ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ! ಬೆಂಗಳೂರಿನಿಂದಲೇ ಓಡಾಟ ನಡೆಸಲಿರುವ ರೈಲು
ಎರಡು ನಗರಗಳ ನಡುವಿನ 610-ಕಿಮೀ ದೂರವನ್ನು ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಇದು ಡುರೊಂಟೊ ಎಕ್ಸ್‌ಪ್ರೆಸ್‌ಗಿಂತ ಎರಡು ಗಂಟೆಗಳ ವೇಗದಲ್ಲಿ ಚಲಿಸುತ್ತದೆ.
ಬೆಂಗಳೂರು : ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ ಎಕ್ಸ್ಪ್ರೆಸ್ ರೈಲು. ಎರಡು ರಾಜ್ಯಗಳ ಮದ್ಯೆ ಈ ರೈಲು ಓಡಾಟ ನಡೆಸಲಿದೆ. ಮೂಲಗಳ ಪ್ರಕಾರ ಇದೇ ತಿಂಗಳು ಅಂದರೆ ಆಗಸ್ಟ್ ನಿಂದಲೇ ಈ ರೈಲು ಬೆಂಗಳೂರು ಮತ್ತು ಆಂಧ್ರಪ್ರದೇಶ ನಡುವೆ ಓಡಾಟ ಆರಂಭಿಸಲಿದೆ. ಈ ರೈಲು ಸುಮಾರು ಏಳು ಗಂಟೆಗಳಲ್ಲಿ ಯಶವಂತಪುರದಿಂದ ಕಾಸಿಗುದ ತಲುಪಲು ಕೇವಲ ಏಳು ಗಂಟೆ ಸಾಕು.
ಕಳೆದ ಎರಡು ದಿನಗಳಿಂದ ಕಾಚೀಗುಡ ಮತ್ತು ಧೋನೆ ನಡುವೆ ಈ ರೈಲಿನ ಪ್ರಾಯೋಗಿಕ ಓಡಾಟ ನಡೆಸಲಾಗುತ್ತಿದೆ. ಪೂರ್ಣ ಪ್ರಮಾಣದ ರೈಲು ಸೆಟ್ ಸಿಕ್ಕ ತಕ್ಷಣ ರೈಲು ಸೇವೆ ಆರಂಭವಾಗಲಿದೆ ಎಂದು ಎಸ್‌ಸಿಆರ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ ಇದೆ..?
ನಿಖರವಾದ ಮಾರ್ಗ, ಮತ್ತುಯಾವ ದಿನಾಂಕದಿಂದ ಈ ರೈಲು ಓಡಾಟ ಆರಂಭವಾಗಲಿದೆ ಎನ್ನುವುದು ಇನ್ನು ಕೂಡಾ ದೃಢಪಟ್ಟಿಲ್ಲ. ಈ ರೈಲು 16 ಕೋಚ್‌ಗಳನ್ನು ಹೊಂದಿರರಲಿದ್ದು, ಎರಡು ನಗರಗಳ ನಡುವಿನ 610-ಕಿಮೀ ದೂರವನ್ನು ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಇದು ಡುರೊಂಟೊ ಎಕ್ಸ್‌ಪ್ರೆಸ್‌ಗಿಂತ ಎರಡು ಗಂಟೆಗಳ ವೇಗದಲ್ಲಿ ಚಲಿಸುತ್ತದೆ.
ಜೂನ್ 27, 2023 ರಂದು, ಬೆಂಗಳೂರಿನ ಎರಡನೇ ವಂದೇ ಭಾರತ್ ರೈಲು (ಬೆಂಗಳೂರು-ಹುಬ್ಬಳ್ಳಿ-ಧಾರವಾಡ) ಉದ್ಘಾಟನೆಯಾಯಿತು. ಬೆಂಗಳೂರಿನ ಮೂಲಕ ಚಲಿಸುವ ಮೊದಲ ವಂದೇ ಭಾರತ್ ಚೆನ್ನೈ-ಮೈಸೂರು ರೈಲನ್ನು ನವೆಂಬರ್ 11, 2022 ರಂದು ಉದ್ಘಾಟಿಸಲಾಯಿತು. ಹೈದರಾಬಾದ್ ನಲ್ಲಿ ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಜನವರಿ 15, 2023 ರಂದು ಪ್ರಾರಂಭವಾದರೆ ತಿರುಪತಿಗೆ ಏಪ್ರಿಲ್ 8, 2023 ರಂದು ಈ ರೈಲು ಸೇವೆ ಸಿಕ್ಕಿತ್ತು.
ಇದನ್ನೂ ಓದಿ : ಮಹಿಳೆಯರ ಕಲ್ಯಾಣಕ್ಕಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿವು! ನೀವೂ ಲಾಭ ಪಡೆಯಬಹುದು
ಈ ಸೆಮಿ-ಹೈ-ಸ್ಪೀಡ್ ರೈಲುಗಳು ಆಧುನಿಕ ಸೌಕರ್ಯಗಳಾದ ಇನ್ಫೋಟೈನ್‌ಮೆಂಟ್ ಸಿಸ್ಟಂಗಳು, ಸಿಸಿಟಿವಿ ಕ್ಯಾಮೆರಾಗಳು, ಆರಾಮದಾಯಕ ಆಸನಗಳು, ಪ್ಯಾಂಟ್ರಿ ಕಾರ್, ಸ್ವಯಂಚಾಲಿತ ಬಾಗಿಲುಗಳು, ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು ಮತ್ತು ವೈ-ಫೈಗಳನ್ನು ಹೊಂದಿವೆ. ಈ ರೈಲುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ ಬಾಡಿಯನ್ನು ಹೊಂದಿದ್ದು ಗರಿಷ್ಠ 180 kmph ವೇಗದಲ್ಲಿ ಚಲಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.