ನವದೆಹಲಿ : Personal Loan on LIC Policy: ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೈಯಕ್ತಿಕ ಸಾಲಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಕೊರೊನಾದಿಂದ (Coronavirus) ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಎಲ್‌ಐಸಿ ಪಾಲಿಸಿಯಿದ್ದರೆ, ಪಾಲಿಸಿ ಮೇಲೆ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು (Personal loan on LIC) ಪಡೆಯಬಹುದು. ಆದರೆ ಎಲ್‌ಐಸಿ ಪಾಲಿಸಿ ಮೇಲೆ ವೈಯಕ್ತಿಕ ಸಾಲವನ್ನು ಕೇವಲ ಎಂಡೋಮೆಂಟ್ ಪಾಲಿಸಿಯಲ್ಲಿ ಮಾತ್ರ ತೆಗೆದುಕೊಳ್ಳಬಹುದು.
ದೇಶದ ಅತಿದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ನೀಡುತ್ತಿದೆ. ನೀವು LIC ಪಾಲಿಸಿಯನ್ನು ಖರೀದಿಸಿದ್ದರೆ, ಠೇವಣಿ ಮಾಡಿದ ಪ್ರೀಮಿಯಂ ಮೊತ್ತದ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ : LPG Cylinder Subsidy: ಈಗ ಯಾರಿಗೆ ಸಿಗುತ್ತೆ ಎಲ್‌ಪಿಜಿ ಸಬ್ಸಿಡಿ? ಇಲ್ಲಿದೆ ಮಾಹಿತಿ
ಯಾರು ಸಾಲ ತೆಗೆದುಕೊಳ್ಳಬಹುದು?
ಎಲ್‌ಐಸಿ ಪಾಲಿಸಿ (LIC Policy) ಮೇಲೆ ಸಾಲ ಪಡೆಯಲು, ಭಾರತೀಯ ಪ್ರಜೆಯಾಗಿರುವುದು ಅವಶ್ಯಕ. ಇದರ ಹೊರತಾಗಿ, LIC ಪಾಲಿಸಿಯನ್ನು ಹೊಂದಿರಬೇಕು. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಕನಿಷ್ಠ ಮೂರು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿರಬೇಕು ಎನ್ನುವುದು ನೆನಪಿರಲಿ. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು. ಈ ಷರತ್ತುಗಳನ್ನು ಪೂರೈಸುವ ಅರ್ಜಿದಾರರು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಎಷ್ಟು ಸಾಲವನ್ನು ಪಡೆಯಬಹುದು? :
ಪಾಲಿಸಿಯ ಸರೆಂಡರ್ ಮೌಲ್ಯದ ಗರಿಷ್ಠ 90% ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಎಲ್ಐಸಿ ಪಾಲಿಸಿಯ ಮೇಲಿನ ಸಾಲವು ಕನಿಷ್ಠ 6 ತಿಂಗಳವರೆಗೆ ಲಭ್ಯವಿರುತ್ತದೆ. ಈ ಸಾಲದ (Loan) ಇನ್ನೊಂದು ಉತ್ತಮ ಅಂಶವೆಂದರೆ, ಈ ಸಾಲವನ್ನು ಮರುಪಾವತಿಸುವ ಅಗತ್ಯವಿಲ್ಲ. ಪಾಲಿಸಿಯ ಮುಕ್ತಾಯದ ನಂತರ, ಕಂಪನಿಯು ಸಾಲದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ನಿಮಗೆ ಹಿಂದಿರುಗಿಸುತ್ತದೆ. ಸಾಲದ ಮೇಲಿನ ಬಡ್ಡಿಯನ್ನು (Interest) ಮಾತ್ರ ನೀವು ಪಾವತಿಸಬೇಕು.
ಇದನ್ನೂ ಓದಿ : ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ Jeep Compact Electric SUV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
ಅರ್ಜಿ ಸಲ್ಲಿಸುವುದು ಹೇಗೆ ? :
ಸಾಲ ಪಡೆಯಲು ನೀವು ಎಲ್‌ಐಸಿ ಕಚೇರಿಗೆ ಹೋಗುವ ಅಗತ್ಯವಿಲ್ಲ. ನೀವು ಮನೆಯಲ್ಲಿ ಕುಳಿತು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಎಲ್‌ಐಸಿ ತನ್ನ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಲಾಭ ಪಡೆಯಬೇಕಾದರೆ, https://www.licindia.in/home/policyloanoptions ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಲಿಂಕ್ ಗೆ ಭೇಟಿ ನೀಡಿದ ನಂತರ, online ಸಾಲದ ಅರ್ಜಿಯ ಸೌಲಭ್ಯವನ್ನು ಪಡೆಯುತ್ತೀರಿ. ಇಲ್ಲಿ ಕ್ಲಿಕ್ ಮಾಡಿದ ನಂತರ, ಕೇಳಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಂತರ ಒಂದು ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಮಾಡಿದ ನಂತರ ಈ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗಿದೆಯೇ ಎನ್ನುವುದನ್ನು ಚೆಕ್ ಮಾಡಿ ಅದರಲ್ಲಿ ಸಹಿ ಮಾಡಿ. ಹೀಗೆ ಸಹಿ ಮಾಡಿದ ಫಾರ್ಮ್ ಸ್ಕ್ಯಾನ್ ಮಾಡಿ LIC ವೆಬ್‌ಸೈಟ್‌ನಲ್ಲಿ ಮತ್ತೆ ಅಪ್‌ಲೋಡ್ ಮಾಡಬೇಕು. ಅಪ್ಲೋಡ್ ಮಾಡಿದ ನಂತರ, ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಇದರ ನಂತರ ಎಲ್ಐಸಿ ನಿಮಗೆ ಸಾಲ ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.