Gold Price Today : ಏರುತ್ತಲೇ ಇದೆ ಚಿನ್ನದ ಬೆಲೆ, ಖರೀದಿ ಬಲು ಕಷ್ಟ

Gold Price Today : ಸತತ ಮೂರನೇ ದಿನವೂ ಚಿನ್ನಡ ಬೆಲೆಯಲ್ಲಿ ಇಳಿಕೆ ಕಾಣುವ ಲಕ್ಷಣ ಗೋಚರಿಸುತ್ತಿಲ್ಲ. ಇಂದು ಕೂಡಾ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.   

Written by - Ranjitha R K | Last Updated : Oct 6, 2022, 08:16 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
  • ಬೆಳ್ಳಿ ಬೆಲೆಯೂ ದುಬಾರಿ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಏರುತ್ತಲೇ ಇದೆ ಚಿನ್ನದ ಬೆಲೆ, ಖರೀದಿ ಬಲು ಕಷ್ಟ   title=
Glold silver price today (file photo)

ಬೆಂಗಳೂರು : Gold Price Today : ಚಿನ್ನ ಖರೀದಿ ಬಗ್ಗೆ ಯೋಚಿಸುತ್ತಿದ್ದವರಿಗೆ ಕಹಿ ಸುದ್ದಿ. ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸದ್ಯಕ್ಕೆ ಹಳದಿ ಲೋಹದ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.  ಮಾರುಕಟ್ಟೆ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ 52,100   ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ.ಗೆ 47,750 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ      22 ಕ್ಯಾರೆಟ್ ಚಿನ್ನದ ಬೆಲೆ     24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 48,350 52,750
 ಮುಂಬಯಿ 47,750 52,100
ದೆಹಲಿ 47,900 52,250
ಕೋಲ್ಕತ್ತಾ 47,750 52,100
ಬೆಂಗಳೂರು 47,800 51,150
ಹೈದರಾಬಾದ್ 47,750 52,100
ಕೇರಳ 47,750 52,100

ಇದನ್ನೂ ಓದಿ : SBI ಅಥವಾ Post Office ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಯಾವುದರಲ್ಲಿ ಬೇಗ ಹಣ ಡಬಲ್ ಆಗುತ್ತದೆ?

ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ನಿನ್ನೆ  ಕೆ.ಜಿ ಬೆಳ್ಳಿ ದರದಲ್ಲಿ 4,400 ರೂಪಾಯಿಯಷ್ಟು ಏರಿಕೆ ದಾಖಲಾಗಿತ್ತು. ಇಂದು ಮತ್ತೆ 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 67,000
 ಮುಂಬಯಿ 62,000
ದೆಹಲಿ 62,000
ಕೋಲ್ಕತ್ತಾ 62,000
ಬೆಂಗಳೂರು 67,000
ಹೈದರಾಬಾದ್ 67,000
ಕೇರಳ 67,000

ಇದನ್ನೂ ಓದಿ : 7th Pay Commission : ಹಬ್ಬದ ದಿನವೆ ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಳಕ್ಕೆ ಅಧಿಸೂಚನೆ ಬಿಡುಗಡೆ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News