7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ , ಡಿಎಯಲ್ಲಿ ಶೇ.3ರಷ್ಟು ಏರಿಕೆ ಘೋಷಿಸಿದ ಸರ್ಕಾರ

7th Pay Commission update: ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯನ್ನೇ ನೀಡಿದೆ. ಸರ್ಕಾರಿ ನೌಕರರ ಡಿಎಯನ್ನು ಶೇ.3ರಷ್ಟು (Dearness Allowance  Hike) ಹೆಚ್ಚಿಸಿ, ನೌಕರರಿಗೆ ಉಡುಗೊರೆ ಪ್ರಕಟಿಸಿದೆ.

Written by - Ranjitha R K | Last Updated : Jan 26, 2022, 12:32 PM IST
  • ಹಿಮಾಚಲ ಪ್ರದೇಶದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ
  • ತುಟ್ಟಿಭತ್ಯೆಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರ
  • ಈಗ 31% ಕ್ಕೆ ಏರಿಕೆಯಾಗಿದೆ DA
7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ , ಡಿಎಯಲ್ಲಿ  ಶೇ.3ರಷ್ಟು ಏರಿಕೆ ಘೋಷಿಸಿದ ಸರ್ಕಾರ  title=
ಹಿಮಾಚಲ ಪ್ರದೇಶದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ (file photo)

ನವದೆಹಲಿ :  7th Pay Commission update: ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯನ್ನೇ ನೀಡಿದೆ. ಸರ್ಕಾರಿ ನೌಕರರ ಡಿಎಯನ್ನು ಶೇ.3ರಷ್ಟು (Dearness Allowance  Hike) ಹೆಚ್ಚಿಸಿ, ನೌಕರರಿಗೆ ಉಡುಗೊರೆ ಪ್ರಕಟಿಸಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮಂಗಳವಾರ, ರಾಜ್ಯ ಸರ್ಕಾರಿ ನೌಕರರಿಗೆ 31 ಪ್ರತಿಶತ ತುಟ್ಟಿಭತ್ಯೆ (DA) ಘೋಷಿಸಿದ್ದಾರೆ. ಸೋಲನ್ ನಗರದಲ್ಲಿ ನಡೆದ ಹಿಮಾಚಲ ಪ್ರದೇಶ ರಾಜ್ಯ ಸಂಸ್ಥಾಪನಾ ದಿನಾಚರಣೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ಉದ್ಯೋಗಿಗಳಿಗೆ ಭಾರೀ ಉಡುಗೊರೆ :
ಹಿಮಾಚಲ ಪ್ರದೇಶ ರಾಜ್ಯ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್, ಈ ಘೋಷಣೆ ಮಾಡಿದ್ದಾರೆ. "ಇತ್ತೀಚೆಗೆ, 2.25 ಲಕ್ಷ ಉದ್ಯೋಗಿಗಳಿಗೆ 6000 ಕೋಟಿ ರೂಪಾಯಿಗಳ ಪ್ರಯೋಜನಗಳನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಕೆಲವು ವರ್ಗಗಳ ಹೊಸ ವೇತನ ಶ್ರೇಣಿಗಳಲ್ಲಿ ಕೆಲವು ವ್ಯತ್ಯಾಸಗಳಿವೆ ಎಂಬ ಅಭಿಪ್ರಾಯ ವ್ಯಕತವಾಗಿದೆ. ಉದ್ಯೋಗಿಗಳಿಗೆ ಈಗಾಗಲೇ ನೀಡಿರುವ ಎರಡು ಆಯ್ಕೆಗಳ ಜೊತೆಗೆ ಮೂರನೇ ಆಯ್ಕೆಯನ್ನು ನೀಡಲಾಗುತ್ತದೆ. 2.25 ಮತ್ತು 2.59 ರ ಗುಣಕಗಳ ಜೊತೆಗೆ ನೌಕರರಿಗೆ ಮೂರನೇ ಆಯ್ಕೆಯನ್ನು ಸಿಎಂ ಘೋಷಿಸಿದ್ದಾರೆ. ಮೂರನೇ ಆಯ್ಕೆಯ ಕಾರಣದಿಂದಾಗಿ ವೇತನದಲ್ಲಿ  ನೇರವಾಗಿ 15%ದಷ್ಟು ಹೆಚ್ಚಳವಾಗಿದೆ.

ಇದನ್ನೂ  ಓದಿ : ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

ಶೇ.3ರಷ್ಟು ತುಟ್ಟಿಭತ್ಯೆ  ಹೆಚ್ಚಳ: 
 ಹೊಸ ವೇತನ ಶ್ರೇಣಿಗಳ ಪ್ರಕಾರ ರಾಜ್ಯ ಸರ್ಕಾರದ ಪಿಂಚಣಿದಾರರಿಗೂ ಪಿಂಚಣಿ ನೀಡಲಾಗುವುದು ಎಂದು ಜೈ ರಾಮ್ ಠಾಕೂರ್ ( Jai Ram Thakur) ಘೋಷಿಸಿದ್ದಾರೆ. ಇದರೊಂದಿಗೆ 1.75 ಲಕ್ಷ ಪಿಂಚಣಿದಾರರಿಗೆ ಸುಮಾರು 2000 ಕೋಟಿ ಆರ್ಥಿಕ ಲಾಭವನ್ನು ನೀಡಲಾಗುವುದು. ನೌಕರರಿಗೆ ಮೂರು ಪ್ರತಿಶತ ಹೆಚ್ಚುವರಿ ತುಟ್ಟಿಭತ್ಯೆ (DA Hike) ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.   ಅಂದರೆ, ಈಗ ರಾಜ್ಯದ ಐಎಎಸ್ ಅಧಿಕಾರಿಗಳ ಮಾದರಿಯಲ್ಲಿ ಉದ್ಯೋಗಿಗಳಿಗೂ ಶೇ.31 ಡಿಎ ಸಿಗಲಿದೆ. ಇದಕ್ಕಾಗಿ ಸರ್ಕಾರದ ಬೊಕ್ಕಸದಿಂದ 500 ಕೋಟಿ ರೂ. ವೆಚ್ಚವಾಗಲಿದೆ. 

ವಾರ್ಷಿಕ ಆದಾಯ ಮಿತಿಯಲ್ಲಿಯೂ ಹೆಚ್ಚಳ :  
ಡಿಎ (DA) ಹೆಚ್ಚಳ ಘೋಷಿಸಿದ ಹಿನ್ನೆಲೆಯಲ್ಲಿ ಇದೀಗ ನೌಕರರ ಡಿಎ ಶೇ.28ರಿಂದ ಶೇ.31ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಪಿಂಚಣಿಗಳ (Pension) ಲಾಭ ಪಡೆಯಲು ವಾರ್ಷಿಕ ಆದಾಯದ ಮಿತಿಯನ್ನು 35,000 ರೂ.ನಿಂದ 50, 000 ರೂ.ಗೆ ಹೆಚ್ಚಿಸಲಾಗಿದೆ. '2015ರ ನಂತರ ನೇಮಕಗೊಂಡ ಪೊಲೀಸ್ ಪೇದೆಗಳು (Police constable) ಇತರೆ ವರ್ಗದ ಉದ್ಯೋಗಿಗಳ ಮಾದರಿಯಲ್ಲಿ ಹೆಚ್ಚಿನ ವೇತನ ಶ್ರೇಣಿಗೆ ಅರ್ಹರಾಗಿರುತ್ತಾರೆ. ಹೆಚ್ಚಿನ ವೇತನ ಶ್ರೇಣಿಗೆ ಅರ್ಹರಾಗಿರುವ ಎಲ್ಲಾ ಕಾನ್‌ಸ್ಟೆಬಲ್‌ಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ಅದರ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ಜೈ ರಾಮ್ ಠಾಕೂರ್ ಹೇಳಿದ್ದಾರೆ. 2015 ರಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಉದ್ಯೋಗಿಗಳು, 2020 ರಿಂದ ಹೆಚ್ಚಿನ ವೇತನ ಶ್ರೇಣಿಗೆ ಅರ್ಹರಾಗಿರುತ್ತಾರೆ. ಅದೇ ವೇಳೆ ಗುತ್ತಿಗೆ ಕಾರ್ಮಿಕರು, ಖಾಯಂಗೊಳಿಸಿದ ಎರಡು ವರ್ಷಗಳ ನಂತರ ಹೆಚ್ಚಿನ ವೇತನ ಶ್ರೇಣಿಯನ್ನು ಪಡೆಯುತ್ತಾರೆ. ಈ ನಿಯಮ ಕಾನ್‌ಸ್ಟೆಬಲ್‌ಗಳಿಗೂ ಅನ್ವಯವಾಗಲಿದೆ.  

ಇದನ್ನೂ  ಓದಿ : Bank Holidays In February 2022: ಫೆಬ್ರವರಿಯಲ್ಲಿ 12 ದಿನಗಳು ಬ್ಯಾಂಕ್ ರಜೆ, ಇಲ್ಲಿದೆ ಫುಲ್ ಲಿಸ್ಟ್

ಕೇಂದ್ರ ಸರ್ಕಾರದಿಂದಲೂ ಹೆಚ್ಚಳ ಸಾಧ್ಯತೆ : 
ಮತ್ತೊಂದೆಡೆ, ಕೇಂದ್ರ ಸರ್ಕಾರವು ಕೂಡಾ ಕೇಂದ್ರ ನೌಕರರ ಡಿಎಯನ್ನು  (Dearness allowance) ಮತ್ತೊಮ್ಮೆ ಹೆಚ್ಚಿಸಬಹುದು ಎನ್ನಲಾಗಿದೆ. AICPI ಸೂಚ್ಯಂಕದ ಡೇಟಾವನ್ನು ನೋಡಿದರೆ, ಸೆಪ್ಟೆಂಬರ್ 2021 ರವರೆಗೆ, ತುಟ್ಟಿ ಭತ್ಯೆಯು (DA) ಶೇಕಡಾ 33 ಕ್ಕೆ ಏರಿದೆ. ಅಂದರೆ ಇದರ ಪ್ರಕಾರ ಶೇ.2ರಷ್ಟು ಹೆಚ್ಚಳವಾಗಿದೆ. ಆದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಅಂಕಿಅಂಶಗಳು ಇನ್ನೂ ಲಭ್ಯವಿಲ್ಲ. ಡಿಎಯಲ್ಲಿ ಇನ್ನು ಶೇ.1ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 2021 ರ ವೇಳೆಗೆ CPI (IW) ಅಂಕಿ ಅಂಶವು 125ರಷ್ಟಿದ್ದರೆ ತುಟ್ಟಿಭತ್ಯೆಯಲ್ಲಿ 3 ಪ್ರತಿಶತ ಹೆಚ್ಚಳವಾಗುವುದು ಖಂಡಿತ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News