ನವದೆಹಲಿ : Senior Citizens Special Fixed Deposit: ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ನಡೆಸುತ್ತಿವೆ. ಈ ಯೋಜನೆಗಳು  ಸೆಪ್ಟೆಂಬರ್ 30 ರಂದು ಸ್ಥಗಿತಗೊಳಿಸಲಾಗುವುದು.  ಈ ಯೋಜನೆಯನ್ನು  2020  ರ ಮೇಯಲ್ಲಿ ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ಆರಂಭಿಸಿವೆ.


COMMERCIAL BREAK
SCROLL TO CONTINUE READING

ಏನಿದು ವಿಶೇಷ ಎಫ್‌ಡಿ ಯೋಜನೆ ? :
ಈ ಸ್ಪೆಷಲ್ ಎಫ್ ಡಿ ಸ್ಕೀಮ್ ನಲ್ಲಿ (Special FD Scheme) ಹೆಚ್ಚಿನ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಆಯ್ದ ಮೆಚ್ಯೂರಿಟಿ ಅವಧಿಯೊಂದಿಗೆ ನಿಶ್ಚಿತ ಠೇವಣಿಯಲ್ಲಿ, ಹಿರಿಯ ನಾಗರಿಕರು ಅನ್ವಯವಾಗುವ ಬಡ್ಡಿ ದರಕ್ಕಿಂತ 0.50 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ. ಅಂದರೆ ಸಾಮಾನ್ಯ ಗ್ರಾಹಕರಿಗಿಂತ 1 ಪ್ರತಿಶತದಷ್ಟು ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.


ಇದನ್ನೂ ಓದಿ : Personal Loan on LIC Policy : LIC Policy ಮೇಲೆ ಪಡೆಯಬಹುದು ಪರ್ಸನಲ್ ಲೋನ್, ಹೇಗೆ ತಿಳಿಯಿರಿ


ಈ ಯೋಜನೆಯನ್ನು ಹಲವು ಬಾರಿ ವಿಸ್ತರಿಸಲಾಗಿದೆ :
ಬ್ಯಾಂಕುಗಳು (Bank) ಈ ಯೋಜನೆಯನ್ನು ಹಲವು ಬಾರಿ ವಿಸ್ತರಿಸಿವೆ. ಈ ಯೋಜನೆಯನ್ನು ಮೊದಲು 30 ಸೆಪ್ಟೆಂಬರ್ 2020, ನಂತರ 31 ಡಿಸೆಂಬರ್, ನಂತರ 31 ಮಾರ್ಚ್ 2021 ರವರೆಗೆ, ಮಾರ್ಚ್ ನಂತರ 30 ಜೂನ್ 2021 ರವರೆಗೆ ವಿಸ್ತರಿಸಲಾಯಿತು, ನಂತರ ಇದನ್ನು 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ. 


ಎಸ್‌ಬಿಐ ವಿಕೇರ್ ಡಿಪೋಸಿಟ್  ಸ್ಪೆಷಲ್  ಎಫ್‌ಡಿ ಸ್ಕೀಮ್  : 
ಎಸ್‌ಬಿಐ (SBI) , ಮೇ 2020 ರಲ್ಲಿ ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಕೇರ್ (SBI Wecare) ಹಿರಿಯ ನಾಗರಿಕರ ಅವಧಿ ಠೇವಣಿ ಯೋಜನೆಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ, 5 ವರ್ಷಗಳಿಗಿಂತ ಹೆಚ್ಚಿನ ಎಫ್‌ಡಿಗಳ ಮೇಲೆ ಹಿರಿಯ ನಾಗರಿಕರಿಗೆ 0.80 ಶೇಕಡಾ ಹೆಚ್ಚಿನ ದರ ನೀಡಲಾಗಿತ್ತು. ಪ್ರಸ್ತುತ, ಸಾಮಾನ್ಯ ಜನರು 5 ವರ್ಷಗಳ ಎಫ್‌ಡಿ ಮೇಲೆ 5.40 ಶೇಕಡಾ ದರದಲ್ಲಿ ಬಡ್ಡಿಯನ್ನು ಪಡೆದರೆ, ಹಿರಿಯ ನಾಗರಿಕರು ವಿಶೇಷ ಯೋಜನೆಯಡಿ  6.20 ಶೇಕಡಾ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.


ಇದನ್ನೂ ಓದಿ : Cheque ನೀಡುವ ಮುನ್ನ ತಿಳಿದಿರಲಿ RBI ಹೊಸ ನಿಯಮ, ಇಲ್ಲವಾದರೆ ಎದುರಾದೀತು ಸಮಸ್ಯೆ


ಬ್ಯಾಂಕ್ ಆಫ್ ಬರೋಡಾ ಸ್ಪೆಷಲ್  ಎಫ್‌ಡಿ ಸ್ಕೀಮ್ :
'ವಿಶೇಷ ಹಿರಿಯ ನಾಗರಿಕರ ಎಫ್‌ಡಿ ಯೋಜನೆ' ಅಡಿಯಲ್ಲಿ ಹಿರಿಯ ನಾಗರಿಕರಿಗೆ 100 ಮೂಲ ಅಂಕಗಳನ್ನು ಅಂದರೆ 1% ಹೆಚ್ಚಿನ ಬಡ್ಡಿಯನ್ನು  (Interest) ಬ್ಯಾಂಕ್ ಆಫ್ ಬರೋಡಾ (Bank Of Baroda) ನೀಡುತ್ತಿದೆ. 5 ವರ್ಷದಿಂದ 10 ವರ್ಷದ ಎಫ್‌ಡಿಗಳ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ವಾರ್ಷಿಕ 6.25% ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. 


ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ :
ಐಸಿಐಸಿಐ ಬ್ಯಾಂಕ್ (ICICI Bank)  ಹಿರಿಯ ನಾಗರಿಕರಿಗಾಗಿ 'ICICI Bank Golden Years ಹೆಸರಿನ ಯೋಜನೆಯನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ, ಎಫ್‌ಡಿ ಹೊಂದಿರುವ ಹಿರಿಯ ನಾಗರಿಕರಿಗೆ  80 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚು ಬಡ್ಡಿಯಾಗಿ ನೀಡಲಾಗುತ್ತದೆ. ಅಂದರೆ, ಹಿರಿಯ ನಾಗರಿಕರು ಈ ಯೋಜನೆಯಡಿ ಎಫ್ಡಿ ಮಾಡಲು 6.30% ಬಡ್ಡಿಯನ್ನು ಪಡೆಯುತ್ತಿದ್ದಾರೆ.


ಇದನ್ನೂ ಓದಿ : Aadhaar Services: ಇಂಟರ್ನೆಟ್ ಇಲ್ಲದೆಯೇ ಬರೀ SMS ಮೂಲಕವೇ ಸಿಗಲಿದೆ ಆಧಾರ್ ಗೆ ಸಂಬಂಧಪಟ್ಟ ಈ ಸೇವೆ


HDFC ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್  FD: 
HDFC ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ಸೀನಿಯರ್ ಸಿಟಿಜನ್ ಕೇರ್  FD' ಯೋಜನೆಯನ್ನು ಆರಂಭಿಸಿತ್ತು. ಇದರ ಅಡಿಯಲ್ಲಿ, ಬ್ಯಾಂಕ್ FD ಯ ಮೇಲೆ 0.25 ಶೇಕಡಾ ಹೆಚ್ಚುವರಿ ಪ್ರೀಮಿಯಂ ಅನ್ನು ಆಫರ್ ಮಾಡುತ್ತಿದೆ. ಹಿರಿಯ ನಾಗರಿಕರಿಗೆ ಇದು ಈಗಿರುವ ಪ್ರೀಮಿಯಂ ಶೇಕಡಾ 0.50 ಕ್ಕಿಂತ ಹೆಚ್ಚಾಗಿದೆ. ಈ ಯೋಜನೆಯು 5 ವರ್ಷದಿಂದ 10 ವರ್ಷಗಳವರೆಗೆ ಇರುತ್ತದೆ. ಅಂದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿಯಲ್ಲಿ ಲಭ್ಯವಿರುವ ಬಡ್ಡಿ ದರವು 6.25 ಶೇಕಡಾ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ