Bank Holidays in December 2022 : ಪ್ರತಿ ತಿಂಗಳಿನಂತೆ ಡಿಸೆಂಬರ್ ರಜೆಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಮುಂದಿನ ತಿಂಗಳು ಹೊಸ ವರ್ಷದ ಆಚರಣೆಗಳ ಜೊತೆಗೆ, ಕ್ರಿಸ್ಮಸ್ ಮುಂತಾದ ಎಲ್ಲಾ ಸಂದರ್ಭಗಳಲ್ಲಿ ಬ್ಯಾಂಕ್ ರಜೆ ಇರಲಿದೆ. ಡಿಸೆಂಬರ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಮಾಡುವುದಿದ್ದರೆ, ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದು ಸೂಕ್ತ. ಡಿಸೆಂಬರ್ ತಿಂಗಳಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕ್ ಬಂದ್ ಇರಲಿವೆ. 


COMMERCIAL BREAK
SCROLL TO CONTINUE READING

 ಡಿಸೆಂಬರ್ 3 ರಂದು ತಿಂಗಳ ಮೊದಲ ರಜೆ : 
ಡಿಸೆಂಬರ್ ತಿಂಗಳಲ್ಲಿ ಒಟ್ಟು 13 ದಿನ ಬ್ಯಾಂಕ್ ರಜೆ ಇರಲಿದೆ. ಈ ರಜೆಗಳಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳು ಕೂಡಾ ಸೇರಿವೆ.    RBI ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ, ಈ ರಜಾದಿನಗಳು ರಾಜ್ಯಗಳಿಗನುಗುಣವಾಗಿ ಬದಲಾಗುತ್ತದೆ.  ಪ್ರಾದೇಶಿಕ ರಜಾದಿನಗಳನ್ನು ಸಂಬಂಧಿತ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಡಿಸೆಂಬರ್‌ ಮೂರರಂದು ತಿಂಗಳ ಮೊದಲ ರಜೆ ಇರುತ್ತದೆ. 


ಇದನ್ನೂ ಓದಿ : Gold Price Today : ಒಮ್ಮೆಲೇ ಏರಿಕೆಯಾಯಿತು ಚಿನ್ನ ಬೆಳ್ಳಿ ದರ , ಇಂದಿನ ಬೆಲೆ ತಿಳಿಯಿರಿ


ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನದ ರಜೆ : 
ಡಿಸೆಂಬರ್ 4 ರಂದು ಭಾನುವಾರ ರಜೆ. ಡಿಸೆಂಬರ್ 10 ಮತ್ತು 11 ರಂದು ತಿಂಗಳ ಎರಡನೇ ಶನಿವಾರ, ಭಾನುವಾರವಾದ ಕಾರಣ, ಬ್ಯಾಂಕ್ ಎರಡು ದಿನಗಳ ಕಾಲ ಮುಚ್ಚಿರುತ್ತದೆ. ಇದರ ನಂತರ, ಡಿಸೆಂಬರ್ 12 ರಂದು ದೇಶದ ಕೆಲವು ಭಾಗಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಡಿಸೆಂಬರ್ 18 ಭಾನುವಾರ ಮತ್ತು 19 ಗೋವಾ ವಿಮೋಚನಾ ದಿನವಾಗಿದೆ. 24, 25 ಮತ್ತು 26 ಡಿಸೆಂಬರ್ ಕ್ರಿಸ್‌ಮಸ್‌ಗಾಗಿ   ಕೆಲವು ರಾಜ್ಯಗಳಲ್ಲಿ   ರಜೆ ಇರುತ್ತದೆ. 


ಇದರ ನಂತರ, ಡಿಸೆಂಬರ್ 29, 30 ಮತ್ತು 31 ರಂದು ಸತತ ಮೂರು ದಿನಗಳವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. 29 ರಂದು ಗುರು ಗೋವಿಂದ್ ಸಿಂಗ್ ಜನ್ಮದಿನ, 30 ರಂದು ಯು ಕಿಯಾಂಗ್ ನಂಗ್ಬಾಹ್ ಮತ್ತು 31 ರಂದು ಹೊಸ ವರ್ಷದ ಮುನ್ನಾದಿನದಂದು ಬ್ಯಾಂಕುಗಳು ಮುಚ್ಚಲ್ಪತಟ್ಟಿ ರುತ್ತದೆ. 


ಇದನ್ನೂ ಓದಿ : Today Vegetable Price: ಮಾರುಕಟ್ಟೆಗೆ ತೆರಳುವ ಮುನ್ನ ಪರಿಶೀಲಿಸಿ ಇಂದಿನ ತರಕಾರಿ ಬೆಲೆ


ಡಿಸೆಂಬರ್ ತಿಂಗಳ ರಜಾ ದಿನದ ಪಟ್ಟಿ ಹೀಗಿದೆ : 
1. 3ನೇ ಡಿಸೆಂಬರ್  ಗುರುವಾರ-ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ - ಪಣಜಿ (ಗೋವಾ) 
2. 4ನೇ ಡಿಸೆಂಬರ್ ಭಾನುವಾರ-ವಾರದ ರಜೆ
3. 10ನೇ ಡಿಸೆಂಬರ್ ಶನಿವಾರ-ತಿಂಗಳ ಎರಡನೇ ಶನಿವಾರ
4. 11ನೇ ಡಿಸೆಂಬರ್  ಭಾನುವಾರ-ವಾರದ ರಜೆ
5. 12 ಡಿಸೆಂಬರ್ ಸೋಮವಾರ- ಪಾ-ಟೋಗನ್ ನೆಂಗ್ಮಿಂಜ ಸಂಗ್ಮಾ- ಶಿಲಾಂಗ್ 
6. 18  ಡಿಸೆಂಬರ್ ಭಾನುವಾರ-ವಾರದ ರಜೆ
7. 19 ಡಿಸೆಂಬರ್ ಸೋಮವಾರ-ಗೋವಾ ವಿಮೋಚನಾ ದಿನ- ಪಣಜಿ (ಗೋವಾ)
8. 24ನೇ ಡಿಸೆಂಬರ್ ಶನಿವಾರ - ನಾಲ್ಕನೇ ಶನಿವಾರ 
9. 25ನೇ ಡಿಸೆಂಬರ್ ಭಾನುವಾರ - ವಾರದ ರಜೆ 
10. 26 ಡಿಸೆಂಬರ್ ಸೋಮವಾರ-ಲೋಸುಂಗ್ / ನಮ್ಸಂಗ್-ಐಜ್ವಾಲ್, ಗ್ಯಾಂಗ್ಟಾಕ್, ಶಿಲ್ಲಾಂಗ್
11. 29 ಡಿಸೆಂಬರ್ ಗುರುವಾರ -ಗುರು ಗೋವಿಂದ್ ಸಿಂಗ್ ಜನ್ಮದಿನ -ಚಂಡೀಗಢ
12. 30 ಡಿಸೆಂಬರ್ ಶುಕ್ರವಾರ -ಯು ಕಿಯಾಂಗ್ ನಂಗ್ಬಾ-ಶಿಲ್ಲಾಂಗ್
13. 31 ಡಿಸೆಂಬರ್ ಶನಿವಾರ -ಹೊಸ ವರ್ಷದ ಮುನ್ನಾದಿನ-ದೇಶದ  ಕೆಲವು ಭಾಗಗಳಲ್ಲಿ ಮಾತ್ರ 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.