Best Mileage Cars : ಮಾರುತಿ ಸುಜುಕಿ ಸೆಲೆರಿಯೊ ದೇಶದ ಅತ್ಯಂತ ಇಂಧನ ದಕ್ಷ ಸಿಎನ್‌ಜಿ ಕಾರು. ಇದು ಪೆಟ್ರೋಲ್ ಮತ್ತು CNG ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಸಿಎನ್ ಜಿ ಆವೃತ್ತಿಯು 35 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡಬಲ್ಲದು. ಮೈಲೇಜ್ ಅನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ, ಇದು ಟಾಟಾ ಟಿಯಾಗೊ, ಮಾರುತಿ ವ್ಯಾಗನ್ಆರ್ ಮತ್ತು ಹ್ಯುಂಡೈ ಸ್ಯಾಂಟ್ರೊದಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. 


COMMERCIAL BREAK
SCROLL TO CONTINUE READING

ಮಾರುತಿ ಸುಜುಕಿ ಸೆಲೆರಿಯೊ ಬೆಲೆ :
ಮಾರುತಿ ಸುಜುಕಿ ಸೆಲೆರಿಯೊ ಬೆಲೆಯು 5.25 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್ ವೇರಿಯಂಟ್‌ ಬೆಲೆ 7 ಲಕ್ಷದವರೆಗೆ ತಲುಪುತ್ತದೆ. ಸೆಲೆರಿಯೊ  LXi, VXi, ZXi ಮತ್ತು ZXi+ ಎಂಬ ನಾಲ್ಕು ಹಂತಗಳಲ್ಲಿ ಲಭ್ಯವಿದೆ. ಇದರ CNG ರೂಪಾಂತರವು VXI ಟ್ರಿಮ್ ಮಟ್ಟದಲ್ಲಿ ಲಭ್ಯವಿದೆ.


ಇದನ್ನೂ ಓದಿ : Gold Price Today : ಏರುತ್ತಲೇ ಇದೆ ಚಿನ್ನದ ಬೆಲೆ, ಖರೀದಿ ಬಲು ಕಷ್ಟ


ಸೆಲೆರಿಯೊದ ಎಂಜಿನ್ ವಿಶೇಷಣಗಳು : 
ಹ್ಯಾಚ್‌ಬ್ಯಾಕ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು 67 PS ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು  5-ಸ್ಪೀಡ್ ಮ್ಯಾನುವಲ್ (ಸ್ಟ್ಯಾಂಡರ್ಡ್) ಮತ್ತು 5-ಸ್ಪೀಡ್ AMT ಆಪ್ಷನಲ್ ನೊಂದಿಗೆ ಬರುತ್ತದೆ. ಇದು ಸೆಗ್ಮೆಂಟ್ ಫಸ್ಟ್ ಆಟೋಮ್ಯಾಟಿಕ್ ಐಡಲ್ ಸ್ಟಾರ್ಟ್-ಸ್ಟಾಪ್ ವೈಶಿಷ್ಟ್ಯವನ್ನು ಪಡೆಯುತ್ತದೆ.


 ಇನ್ನು,  CNGಯಲ್ಲಿ ಸೆಲೆರಿಯೊದ ಎಂಜಿನ್ ಉತ್ಪಾದನೆಯು 56.7PS / 82Nm ಆಗಿದೆ. ಇದು CNGಯಲ್ಲಿ 35.6 km/kg ಮೈಲೇಜ್ ನೀಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ.  ಇದರಲ್ಲಿ ಯಾವುದೇ ರೀತಿಯ AMTಆಯ್ಕೆ ಲಭ್ಯವಿಲ್ಲ.

ಇದನ್ನೂ ಓದಿ :  SBI ಅಥವಾ Post Office ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಯಾವುದರಲ್ಲಿ ಬೇಗ ಹಣ ಡಬಲ್ ಆಗುತ್ತದೆ?


ಸೆಲೆರಿಯೊದ ವೈಶಿಷ್ಟ್ಯಗಳು  :
ಸೆಲೆರಿಯೊ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,  ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್,  ಪಾಸಿವ್  ಕೀಲೆಸ್ ಎಂಟ್ರಿ, ಸ್ಟೀರಿಂಗ್ ವೀಲ್ ಮೌಂಟೆಡ್ ಆಡಿಯೊ  ಕಂಟ್ರೋಲ್ಸ್ , ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕ್ ಒಆರ್‌ವಿಎಂಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.


ಸುರಕ್ಷತೆಯ ವಿಷಯದಲ್ಲಿ, ಮಾರುತಿ ಸೆಲೆರಿಯೊ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್-ಹೋಲ್ಡ್ ಅಸಿಸ್ಟ್  ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.