Union Budget 2022: ಈ ಹಣಕಾಸು ಸಚಿವರ ಹೆಸರಿನಲ್ಲಿದೆ ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ದಾಖಲೆ ..!
2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಭಾಷಣಕ್ಕೆ 2 ಗಂಟೆ 10 ನಿಮಿಷ ತೆಗೆದುಕೊಂಡಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ಭಾಷಣವನ್ನು 2 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022ರಂದು 4ನೇ ಬಾರಿಗೆ ಬಜೆಟ್(Union Budget 2022) ಮಂಡಿಸಲಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕಳೆದ 74 ವರ್ಷಗಳಲ್ಲಿ 92 ಬಜೆಟ್‌ಗಳನ್ನು ಮಂಡಿಸಲಾಗಿದೆ. ಕೆಲವು ವರ್ಷಗಳಲ್ಲಿ 2 ಬಾರಿ ಬಜೆಟ್ ಮಂಡಿಸಲಾಗಿದ್ದು, ಇದು ಚುನಾವಣಾ ವರ್ಷಗಳಲ್ಲಿ ನಡೆದಿರುವುದು ವಿಶೇಷವಾಗಿದೆ.
ನಂ.1 ಸ್ಥಾನದಲ್ಲಿ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳಿವೆ. ಬಜೆಟ್ ಇತಿಹಾಸದಲ್ಲಿ ಕೆಲವರು ಸುದೀರ್ಘವಾದ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದರೆ, ಇನ್ನು ಕೆಲವರು ಕಡಿಮೆ ಅವಧಿಯ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಸುದೀರ್ಘ ಬಜೆಟ್ ಭಾಷಣದ ಬಗ್ಗೆ ಹೇಳುವುದಾದರೆ ನಿರ್ಮಲಾ ಸೀತಾರಾಮನ್(Nirmala Sitharaman) ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ 1977ರಲ್ಲಿ ವಿತ್ತ ಸಚಿವರಾಗಿದ್ದ ಎಚ್.ಎಂ.ಪಟೇಲ್(HM Patel) ಅವರ ಹೆಸರಿನಲ್ಲಿ ಅತ್ಯಂತ ಚಿಕ್ಕ ಬಜೆಟ್‌ನ ದಾಖಲೆ ಇದೆ.
ಇದನ್ನೂ ಓದಿ: Aadhaar Update:ಕೇವಲ ಒಂದು ಲಿಂಕ್‌ನಿಂದ ಆಧಾರ್ ಕಾರ್ಡ್‌ನಲ್ಲಿ DOB ಬದಲಾಯಿಸಿ
2020ರ ಬಜೆಟ್ ಮಂಡಿಸಿದ ದಾಖಲೆ
2020ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಅವರು ಇಲ್ಲಿಯವರೆಗಿನ ಅತ್ಯಂತ ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆ ಹೊಂದಿದ್ದಾರೆ. 1 ಫೆಬ್ರವರಿ 2020ರಂದು ಬಜೆಟ್ ಭಾಷಣಕ್ಕಾಗಿ ಹಣಕಾಸು ಸಚಿವರು 2 ಗಂಟೆ 41 ನಿಮಿಷಗಳನ್ನು ತೆಗೆದುಕೊಂಡಿದ್ದರು(Longest Budget Speech). ಈ ಭಾಷಣದಲ್ಲಿ 18 ಸಾವಿರದ 926 ಪದಗಳಿದ್ದವು. 2020ರಲ್ಲಿ ಹದಗೆಟ್ಟ ಆರೋಗ್ಯದ ಕಾರಣ ಅವರಿಗೆ ಕೊನೆಯ 2 ಪುಟಗಳನ್ನು ಓದಲಾಗಲಿಲ್ಲ. ಇಲ್ಲವಾದಲ್ಲಿ ಈ ಭಾಷಣ ಇನ್ನೂ ದೀರ್ಘವಾಗಿರುತ್ತಿತ್ತು ಎಂದು ನಿರೀಕ್ಷಿಸಲಾಗಿತ್ತು.
ಸುದೀರ್ಘ ಬಜೆಟ್ ಭಾಷಣದ ದಾಖಲೆ
ಅದೇ ರೀತಿ 2003ರಲ್ಲಿ ಅಂದಿನ ಹಣಕಾಸು ಸಚಿವ ಜಸ್ವಂತ್ ಸಿಂಗ್ ಅವರು 2 ಗಂಟೆ 13 ನಿಮಿಷಗಳ ಬಜೆಟ್ ಭಾಷಣ(Union Budget) ಮಾಡಿದ್ದರು. ಇದಾದ ನಂತರ 2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಭಾಷಣಕ್ಕೆ 2 ಗಂಟೆ 10 ನಿಮಿಷ ತೆಗೆದುಕೊಂಡಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ಭಾಷಣವನ್ನು 2 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು.
ಇದನ್ನೂ ಓದಿ: ನಿಮ್ಮ ಬಳಿ 2 ರೂಪಾಯಿಯ ಈ ನಾಣ್ಯ ಇದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ
ಕಡಿಮೆ ಬಜೆಟ್ ಭಾಷಣದ ದಾಖಲೆ
ಬಜೆಟ್ ನಲ್ಲಿ ಪದಗಳನ್ನು ಓದಿದ ದಾಖಲೆ ಬಗ್ಗೆ ಹೇಳುವುದಾದರೆ ನಿರ್ಮಲಾ ಸೀತಾರಾಮನ್ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991ರಲ್ಲಿ 18,650 ಪದಗಳ ಬಜೆಟ್ ಭಾಷಣವನ್ನು ಓದಿದ್ದರು. ಇದುವರೆಗಿನ ಅತಿ ಕಡಿಮೆ ಬಜೆಟ್ ಭಾಷಣದ ದಾಖಲೆ 1977ರಲ್ಲಿ ಹಿರೂಭಾಯಿ ಎಂ.ಪಟೇಲ್ ಹೆಸರಿನಲ್ಲಿದೆ. ಅಂದು ಮಧ್ಯಂತರ ಬಜೆಟ್ ಮಂಡಿಸಿದ್ದ ಅವರು ಕೇವಲ 800 ಪದಗಳ ಅತಿ ಕಡಿಮೆ ಬಜೆಟ್ ಭಾಷಣವನ್ನು ಕೆಲವೇ ನಿಮಿಷಗಳಲ್ಲಿ(Shortest Budget Speech) ಪೂರ್ಣಗೊಳಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.