ನವದೆಹಲಿ: ಭಾರತೀಯ ಟೆಲಿಕಾಂ ಕಂಪನಿ ಏರ್‌ಟೆಲ್ ಇತ್ತೀಚೆಗೆ ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಿದ್ದು, ಗ್ರಾಹಕರಿಗೆ ಉಚಿತ ಕರೆ ಮತ್ತು ಹೈಸ್ಪೀಡ್ 4 ಜಿ ಇಂಟರ್ನೆಟ್ ಜೊತೆಗೆ ಆರೋಗ್ಯ ವಿಮೆ (Life Insurance)ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

279 ರೂ.ಗೆ 4 ಲಕ್ಷ ವಿಮೆ :
ಕಂಪನಿಯ ಪ್ರಕಾರ, ಗ್ರಾಹಕರು 279 ರೂ.ಗಳ ರೀಚಾರ್ಜ್ ಯೋಜನೆಯನ್ನು (Recharge Plan) ಸಕ್ರಿಯಗೊಳಿಸಿದರೆ, ಅವರು ಪ್ರತಿದಿನ 1.5 ಜಿಬಿ ಹೈಸ್ಪೀಡ್ 4 ಜಿ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಉಚಿತ ಎಸ್‌ಎಂಎಸ್ ಮತ್ತು 4 ಲಕ್ಷ ರೂ. ಜೀವ ವಿಮೆ ಪಡೆಯಬಹುದು.


ಇದನ್ನೂ ಓದಿ - Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್


ಗಮನಾರ್ಹವಾಗಿ ಈ ಜೀವ ವಿಮೆಗೆ ಯಾವುದೇ ವೈದ್ಯಕೀಯ ಪರೀಕ್ಷೆಗಳು ಮತ್ತು ದಾಖಲೆಗಳ ಅಗತ್ಯವಿಲ್ಲ. ಇದು ಮಾತ್ರವಲ್ಲದೆ, 28 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯಲ್ಲಿ ಏರ್‌ಟೆಲ್ (Airtel) ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ದೈನಂದಿನ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ - One Rupee Note: ನಿಮ್ಮ ಬಳಿಯೂ ಇದೆಯೇ 1 ರೂ. ನೋಟು, ಪಡೆಯಿರಿ 45,000 ರೂ.


179 ರೂ.ಗೆ 2 ಲಕ್ಷ ಜೀವ ವಿಮೆ :
ಅದೇ ಸಮಯದಲ್ಲಿ, ಏರ್‌ಟೆಲ್‌ನ 179 ರೂ. ರೀಚಾರ್ಜ್ ಯೋಜನೆಯು 2 ಲಕ್ಷ ರೂ.ಗಳ ಜೀವ ವಿಮೆಯನ್ನು ನೀಡುತ್ತಿದೆ. ಈ ರೀಚಾರ್ಜ್ ಯೋಜನೆಯ ಸಿಂಧುತ್ವವು 28 ದಿನಗಳಾಗಿದ್ದು, ಇದರಲ್ಲಿ ಪ್ರತಿದಿನ 2 ಜಿಬಿ ಹೈಸ್ಪೀಡ್ 4 ಜಿ ಇಂಟರ್ನೆಟ್, ಪ್ರತಿದಿನ 300 ಎಸ್‌ಎಂಎಸ್ ಕಳುಹಿಸುವ ಸೌಲಭ್ಯವಿದ್ದು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯ ಕೂಡ ನೀಡಲಾಗುತ್ತಿದೆ. ಇದು ಮಾತ್ರವಲ್ಲ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಉಚಿತ ಚಂದಾದಾರಿಕೆ ಸಹ ಯೋಜನೆಯಲ್ಲಿ ಲಭ್ಯವಿರುತ್ತದೆ. ದೈನಂದಿನ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ ಎಂಬುದನ್ನು ನೆನಪಿಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.