Salary of MLAs: ನಮ್ಮ ರಾಜ್ಯದ ಶಾಸಕರಿಗೆ ತಿಂಗಳಿಗೆ ಸಿಗುವ ವೇತನ ಎಷ್ಟು ಗೊತ್ತೇ?
Salary of MLAs: ನಮ್ಮ ಜನನಾಯಕರಿಗೆ ತಿಂಗಳಿಗೆ ಎಷ್ಟು ವೇತನ ಸಿಗಬಹುದು ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಇದ್ದೇ ಇರುತ್ತದೆ. ನಿನ್ನೆಯಷ್ಟೇ ದೆಹಲಿ ಸರ್ಕಾರ ತಮ್ಮ ಶಾಸಕರು, ಸಚಿವರ ವೇತನ ಹೆಚ್ಚಳದ ಮಸೂದೆಯನ್ನು ಅಂಗೀಕರಿಸಿದೆ. ದೂರವಾಣಿ ಭತ್ಯೆ 2,000 ರೂ.ನಿಂದ 8,000 ರೂ.ನಿಂದ 10,000 ರೂ.ಗೆ ಏರಿಕೆಯಾಗಲಿದ್ದು, ಕಾರ್ಯದರ್ಶಿ ಭತ್ಯೆ 10,000 ರೂ.ನಿಂದ 15,000 ರೂ.ವರೆಗೆ ಹೆಚ್ಚಳವಾಗಿದೆ. ನಮ್ಮ ರಾಜ್ಯದ ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಗೊತ್ತೇ?
ಶಾಸಕರ ವೇತನ: ಯಾವುದೇ ಕ್ಷೇತ್ರದಲ್ಲಿ ಏನೇ ಸಮಸ್ಯೆ ಇದ್ದರೂ ಜನರು ಮೊದಲು ತಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡುವುದು ಆ ಪ್ರದೇಶದ ಶಾಸಕರಿಗೆ. ಅಂತೆಯೇ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬಂದರೂ ಮೊದಲು ಪ್ರತಿಭಟನೆಯ ಬಿಸಿ ತಾಕುವುದೇ ಶಾಸಕರಿಗೆ. ಜನರ ಸೇವೆಗಾಗಿ ರಾಜಕೀಯ ರಂಗದಲ್ಲಿ ದುಡಿಯುವ ನಮ್ಮ ಜನನಾಯಕರು ಅಂದರೆ ನಮ್ಮ ಶಾಸಕರಿಗೂ ಸಂಬಳ ದೊರೆಯುತ್ತದೆ. ಇದನ್ನು ಶಾಸಕರ ಭತ್ಯೆ ಎಂತಲೂ ಕರೆಯಲಾಗುತ್ತದೆ. ನಿನ್ನೆಯಷ್ಟೇ (ಜುಲೈ 4) ದೆಹಲಿ ವಿಧಾನಸಭೆಯಲ್ಲಿ ದೆಹಲಿ ಸರ್ಕಾರದ ಕಾನೂನು ವ್ಯವಹಾರಗಳ ಸಚಿವ ಕೈಲಾಶ್ ಗೆಹ್ಲೋಟ್ ಅವರು ಸಚಿವರು, ಶಾಸಕರು, ಸ್ಪೀಕರ್, ಉಪಸಭಾಪತಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ವೇತನವನ್ನು ಹೆಚ್ಚಿಸುವ ಮಸೂದೆಯನ್ನು ಮಂಡಿಸಿದರು. ದೆಹಲಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ವೇತನ ಮತ್ತು ಭತ್ಯೆಗಳನ್ನು ದ್ವಿಗುಣಗೊಳಿಸುವ ಮಸೂದೆಯನ್ನುಅಂಗೀಕರಿಸಿದೆ. ದೆಹಲಿ ಶಾಸಕರಿಗೆ 66.67% ವೇತನ ಹೆಚ್ಚಳವನ್ನು ಪ್ರಸ್ತಾಪಿಸುವ ಮಸೂದೆಯನ್ನು ಈಗ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗುವುದು.
ಪ್ರಸ್ತುತ ದೆಹಲಿಯಲ್ಲಿರುವ ಶಾಸಕರು ತಿಂಗಳಿಗೆ 54,000 ರೂಪಾಯಿಗಳನ್ನು ವೇತನ ಮತ್ತು ಭತ್ಯೆಯಾಗಿ ಪಡೆಯುತ್ತಾರೆ, ಈ ಭಟ್ಯೆಯು ಹೆಚ್ಚಳದ ನಂತರ 90,000 ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಪರಿಷ್ಕೃತ ವೇತನ ಮತ್ತು ಭತ್ಯೆಗಳ ವಿಘಟನೆಯು ಮೂಲ ವೇತನ - ರೂ. 30,000, ಕ್ಷೇತ್ರ ಭತ್ಯೆ - ರೂ. 25,000, ಕಾರ್ಯದರ್ಶಿ ಭತ್ಯೆ - ರೂ. 15,000, ದೂರವಾಣಿ ಭತ್ಯೆ - ರೂ. 10,000, ಸಾರಿಗೆ ಭತ್ಯೆ - ರೂ. 10,000 ಕೂಡ ಸೇರಿದೆ. ಶಾಸಕರಿಗೆ ಮಾಸಿಕ ವೇತನದ ಹೊರತಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ವರ್ಷ 1 ಕೋಟಿ ರೂ.ನಿಂದ 8 ಕೋಟಿ ರೂ. ವರೆಗೆ ಕ್ಷೇತ್ರ ಭತ್ಯೆಯನ್ನೂ ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣಕಾಸು ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, "ಪ್ರತಿಭಾವಂತರನ್ನು ರಾಜಕೀಯಕ್ಕೆ ಆಹ್ವಾನಿಸಲು, ಪ್ರತಿಫಲಗಳು ಇರಬೇಕು. ಕಾರ್ಪೊರೇಟ್‌ಗಳು ಸಂಬಳದ ಕಾರಣದಿಂದ ಪ್ರತಿಭಾವಂತ ಜನರನ್ನು ಪಡೆಯುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧುರಿ ಕೂಡ ವೇತನ ಹೆಚ್ಚಳವನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ- HCL Recruitment 2022 : HCL ನಲ್ಲಿ 290 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ : ಪರೀಕ್ಷೆಯಿಲ್ಲದೆ ಆಯ್ಕೆ!
ಶಾಸಕರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ದೆಹಲಿ ವಿಧಾನಸಭೆಯಲ್ಲಿ ಶಾಸಕಾಂಗ ಪ್ರಸ್ತಾವನೆಯನ್ನು ಮಂಡಿಸಲು ಕೇಂದ್ರ ಗೃಹ ಸಚಿವಾಲಯವು ದೆಹಲಿ ಸರ್ಕಾರಕ್ಕೆ ತನ್ನ ಪೂರ್ವಾನುಮತಿಯನ್ನು ಮೇ ತಿಂಗಳಲ್ಲಿ ತಿಳಿಸಿತ್ತು.
ದೆಹಲಿಯ ಶಾಸಕರ ವೇತನವು ದೇಶದಲ್ಲೇ ಅತ್ಯಂತ ಕಡಿಮೆ:
ದೆಹಲಿಯ ಶಾಸಕರ ವೇತನವು ದೇಶದಲ್ಲೇ ಅತ್ಯಂತ ಕಡಿಮೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ. ಆಮ್ ಆದ್ಮಿ ಪಕ್ಷ ಸೋಮವಾರ ಟ್ವೀಟ್ ಮಾಡಿದ್ದು, ದೇಶದ ವಿವಿಧ ರಾಜ್ಯಗಳ ಶಾಸಕರ ವೇತನದ ಬಗ್ಗೆ ಮಾಹಿತಿ ನೀಡಲಾಗಿದೆ. ಎಎಪಿಯ ಟ್ವೀಟ್ ಪ್ರಕಾರ, ತೆಲಂಗಾಣ ಶಾಸಕರು ಅತ್ಯಧಿಕ ವೇತನವನ್ನು ಪಡೆಯುತ್ತಿದ್ದಾರೆ. ಇವರು ವೇತನ, ಭತ್ಯೆ ಸೇರಿ ತಿಂಗಳಿಗೆ 2.50 ಲಕ್ಷ ರೂ. ವರೆಗೆ ಭತ್ಯೆ ಪಡೆಯುತ್ತಾರೆ ಎಂದು ಟ್ವೀಟ್ ಉಲ್ಲೇಖಿಸಿದೆ.
ಶರದ್ ಪವಾರ್ ಗೆ ಬಂತು ಲವ್ ಲೆಟರ್...!
ಈ ಮೇಲಿನ ಅಂಕಿ-ಅಂಶಗಳ ಪ್ರಕಾರ ಇಡೀ ದೇಶದಲ್ಲಿ ತೆಲಂಗಾಣ ರಾಜ್ಯದ ಶಾಸಕರು ಅತಿ ಹೆಚ್ಚು ಭತ್ಯೆಯನ್ನು ಪಡೆಯುತ್ತಿದ್ದು, ತ್ರಿಪುರಾ ಶಾಸಕರು ಅತಿ ಕಡಿಮೆ ಭತ್ಯೆಯನ್ನು ಪಡೆಯುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.