವಿಳಾಸವನ್ನು ನೀವು ನವೀಕರಿಸಬಹುದು ಎಂದು ತಿಳಿಸದೆ.
ಎಲ್ಲರ ಮೇಲೂ ಬೀಳಲಿದೆ ಪರಿಣಾಮ
ಈ ನಿರ್ಧಾರದಿಂದ, ಆಧಾರ್ ಕಾರ್ಡ್(Aadhar Card)ನಲ್ಲಿ ವಿಳಾಸವನ್ನು ನವೀಕರಿಸಲು ಜನರಿಗೆ ತೊಂದರೆಯಾಗುತ್ತದೆ. ವಿಶೇಷವಾಗಿ ಬಾಡಿಗೆ ಮನೆಯಲ್ಲಿ ವಾಸಿಸುವ ಅಥವಾ ಉದ್ಯೋಗವನ್ನು ಬದಲಾಯಿಸುತ್ತಿರುವ ಜನರು ಈಗ ಆಧಾರ್ನಲ್ಲಿ ವಿಳಾಸವನ್ನು ನವೀಕರಿಸಲು ಕಷ್ಟವಾಗಬಹುದು. ವಿಳಾಸವನ್ನು ಮಾರ್ಪಡಿಸಲು ಬೇರೆ ಯಾವುದೇ ಪುರಾವೆಗಳಿಲ್ಲದವರಿಗೆ, ಅವರಿಗೆ ದೊಡ್ಡ ಸಮಸ್ಯೆಯೂ ಉಂಟಾಗಬಹುದು.
ಆಧಾರ್ ಕಾರ್ಡ್ ಮರು ಮುದ್ರಣ ಹಳೆಯ ಶೈಲಿಯನ್ನು ಸಹ ಬಂದ್
UIDAI ಆಧಾರ್ ಕಾರ್ಡ್ ಮರು ಮುದ್ರಣದ ಸೇವೆಯನ್ನು ಹಳೆಯ ಶೈಲಿಯನ್ನ ನಿಲ್ಲಿಸಿದೆ. ಈಗ ಹಳೆ ಕಾರ್ಡ್ ಬದಲಿಗೆ, UIDAI ಪ್ಲಾಸ್ಟಿಕ್ ಪಿವಿಸಿ ಕಾರ್ಡ್(PVC Card)ಗಳನ್ನು ನೀಡುತ್ತದೆ. ಈ ಕಾರ್ಡ್ ಅನ್ನು ನೀವು ಎಲ್ಲಿಗೆ ಬೇಕಾದ್ರು ಕೊಂಡೊಯ್ಯುವುದು ಸುಲಭ. ಇದು ಡೆಬಿಟ್ ಕಾರ್ಡ್ ಇದ್ದಂತೆ. ಎಲ್ಲೆಡೆ ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ಸುಲಭವಾಗಿ ಈ ಹೊಸ ಕಾರ್ಡ್ ಅನ್ನು ಪಾಕೆಟ್ ಮತ್ತು ವ್ಯಾಲೆಟ್ ನಲ್ಲಿ ಇರಿಸಿಕೊಳ್ಳಬಹುದು.
ಇದನ್ನೂ ಓದಿ : Today Petrol-Diesel Rate : ಅಗ್ಗವಾಯ್ತು ಪೆಟ್ರೋಲ್-ಡೀಸೆಲ್ ಬೆಲೆ ; ಇಂದು ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
ಟ್ವಿಟರ್ನಲ್ಲಿ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ UIDAI, ಆಧಾರ್ ಸಹಾಯ ಕೇಂದ್ರ(Aadhar Help Center)ವು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದು, 'ಪ್ರಿಯ ಗ್ರಾಹಕರೇ, ಆಧಾರ್ ಮರು ಮುದ್ರಣ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬದಲಾಗಿ ನೀವು ಆಧಾರ್ ಪಿವಿಸಿ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದು. ನೀವು ಬಯಸಿದಲ್ಲಿ, ನೀವು ಇ-ಆಧಾರ್ನ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಕಾಗದದ ರೂಪದಲ್ಲಿ ಇರಿಸಿಕೊಳ್ಳಬಹುದು. ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.