ಸೆ. 30 ರ ನಂತರ ನಿಂತು ಹೋಗಲಿದೆ LICಯ ಈ Policy!ನಿಮ್ಮ ಬಳಿ ಇರುವುದು 5 ದಿನದ ಸಮಯಾವಕಾಶ ಮಾತ್ರ
LIC Dhan Vriddhi Scheme: ಎಲ್ ಐಸಿ ತನ್ನ ಪಾಲಿಸಿಯೊಂದನ್ನು ಸೆಪ್ಟೆಂಬರ್ 30 ರಂದು ಅಂದರೆ 5 ದಿನಗಳ ನಂತರ ನಿಲ್ಲಿಸಲಿದೆ.
LIC Dhan Vriddhi Scheme : ಗ್ರಾಹಕರಿಗಾಗಿ ಎಲ್ಐಸಿ ಕಾಲಕಾಲಕ್ಕೆ ಅನೇಕ ಪಾಲಿಸಿಗಳನ್ನು ಪ್ರಾರಂಭಿಸುತ್ತದೆ. ಆದರೆ ಈ ಬಾರಿ LIC ತನ್ನ ಪಾಲಿಸಿಯನ್ನು ನಿಲ್ಲಿಸಲಿದೆ. ತನ್ನ ಪಾಲಿಸಿಯೊಂದನ್ನು ಸೆಪ್ಟೆಂಬರ್ 30 ರಂದು ಅಂದರೆ 5 ದಿನಗಳ ನಂತರ ನಿಲ್ಲಿಸಲಿದೆ. ಎಲ್ಐಸಿಯ ಈ ಯೋಜನೆಯ ಹೆಸರು ಧನ್ ವೃದ್ಧಿ ಯೋಜನೆ. ಇದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ ಸಾಕು :
LICಯ ಧನ್ ವೃದ್ಧಿ ಪಾಲಿಸಿಯಲ್ಲಿ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಸಾಕು. ಒಮ್ಮೆ ಮಾಡಿದ ಹೂಡಿಕೆ ಆಧಾರದ ಅಡಿಯಲ್ಲಿ ಜೀವನದುದ್ದಕ್ಕೂ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಗ್ರಾಹಕರು ಜೀವ ರಕ್ಷಣೆಯ ಜೊತೆಗೆ ಉಳಿತಾಯದ ಲಾಭವನ್ನೂ ಪಡೆಯುತ್ತಾರೆ. ಇದಲ್ಲದೆ, ಹೂಡಿಕೆದಾರರು ಈ ಯೋಜನೆಯಿಂದ ಯಾವಾಗ ಬೇಕಾದರೂ ನಿರ್ಗಮಿಸಬಹುದು.
ಇದನ್ನೂ ಓದಿ : ಈ ಬ್ಯಾಂಕ್ ಅನ್ನು ಮುಚ್ಚುವ ನಿರ್ಧಾರ ಮಾಡಿದ RBI!ಗ್ರಾಹಕರಿಗೆ ಸಿಗುವುದು 5 ಲಕ್ಷ ರೂ!
ಜೂನ್ 23 ರಂದು ಯೋಜನೆ ಪ್ರಾರಂಭ :
ಧನ್ ವೃದ್ಧಿ ಪಾಲಿಸಿಯನ್ನು LIC ಜೂನ್ 23 ರಂದು ಪ್ರಾರಂಭಿಸಿದ್ದು, ಸೆಪ್ಟೆಂಬರ್ 30 ರಂದು ಕೊನೆಗೊಳಿಸಲಿದೆ. ಎಲ್ಐಸಿ ಪ್ರಕಾರ, ವೈಯಕ್ತಿಕ, ಉಳಿತಾಯ ಮತ್ತು ಏಕ ಪ್ರೀಮಿಯಂ ಜೀವನ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ ಎಲ್ ಐಸಿ :
ಧನ್ ವೃದ್ಧಿ ಪಾಲಿಸಿ ಸೆಪ್ಟೆಂಬರ್ 2023 ರಂದು ಕೊನೆಗೊಳ್ಳಲಿದೆ ಎನ್ನುವ ಮಾಹಿತಿಯನ್ನು LIC ಟ್ವೀಟ್ ಮೂಲಕ ತಿಳಿಸಿದೆ. ಎಲ್ಐಸಿಯ ಧನ್ ವೃದ್ಧಿ ಯೋಜನೆಯು ರಕ್ಷಣೆ ಮತ್ತು ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, LIC ಏಜೆಂಟ್ ಅಥವಾ LIC ಶಾಖೆಯನ್ನು ಸಂಪರ್ಕಿಸಬಹುದು.
ಇದನ್ನೂ ಓದಿ : Creta, Seltos, Grand Vitara, Elevate.. ಯಾವುದು ಅಗ್ಗದ ಕಾರು? ಬೆಲೆಗಳಲ್ಲಿನ ವ್ಯತ್ಯಾಸ ಇಲ್ಲಿದೆ ನೋಡಿ
ಎಲ್ಐಸಿ ಧನ್ ವೃದ್ಧಿ ಪಾಲಿಸಿಯ ಮೇಲೆ ಸಾಲ :
ಈ ಪಾಲಿಸಿಯಲ್ಲಿ ಎಲ್ಐಸಿಯಿಂದ ಸಾಲ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಯೋಜನೆಯನ್ನು ತೆಗೆದುಕೊಂಡ 3 ತಿಂಗಳ ನಂತರ ಇದರ ಮೇಲೆ ಸಾಲವನ್ನು ಪಡೆಯಬಹುದು.
ಈ ಯೋಜನೆಯ ವಿಶೇಷತೆ ಏನು ? :
1. ಎಲ್ಐಸಿ ಧನ್ ವೃದ್ಧಿ ಯೋಜನೆಯ ಅವಧಿ 10, 15 ಮತ್ತು 18 ವರ್ಷಗಳು.
2. ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನಿಮ್ಮ ವಯಸ್ಸು ಕನಿಷ್ಠ 90 ದಿನಗಳು ಅಂದರೆ 3 ತಿಂಗಳಿಂದ 8 ವರ್ಷಗಳಾಗಿರಬೇಕು.
3. ಈ ಯೋಜನೆಯಲ್ಲಿ, 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.
4.LIC ಧನ್ ವೃದ್ಧಿ ಪಾಲಿಸಿ ಕನಿಷ್ಠ 1,25,000 ರೂ.ಗಳ ಖಾತರಿಯ ಲಾಭ ವನ್ನು ನೀಡುತ್ತದೆ.
5. ಇದು ಮೆಚ್ಯೂರಿಟಿಯ ಮೇಲೆ ಗ್ಯಾರಂಟಿ ರಿಟರ್ನ್ ಜೊತೆಗೆ ವಿಮೆ ಮಾಡಿದ ವ್ಯಕ್ತಿಗೆ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ.
ಇದನ್ನೂ ಓದಿ : ಅಗ್ಗದ ಮದ್ಯ ವಿಷಯದಲ್ಲಿ ಯಾವ ರಾಜ್ಯ ನಂಬರ್ 1 ಗೊತ್ತಾ? ಕರ್ನಾಟಕದಲ್ಲಿ ಎಷ್ಟು ತೆರಿಗೆ ಬೀಳುತ್ತೇ?https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=q9auZ2eqeZo
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.