ಬೆಂಗಳೂರು : ಎಂಜಿ ಮೋಟಾರ್ ಇಂಡಿಯಾ ತನ್ನ ನಾಲ್ಕನೇ ಮಾದರಿಯನ್ನು 2023 ರ ಆರಂಭದಲ್ಲಿ  ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ. ಇದು 2-ಸೀಟ್ ಲೇಔಟ್ ಹೊಂದಿರುವ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರ್ ಆಗಿರಲಿದೆ. ಈ  ಇವಿ ಇತ್ತೀಚೆಗೆ ಬಿಡುಗಡೆಯಾದ ಟಾಟಾ ಟಿಯಾಗೊ EVಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಟಾಟಾ ಟಿಯಾಗೊ EV 5 ಆಸನಗಳನ್ನು ಹೊಂದಿದ್ದು, ಪ್ರಸ್ತುತ ದೇಶದಲ್ಲಿರುವ ಅಗ್ಗದ ಎಲೆಕ್ಟ್ರಿಕ್ ಕಾರ್ ಆಗಿದೆ. ಎಂಜಿ ಸಿಟಿ ಇವಿ ಇದಕ್ಕಿನತಳು ಕಡಿಮೆ ದರದಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಈ ಮಾದರಿಯು ಜೂನ್ 2023 ರ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. 


COMMERCIAL BREAK
SCROLL TO CONTINUE READING

ಮುಂಬರುವ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು ಮೊದಲ ಹಂತದಲ್ಲಿ 60 ಪ್ರತಿಶತದಷ್ಟು ಸ್ಥಳೀಯ ಘಟಕಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಉತ್ತಮ ಬೆಲೆಗೆ ಕಾರನ್ನು ಬಿಡುಗಡೆ ಮಾಡಲು, ಸ್ಥಳೀಯವಾಗಿ ಜೋಡಿಸಲಾದ ಬ್ಯಾಟರಿ ಪ್ಯಾಕ್ ನೀಡಲಾಗುವುದು. ಮಾಧ್ಯಮ ವರದಿಗಳ ಪ್ರಕಾರ, MG ಯ ಈ ಮಿನಿ ಎಲೆಕ್ಟ್ರಿಕ್ ಕಾರು ಕೇವಲ 2.9 ಮೀಟರ್ ಉದ್ದವಿರಬಹುದು ಎನ್ನಲಾಗಿದೆ. 


ಇದನ್ನೂ ಓದಿ :  Aadhaar Card : ನಿಮ್ಮ ಆಧಾರ್ ಕಾರ್ಡ್‌ಗೆ 10 ವರ್ಷ ಆಗಿದೆಯೇ? ಕೂಡಲೇ ಈ ಕೆಲಸ ಮಾಡಿ


ವಾಹನ ದಟ್ಟಣೆ ಹೆಚ್ಚು ಇರುವ ಪ್ರದೇಶಗಳಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುವುದು. ದೊಡ್ಡ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕನೆಕ್ಟೆಡ್  ಕಾರ್  ಟೆಕ್ನಾಲಜಿ , ವೈರ್‌ಲೆಸ್ ಸಂಪರ್ಕ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು  ಈ ಕಾರು ಹೊಂದಿರಲಿದೆ. ಕಾಂಪ್ಯಾಕ್ಟ್ EV ಕೋನೀಯ ಮುಂಭಾಗದ ಬಂಪರ್ ಮತ್ತು ಸ್ಕ್ವಾರಿಶ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬಾಕ್ಸಿ ಲುಕ್  ಪಡೆಯುತ್ತದೆ. 


ಇದು 12-ಇಂಚಿನ ಸ್ಟೀಲ್ ರಿಮ್ಸ್, ನಂಬರ್ ಪ್ಲೇಟ್ ಹೌಸಿಂಗ್‌ನಲ್ಲಿ ಅಡ್ಡಲಾಗಿರುವ ಲೈಟ್ ಬಾರ್, ಕರ್ವ್ದ್ ವಿಂಡ್‌ಸ್ಕ್ರೀನ್ ಮತ್ತು ಸಣ್ಣ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರಲಿದೆ. ಇದರ ವ್ಹೀಲ್ ಬೇಸ್ 2010mm ಆಗಿರಬಹುದು ಎನ್ನಲಾಗಿದೆ.  ಅದರ ಪವರ್‌ಟ್ರೇನ್ ಸೆಟಪ್  ಬಗ್ಗೆ ಹೇಳುವುದಾದರೆ, ಸುಮಾರು 20kWh - 25kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್  ಹೊಂದಿರಲಿದೆ. 


ಇದನ್ನೂ ಓದಿ 5 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಸೀಟರ್ .! ಖರೀದಿಗೆ ಮುಗಿ ಬಿದ್ದ ಜನ .!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.