ದೀಪಾವಳಿಯಲ್ಲಿ ಓಲಾದ ಅತಿದೊಡ್ಡ ಆಫರ್! ಬರಲಿದೆ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್

Ola Electric Scooter: ದೀಪಾವಳಿ ಹಬ್ಬಕ್ಕೆ ಓಲಾ ಬಂಪರ್ ಕೊಡುಗೆಯನ್ನು ನೀಡುತ್ತಿದೆ. ಅಕ್ಟೋಬರ್ 22 ರಂದು ಓಲಾ ದೊಡ್ಡ ಘೋಷಣೆ ಮಾಡಲಿದೆ, ಇದು ಕಂಪನಿಯ ಸಂಪೂರ್ಣ ಹೊಸ ಉತ್ಪನ್ನವಾಗಲಿದೆ ಎಂದು ಕಂಪನಿಯ ಸಿಇಒ ಘೋಷಿಸಿದ್ದಾರೆ. 

Written by - Yashaswini V | Last Updated : Oct 10, 2022, 03:08 PM IST
  • ಕಂಪನಿಯು ತನ್ನ OLA S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷ ಆಗಸ್ಟ್ 15 ರಂದು ಬಿಡುಗಡೆ ಮಾಡಿದೆ.
  • ಇದರ ಎಕ್ಸ್ ಶೋ ರೂಂ ಬೆಲೆ 99,999 ರೂ.
  • Ola S1 ನಲ್ಲಿ 2.98kWh ಬ್ಯಾಟರಿ ಪ್ಯಾಕ್ ಲಭ್ಯವಿದೆ.
ದೀಪಾವಳಿಯಲ್ಲಿ ಓಲಾದ ಅತಿದೊಡ್ಡ ಆಫರ್! ಬರಲಿದೆ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್  title=
Ola Electric Scooter

ಓಲಾ ಎಲೆಕ್ಟ್ರಿಕ್ ಅಗ್ಗದ ಸ್ಕೂಟರ್: ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಅದೇ ವೇಗದಲ್ಲಿ ಓಲಾ ಎಲೆಕ್ಟ್ರಿಕ್ ಸಹ ತನ್ನ ಹಿಡಿತವನ್ನು ಬಲಪಡಿಸುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ ಕೈಗೆಟುಕುವ ಬೆಲೆಯ ಸ್ಕೂಟರ್ Ola S1 ಅನ್ನು ಪರಿಚಯಿಸಿತು. ಇದು ಓಲಾ ಕಂಪನಿಯ ಪ್ರೀಮಿಯಂ ಸ್ಕೂಟರ್ OLA S1 Pro ನ ಸಣ್ಣ ಆವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಇದೀಗ ದೀಪಾವಳಿಯಲ್ಲಿ ಓಲಾ ಕಂಪನಿಯು ತನ್ನ ಗ್ರಾಹಕರಿಗಾಗಿ ಬಂಪರ್ ಕೊಡುಗೆ ನೀಡಲು ಭರ್ಜರಿ ಸಿದ್ಧತೆ ಕೈಗೊಂಡಿದೆ. 

ದೀಪಾವಳಿಯ ಸಂದರ್ಭದಲ್ಲಿ, ಅಕ್ಟೋಬರ್ 22 ರಂದು ಓಲಾ ದೊಡ್ಡ ಘೋಷಣೆ ಮಾಡಲಿದೆ ಎಂದು ಕಂಪನಿಯ ಸಿಇಒ ಮಾಹಿತಿ ಹಂಚಿಕೊಂಡಿದ್ದಾರೆ.  ಈ ಕುರಿತಂತೆ ಟ್ವೀಟ್ ಮಾಡಿರುವ ಓಲಾ ಸಿಇಒ ಭವಿಶ್ ಅಗರ್ವಾಲ್ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ, "ನಮ್ಮ ದೀಪಾವಳಿ ಕಾರ್ಯಕ್ರಮವು ಅಕ್ಟೋಬರ್ 22 ರಂದು ನಡೆಯಲಿದೆ. ಓಲಾದಿಂದ ಇದುವರೆಗಿನ ಅತಿದೊಡ್ಡ ಪ್ರಕಟಣೆಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ!" ಎಂದು ಬರೆದಿದ್ದಾರೆ.

ಇದನ್ನೂ ಓದಿ- ದೇಶದಲ್ಲೇ ಮೊದಲ ಬಾರಿ ಪ್ರಾಯೋಗಿಕವಾಗಿ ‘ಇ-ರುಪಿ’ ಜಾರಿ: ಆರ್‌ಬಿಐ ಘೋಷಣೆ

ಈ ಸಂದರ್ಭದಲ್ಲಿ ಓಲಾ ಕಂಪನಿಯು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಬಹುದು ಎಂದು ಊಹಿಸಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯ ಹೊಸ ಸ್ಕೂಟರ್ Ola S1 ನಂತೆಯೇ ಅದೇ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಡಿಮೆ ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.   ಇದರ ಬೆಲೆ 90 ಸಾವಿರ ರೂ.ಗಳಿಗಿಂತ ಕಡಿಮೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ- 21 ಸಾವಿರ ರೂ.ಗೆ ಬುಕ್ ಆಗಲಿದೆ ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು.! ಅರ್ಧ ಗಂಟೆ ಚಾರ್ಜ್‌ ಮಾಡಿದರೆ ಕ್ರಮಿಸುವುದು 110 ಕಿಮೀ

Ola S1 ಬೆಲೆ ಮತ್ತು ವೈಶಿಷ್ಟ್ಯ: 
ಕಂಪನಿಯು ತನ್ನ OLA S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷ ಆಗಸ್ಟ್ 15 ರಂದು ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 99,999 ರೂ. Ola S1 ನಲ್ಲಿ 2.98kWh ಬ್ಯಾಟರಿ ಪ್ಯಾಕ್ ಲಭ್ಯವಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಕಂಪನಿಯ ಪ್ರಕಾರ, Ola S1 ಸಂಪೂರ್ಣ ಒಂದೇ ಚಾರ್ಜ್‌ನಲ್ಲಿ 141 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. Ola S1 ಎಲೆಕ್ಟ್ರಿಕ್ ಸ್ಕೂಟರ್ S1 Pro ನಂತೆ ಕಾಣುತ್ತದೆ. ಅದೇ ಸಮಯದಲ್ಲಿ, Ola S1 Pro 3.9kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಮತ್ತು ಅದರ ಬೆಲೆ 1,39,999 ರೂ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News