ಹಳೆಯ ಬ್ಯಾಂಕ್ ಅಕೌಂಟ್ ಗಳಿದ್ದರೆ ತಕ್ಷಣ ಕ್ಲೋಸ್ ಮಾಡಿ , ಇಲ್ಲವಾದರೆ ಭರಿಸಬೇಕಾಗುತ್ತದೆ ನಷ್ಟ

ನೀವು ಕೂಡಾ ಇಂಥಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತಕ್ಷಣ ಹಳೆಯ ಬ್ಯಾಂಕ್ ಖಾತೆಯನ್ನು ಮುಚ್ಚಬೇಕು. ಹಾಗೆ ಮಾಡದಿದ್ದರೆ ನಷ್ಟ ಸಂಭವಿಸುತ್ತದೆ. ಸುಲಭವಾಗಿ ಬ್ಯಾಂಕ್ ಖಾತೆಯನ್ನು ಹೇಗೆ ಮುಚ್ಚಬಹುದು ನೋಡೋಣ.  

Written by - Ranjitha R K | Last Updated : Dec 16, 2021, 02:45 PM IST
  • ಹಳೆಯ ಬ್ಯಾಂಕ್ ಖಾತೆಯನ್ನು ಮುಚ್ಚಬೇಕಾಗುತ್ತದೆ
  • ಇಲ್ಲದಿದ್ದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು
  • ಖಾತೆಯನ್ನು ಮುಚ್ಚುವ ಪ್ರಕ್ರಿಯೆ ಹೇಗೆ ತಿಳಿಯಿರಿ
ಹಳೆಯ ಬ್ಯಾಂಕ್ ಅಕೌಂಟ್ ಗಳಿದ್ದರೆ ತಕ್ಷಣ ಕ್ಲೋಸ್ ಮಾಡಿ , ಇಲ್ಲವಾದರೆ ಭರಿಸಬೇಕಾಗುತ್ತದೆ ನಷ್ಟ  title=
ಹಳೆಯ ಬ್ಯಾಂಕ್ ಖಾತೆಯನ್ನು ಮುಚ್ಚಬೇಕಾಗುತ್ತದೆ (file photo)

ನವದೆಹಲಿ : ಅನೇಕ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು (Bank account) ಹೊಂದಿರುತ್ತಾರೆ. ಕಂಪನಿಯ ವರ್ಗಾವಣೆ ಅಥವಾ ಬದಲಾವಣೆಯಿಂದಾಗಿ, ಕೆಲವೊಮ್ಮೆ ಬ್ಯಾಂಕ್ ಖಾತೆಯನ್ನು ಸಹ ಬದಲಾಯಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಹೊಸ ಖಾತೆಯಲ್ಲಿ ವಹಿವಾಟು ಮಾಡಲು ಪ್ರಾರಂಭಿಸುತ್ತಾರೆ.  ಹಳೆಯ ಖಾತೆಯ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಝೀರೋ ಬ್ಯಾಲೆನ್ಸ್ ಸ್ಯಾಲರಿ ಅಕೌಂಟ್ ನಲ್ಲಿ (Zero balance salary account)  ಯಾವುದೇ ಸಂಬಳದ ಕ್ರೆಡಿಟ್ ಆಗದೆ ಇದ್ದಾಗ, ಬ್ಯಾಂಕ್ ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸುತ್ತದೆ. ಇದರಲ್ಲಿ ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿಸಬೇಕಾಗುತ್ತದೆ. ಇಲ್ಲವಾದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಅಂತಹ ಖಾತೆಯನ್ನು ತಕ್ಷಣವೇ ಮುಚ್ಚುವುದು ಅವಶ್ಯಕವಾಗಿರುತ್ತದೆ. 

ಭರಿಸಬೇಕಾಗುತ್ತದೆ ನಷ್ಟ : 
ನೀವು ಕೂಡಾ ಇಂಥಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತಕ್ಷಣ ಹಳೆಯ ಬ್ಯಾಂಕ್ ಖಾತೆಯನ್ನು (old bank account) ಮುಚ್ಚಬೇಕು. ಹಾಗೆ ಮಾಡದಿದ್ದರೆ ನಷ್ಟ ಸಂಭವಿಸುತ್ತದೆ. ಸುಲಭವಾಗಿ ಬ್ಯಾಂಕ್ ಖಾತೆಯನ್ನು ಹೇಗೆ ಮುಚ್ಚಬಹುದು ನೋಡೋಣ.  

ಇದನ್ನೂ ಓದಿ : Bank Union Strike: ಇಂದಿನಿಂದ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ, ನಡೆಯುವುದಿಲ್ಲ ಬ್ಯಾಂಕ್ ಕೆಲಸ

ಮೊದಲ ಖಾತೆಯಲ್ಲಿನ ಹಣವನ್ನು ತೆಗೆದುಕೊಳ್ಳಿ : 
ಯಾವ ಬ್ಯಾಂಕ್ ಉಳಿತಾಯ ಖಾತೆಯನ್ನು ಮುಚ್ಚಬೇಕೆಂದು ನಿರ್ಧರಿಸುತ್ತಿರೋ, ಆ ಖಾತೆಯಿಂದ ಎಲ್ಲಾ ಹಣವನ್ನು ಹಿಂಪಡೆಯಿರಿ. ಎಟಿಎಂನಿಂದ (ATM) ಅಥವಾ ಆನ್‌ಲೈನ್ ವರ್ಗಾವಣೆಯ (Online transfer) ಸಹಾಯದಿಂದ ಈ ಕೆಲಸವನ್ನು ಮಾಡಬಹುದು. ಇದರ ಹೊರತಾಗಿ, ಖಾತೆಯನ್ನು ಮುಚ್ಚುವಾಗ, ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಡೆಬಿಟ್‌ಗಳನ್ನು ಡಿಲಿಂಕ್ ಮಾಡಬೇಕು. ನಿಮ್ಮ ಈ ಬ್ಯಾಂಕ್ ಖಾತೆಯನ್ನು ಮಾಸಿಕ ಸಾಲದ EMI ಗೆ ಲಿಂಕ್ ಮಾಡಿದ್ದರೆ, ಸಾಲವನ್ನು ನೀಡಿರುವ ವ್ಯಕ್ತಿ ಅಥವಾ ಸಂಸ್ಥೆಗೆ ಹೊಸ ಖಾತೆ ಸಂಖ್ಯೆಯನ್ನು ನೀಡಬೇಕು.

ಒಂದು ವರ್ಷಕ್ಕಿಂತ ಹಳೆಯ ಖಾತೆಗೆ ಚಾರ್ಜ್ ಇರುವುದಿಲ್ಲ :
ಸಾಮಾನ್ಯವಾಗಿ, ಬ್ಯಾಂಕ್‌ಗಳು (Bank) ಉಳಿತಾಯ ಖಾತೆಯನ್ನು ತೆರೆದ 14 ದಿನಗಳಲ್ಲಿ ಅದನ್ನು ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. 14 ದಿನಗಳಿಂದ 1 ವರ್ಷದ ಅವಧಿಯೊಳಗೆ ಖಾತೆಯನ್ನು ಮುಚ್ಚಿದರೆ ಕ್ಲೋಸಿಂಗ್ ಚಾರ್ಜ್ (Closing Charge) ಪಾವತಿಸಬೇಕಾಗಬಹುದು. ಬ್ಯಾಂಕ್‌ಗಳು ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಹಳೆಯ ಖಾತೆಯನ್ನು ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

ಇದನ್ನೂ ಓದಿ : Voter List: ಈಗ ಕುಳಿತಲ್ಲಿಯೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಿ

ಖಾತೆಯನ್ನು ಹೀಗೆ ಮುಚ್ಚಬಹುದು :
ನಿಮ್ಮ ಖಾತೆಯನ್ನು ಮುಚ್ಚಲು ನೀವು ಶಾಖೆಗೆ ಭೇಟಿ ನೀಡಬೇಕು. ಇಲ್ಲಿ ನೀವು ಖಾತೆಯನ್ನು ಮುಚ್ಚುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಜೊತೆಗೆ, ನೀವು ಡಿ-ಲಿಂಕಿಂಗ್ ಫಾರ್ಮ್ ಅನ್ನು ಸಹ ಸಲ್ಲಿಸಬೇಕು. ಇದರೊಂದಿಗೆ ನಿಮ್ಮ ಚೆಕ್ ಬುಕ್, ಕ್ರೆಡಿಟ್ ಕಾರ್ಡ್ (credit card) ಮತ್ತು ಡೆಬಿಟ್ ಕಾರ್ಡ್ (debit card) ಅನ್ನು ಸಹ ಬ್ಯಾಂಕಿಗೆ ಹಿಂತಿರುಗಿಸಬೇಕು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News