Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್

ಮೀಡಿಯಾ ಟೆಕ್ ಹೆಲಿಯೊ ಜಿ 95 ಪ್ರೊಸೆಸರ್ನಲ್ಲಿ ರೆಡ್ಮಿ ನೋಟ್ 10 ಎಸ್ ಅನ್ನು ಪರಿಚಯಿಸಲಾಗಿದೆ ಮತ್ತು ಈ ಸ್ಮಾರ್ಟ್ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Written by - Yashaswini V | Last Updated : May 13, 2021, 02:15 PM IST
  • ಭಾರತದಲ್ಲಿ ಬಿಡುಗಡೆಯಾದ ಮಾದರಿಯು ಮೀಡಿಯಾ ಟೆಕ್ ಹೆಲಿಯೊ ಜಿ 95 ಪ್ರೊಸೆಸರ್ ಬೆಂಬಲದೊಂದಿಗೆ ಬರುತ್ತದೆ
  • ಪವರ್ ಬ್ಯಾಕಪ್‌ಗಾಗಿ 5,000 ಎಮ್‌ಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ
  • ಇದು 33 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ
Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್ title=
Redmi Note 10S Price, Specifications

ನವದೆಹಲಿ: ರೆಡ್‌ಮಿ ನೋಟ್ 10 ಎಸ್‌ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಗುಡ್ ನ್ಯೂಸ್.  ಕಂಪನಿಯು ಕಡೆಗೂ ರೆಡ್‌ಮಿ ನೋಟ್ 10 ಎಸ್‌ (Redmi Note 10S) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಬಿಡುಗಡೆಯಾದ ಮಾದರಿಯು ಮೀಡಿಯಾ ಟೆಕ್ ಹೆಲಿಯೊ ಜಿ 95 ಪ್ರೊಸೆಸರ್ ಹೊಂದಿದ್ದು, ಪವರ್ ಬ್ಯಾಕಪ್‌ಗಾಗಿ 5,000 ಎಮ್‌ಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ, ಇದು 33 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭಾರತದ ಮೊದಲು, ಈ ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು ಎಂಬುದು ಗಮನಾರ್ಹವಾಗಿದೆ.

Redmi Note 10S ಬೆಲೆ ಮತ್ತು ಲಭ್ಯತೆ:
ರೆಡ್ಮಿ ನೋಟ್ 10 ಎಸ್ (Redmi Note 10S) ಅನ್ನು ಭಾರತದಲ್ಲಿ ಎರಡು ಶೇಖರಣಾ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6 ಜಿಬಿ + 64 ಜಿಬಿ ಶೇಖರಣಾ ಮಾದರಿಯ ಬೆಲೆ 14,999 ರೂ. 6 ಜಿಬಿ + 128 ಜಿಬಿ ಮಾದರಿಯು 15,999 ರೂ.ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಫೋನ್ ಅನ್ನು ಡೀಪ್ ಸೀ ಬ್ಲೂ, ಫ್ರಾಸ್ಟ್ ವೈಟ್ ಮತ್ತು ಶ್ಯಾಡೋ ಬ್ಲ್ಯಾಕ್ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಮೊದಲ ಬಾರಿಗೆ ಮೇ 18 ರಂದು ಮಾರಾಟಕ್ಕೆ ಲಭ್ಯವಾಗಲಿದ್ದು, ಬಳಕೆದಾರರು ಇದನ್ನು ಇ-ಕಾಮರ್ಸ್ ಸೈಟ್ ಅಮೆಜಾನ್ (Amazon) ಇಂಡಿಯಾದಿಂದ ಖರೀದಿಸಬಹುದು. ಇದಲ್ಲದೆ ಇದು Mi.com, Mi Home stores ಮತ್ತು ಚಿಲ್ಲರೆ ಅಂಗಡಿಗಳಲ್ಲಿಯೂ ಮಾರಾಟಕ್ಕೆ ಲಭ್ಯವಿರುತ್ತದೆ.

ಇದನ್ನೂ ಓದಿ - Oppo ಸ್ಮಾರ್ಟ್‌ಫೋನ್‌ಗಳಿಗೆ 80% ವರೆಗೆ ರಿಯಾಯಿತಿ, 1 ರೂಪಾಯಿ ಡೀಲ್ ಕೂಡ ವಿಶೇಷ

Redmi Note 10S ವಿಶೇಷಣಗಳು:
ರೆಡ್ಮಿ ನೋಟ್ 10 ಎಸ್ (Redmi Note 10S) ಆಂಡ್ರಾಯ್ಡ್ 11 ಓಎಸ್ ಅನ್ನು ಆಧರಿಸಿದೆ ಮತ್ತು 6.43 ಇಂಚಿನ ಪೂರ್ಣ ಎಚ್ಡಿ + ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1,080 × 2,400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ ಮತ್ತು ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನೊಂದಿಗೆ ಲೇಪನ ಮಾಡಲಾಗಿದೆ. ಫೋನ್ ಅನ್ನು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ 95 ಪ್ರೊಸೆಸರ್ನಲ್ಲಿ ಪರಿಚಯಿಸಲಾಗಿದೆ ಮತ್ತು ಅದರಲ್ಲಿ ನೀಡಲಾದ ಸಂಗ್ರಹಣೆಯನ್ನು ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ ವಿಸ್ತರಿಸಬಹುದು ಎಂದು ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ - Redmi Note 9 Pro Max ಫೋನ್ ಮೇಲೆ ಸಿಗಲಿದೆ ಭಾರೀ ಡಿಸ್ಕೌಂಟ್ ..!

ರೆಡ್‌ಮಿ ನೋಟ್ 10 ಎಸ್‌ನಲ್ಲಿ (Redmi Note 10S) ಛಾಯಾಗ್ರಹಣಕ್ಕಾಗಿ ಕ್ವಾಡ್ ರಿಯರ್ ಕ್ಯಾಮೆರಾವನ್ನು  ನೀಡಲಾಗಿದೆ. ಫೋನ್‌ನ ಮುಖ್ಯ ಸಂವೇದಕ 64 ಎಂಪಿ ಆಗಿದ್ದರೆ, 8 ಎಂಪಿ ಅಲ್ಟ್ರಾ ವೈಡ್ ಸೆನ್ಸರ್, 2 ಎಂಪಿ ಮ್ಯಾಕ್ರೋ ಶೂಟರ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಇವೆ. ಅದೇ ಸಮಯದಲ್ಲಿ, ವಿಡಿಯೋ ಕಾಲಿಂಗ್ ಮತ್ತು ಸೆಲ್ಫಿಯ ಅನುಕೂಲಕ್ಕಾಗಿ, ಇದು ಪಂಚ್ ಹೋಲ್ ಕಟೌಟ್ ವಿನ್ಯಾಸದೊಂದಿಗೆ 13 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸುರಕ್ಷತೆಗಾಗಿ, ಇದು ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸೌಲಭ್ಯವನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News