ಹೂಡಿಕೆದಾರರಿಗೆ ಭರ್ಜರಿಯಾಗಿದೆ ಈ Post Office ಯೋಜನೆ : ಯಾವುದು? ಹೇಗೆ? ಇಲ್ಲಿದೆ
ಅಂಕಿಅಂಶಗಳ ಪ್ರಕಾರ, ಜೂನ್ 2020 ರಲ್ಲಿ, ಅವರು ಎನ್ಎಸ್ಸಿಯಲ್ಲಿ 8 ಲಕ್ಷದ 43 ಸಾವಿರದ 124 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಜೀವ ವಿಮೆಗಾಗಿ 1 ಲಕ್ಷದ 50 ಸಾವಿರದ 957 ಪ್ರೀಮಿಯಂ ಕಟ್ಟಿದ್ದರು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ : ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಇಂದು ನಾವು ನಿಮಗೆ ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆಯ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ. ಅಂಚೆ ಕಛೇರಿಯ ಈ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮೋದಿ ಹೂಡಿಕೆ ಮಾಡುತ್ತಾರೆ. ಅಂಕಿಅಂಶಗಳ ಪ್ರಕಾರ, ಜೂನ್ 2020 ರಲ್ಲಿ, ಅವರು ಎನ್ಎಸ್ಸಿಯಲ್ಲಿ 8 ಲಕ್ಷದ 43 ಸಾವಿರದ 124 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಜೀವ ವಿಮೆಗಾಗಿ 1 ಲಕ್ಷದ 50 ಸಾವಿರದ 957 ಪ್ರೀಮಿಯಂ ಕಟ್ಟಿದ್ದರು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತುಂಬಾ ಕಡಿಮೆ ಅಪಾಯ
ನಾವು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(National Savings Certificate)ದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅಪಾಯವು ಅತ್ಯಲ್ಪವಾಗಿದೆ. ಇದು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಯ ಭಾಗವಾಗಿದೆ.
ಇದನ್ನೂ ಓದಿ : 7th Pay Commission : ಹೊಸ ವರ್ಷಕ್ಕೆ ಹೆಚ್ಚಾಗುತ್ತೆ ಕೇಂದ್ರ ನೌಕರರ ಸಂಬಳ; ಲೆಕ್ಕಾಚಾರ ಇಲ್ಲಿ ನೋಡಿ
ಹೂಡಿಕೆ ಮಾಡುವುದು ಹೇಗೆ?
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಐದು ವರ್ಷಗಳ ಕನಿಷ್ಠ ಲಾಕ್-ಇನ್ ಅವಧಿಯನ್ನು ಹೊಂದಿದೆ. ಅಂದರೆ ಐದು ವರ್ಷಗಳ ಹೂಡಿಕೆಯ ನಂತರವೇ ನೀವು ಅದನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಎನ್‌ಎಸ್‌ಸಿ(National Savings Certificate)ಯಲ್ಲಿ ಹೂಡಿಕೆ ಮಾಡಲು ಮೂರು ಮಾರ್ಗಗಳಿವೆ.
ಸಿಂಗಲ್ ಟೈಪ್- ಈ ಪ್ರಕಾರದಲ್ಲಿ ನೀವು ನಿಮಗಾಗಿ ಅಥವಾ ಅಪ್ರಾಪ್ತ ವಯಸ್ಕರಿಗಾಗಿ ಹೂಡಿಕೆ ಮಾಡಬಹುದು.
ಜಾಯಿಂಟ್ ಎ ಟೈಪ್- ಈ ರೀತಿಯ ಪ್ರಮಾಣಪತ್ರವನ್ನು ಯಾವುದೇ ಇಬ್ಬರು ಒಟ್ಟಿಗೆ ತೆಗೆದುಕೊಳ್ಳಬಹುದು ಅಂದರೆ ಇಬ್ಬರು ಒಟ್ಟಿಗೆ ಹೂಡಿಕೆ ಮಾಡಬಹುದು
ಜಾಯಿಂಟ್ ಬಿ ಟೈಪ್- ಇದರಲ್ಲಿ ಇಬ್ಬರು ಹೂಡಿಕೆ ಮಾಡುತ್ತಾರೆ, ಆದರೆ ಮೆಚ್ಯೂರಿಟಿ ಆದ ಮೇಲೆ ಒಬ್ಬ ಹೂಡಿಕೆದಾರರಿಗೆ ಮಾತ್ರ ಹಣ ನೀಡಲಾಗುತ್ತದೆ.
ನೀವು ಎಷ್ಟು ಹೂಡಿಕೆ ಮಾಡಬಹುದು?
ಈ ಪೋಸ್ಟ್ ಆಫೀಸ್ ಯೋಜನೆ(Post Office Scheme)ಯು ಪ್ರಸ್ತುತ 6.8% ಬಡ್ಡಿದರವನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು ಕನಿಷ್ಟ 1,000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು ಮತ್ತು 100 ರ ಗುಣಕಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಆದರೆ, ಇದರಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ.
ಇದನ್ನೂ ಓದಿ : ಹಳೆಯ ಬ್ಯಾಂಕ್ ಅಕೌಂಟ್ ಗಳಿದ್ದರೆ ತಕ್ಷಣ ಕ್ಲೋಸ್ ಮಾಡಿ , ಇಲ್ಲವಾದರೆ ಭರಿಸಬೇಕಾಗುತ್ತದೆ ನಷ್ಟ
ಆದಾಯ ತೆರಿಗೆ ವಿನಾಯಿತಿಯೂ ದೊರೆಯಲಿದೆ
ನೀವು ಎನ್‌ಎಸ್‌ಸಿ(NSC)ಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪ್ರತಿ ವರ್ಷ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ತೆರಿಗೆ ವಿಧಿಸಬಹುದಾದ ಆದಾಯದ ಸಂದರ್ಭದಲ್ಲಿ, ಮೊತ್ತವನ್ನು ಒಟ್ಟು ಆದಾಯದಿಂದ ಕಡಿತಗೊಳಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.