ಕನಸಿನ ಮನೆ ಖರೀದಿಗೆ ಯೋಚಿಸುತ್ತಿದ್ದೀರಾ? ಈ ಬ್ಯಾಂಕ್‌ಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಹೋಮ್ ಲೋನ್
ಕನಸಿನ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಭಾರತವು ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಕೆಲವು ಬ್ಯಾಂಕ್‌ಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್ ನೀಡುತ್ತಿವೆ. ಯಾವ ಬ್ಯಾಂಕ್‌ಗಳಲ್ಲಿ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ ಎಂದು ತಿಳಿಯೋಣ.
ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮ ಕನಸಿನ ಮನೆ ಕಟ್ಟಿಸುವ ಆಸೆ ಇರುತ್ತದೆ. ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚಾಗಿ ಪುರುಷರೇ ಆದರೂ ಮಹಿಳೆಯರು ಅಥವಾ ಮಹಿಳೆಯರ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಪ್ರಯೋಜನಕಾರಿ ಆಗಿದೆ. ನೀವು ಮನೆ ಕೊಳ್ಳಲು ಯೋಚಿಸುತ್ತಿದ್ದರೆ ಕೆಲವು ಬ್ಯಾಂಕ್‌ಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಲಭ್ಯವಿದೆ.
ಭಾರತವು ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಕೆಲವು ಬ್ಯಾಂಕ್‌ಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್ ನೀಡುತ್ತಿವೆ. ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (NBFI ಗಳು), ಮತ್ತು ಅಡಮಾನ ಸಾಲದಾತರು ಮಹಿಳಾ ಅರ್ಜಿದಾರರಿಗೆ ವಿಶೇಷ ಬಡ್ಡಿದರದಲ್ಲಿ ಗೃಹ ಸಾಲ ಸೌಲಭ್ಯವನ್ನು ನೀಡುತ್ತಿದ್ದಾರೆ.
ಈ ರೀತಿಯಾಗಿ ಸುಮಾರು 50,000 - 1,00,000 ರೂಪಾಯಿಗಳನ್ನು ಉಳಿಸಬಹುದು:
ಅಷ್ಟೇ ಅಲ್ಲ, ಸರ್ಕಾರದ ಪ್ರಕಾರ, ಗೃಹ ಸಾಲವನ್ನು ತೆಗೆದುಕೊಳ್ಳುವ ಮಹಿಳೆಯರು ಮುದ್ರಾಂಕ ಶುಲ್ಕದಲ್ಲಿ 1% ರಿಂದ 2% ವರೆಗೆ ರಿಯಾಯಿತಿ ಪಡೆಯಬಹುದು. ಈ ರೀತಿಯಾಗಿ, ಅವರು 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಸುಮಾರು 50,000 - 1,00,000 ರೂಪಾಯಿಗಳನ್ನು ಉಳಿಸಬಹುದು.
ತೆರಿಗೆ ಪ್ರಯೋಜನಗಳು:
ಗೃಹ ಸಾಲ ಮರುಪಾವತಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ತೆರಿಗೆ ವಿನಾಯಿತಿ ಇಲ್ಲ. ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಗರಿಷ್ಠ ತೆರಿಗೆ ವಿನಾಯಿತಿ ಕ್ರಮವಾಗಿ 1.5 ಲಕ್ಷ ಮತ್ತು 2 ಲಕ್ಷ. ಪತಿ ಮತ್ತು ಹೆಂಡತಿ ಜಂಟಿಯಾಗಿ ಆಸ್ತಿಯನ್ನು ಹೊಂದಿದ್ದರೆ ಮತ್ತು ಪ್ರತಿಯೊಬ್ಬರೂ ಪ್ರತ್ಯೇಕ ಆದಾಯದ ಮೂಲವನ್ನು ಹೊಂದಿದ್ದರೆ, ಇಬ್ಬರೂ ತೆರಿಗೆ ಕಡಿತಕ್ಕೆ ಅರ್ಹರಾಗಬಹುದು.
ಇದನ್ನೂ ಓದಿ- 7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!
ಯಾವ ಬ್ಯಾಂಕ್‌ಗಳಲ್ಲಿ ಮಹಿಳೆಯರಿಗೆ ಹೋಂ ಲೋನ್ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:-
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:
ಭಾರತದ ಅತಿ ದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ 5 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿದರ ರಿಯಾಯಿತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಬಡ್ಡಿದರಗಳು 9.15% ನಿಂದ ಪ್ರಾರಂಭವಾಗುತ್ತದೆ. ಆದರೂ, ಇದು ಅವರ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.
ಎಚ್‌ಡಿಎಫ್‌ಸಿ:
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿಯೂ ಮಹಿಳಾ ಸಾಲಗಾರರಿಗೆ ಗೃಹ ಸಾಲದ ಮೇಲೆ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಲಭ್ಯವಾಗಲಿದೆ. ಮಹಿಳಾ ಸಾಲಗಾರರಿಗೆ ಬಡ್ಡಿ ದರವು 8.95% ರಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಬಡ್ಡಿದರಗಳು ಅವರ ಕ್ರೆಡಿಟ್ ಸ್ಕೋರ್ ಮೇಳ ಅವಲಂಬಿತವಾಗಿರುತ್ತದೆ.
ಕೆನರಾ ಬ್ಯಾಂಕ್:
ಕೆನರಾ ಬ್ಯಾಂಕ್ ಗೃಹ ಸಾಲದ ಬಡ್ಡಿ ದರಗಳು 8.85% ರಿಂದ ಪ್ರಾರಂಭವಾಗುತ್ತವೆ. ಮಹಿಳಾ ಸಾಲಗಾರರಿಗೆ, ಗೃಹ ಸಾಲದ ಮೇಲೆ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಲಭ್ಯವಿದೆ.
ಇದನ್ನೂ ಓದಿ- ITR ಫೈಲ್ ಮಾಡುವ ಮುನ್ನ ಗಮನಿಸಿ! ಈ ಕೆಲಸ ಮಾಡದೇ ಹೋದರೆ ಆಗುವುದಿಲ್ಲ ಟ್ಯಾಕ್ಸ್ ರಿಟರ್ನ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮಹಿಳೆಯರಿಗೆ 0.05% ರಿಯಾಯಿತಿಯಲ್ಲಿ ಸಾಲ ಸೌಲಭ್ಯ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.