ಶರದ್ ಪವಾರ್ ಗೆ ಬಂತು ಲವ್ ಲೆಟರ್...!

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. 

Written by - Zee Kannada News Desk | Last Updated : Jul 1, 2022, 03:50 PM IST
  • "ಇದು ಸಂಪೂರ್ಣವಾಗಿ ಕಾಕತಾಳೀಯವೇ ಅಥವಾ ಇನ್ನೇನಾದರೂ ಇದೆಯೇ ?" ಎಂದು ಅವರು ಪ್ರಶ್ನಿಸಿದ್ದಾರೆ.
  • ಏತನ್ಮಧ್ಯೆ, ಶಿವಸೇನಾ ಸಂಸದ ಮತ್ತು ವಕ್ತಾರ ಸಂಜಯ್ ರಾವುತ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಜುಲೈ 1 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ.
ಶರದ್ ಪವಾರ್ ಗೆ ಬಂತು ಲವ್ ಲೆಟರ್...! title=
file photo

ಮುಂಬೈ: ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ ದಿನದಂದು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಈ ನೋಟಿಸ್ ಗಳನ್ನು ಅವರು ಪ್ರೇಮ ಪತ್ರಗಳು ಎಂದು ವ್ಯಂಗವಾಡಿದ್ದಾರೆ.

ಈ ಕುರಿತಾಗಿ ಮರಾಠಿಯಲ್ಲಿ ಟ್ವೀಟ್ ಮಾಡಿರುವ ಅವರು "ಇಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ಏಜೆನ್ಸಿಗಳ ಸಹಾಯವನ್ನು ಬಳಸಲಾಗುತ್ತಿದೆ ಎನ್ನುವುದು ತಿಳಿದುಬಂದಿದೆ,ಅನೇಕ ಶಾಸಕಾಂಗ ಸಭೆಯ ಸದಸ್ಯರು ತಮಗೆ ವಿಚಾರಣೆಯ ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳುತ್ತಾರೆ. ಈಗ ಈ ಹೊಸ ವಿಧಾನವು ಪ್ರಾರಂಭವಾಗಿದೆ. ಐದು ವರ್ಷಗಳ ಹಿಂದೆ ಇಡಿ ಹೆಸರೂ ಗೊತ್ತಿರಲಿಲ್ಲ, ಆದರೆ ಇಂದು ಹಳ್ಳಿಗಳಲ್ಲಿಯೂ ಕೂಡ ನಿಮ್ಮ ಹಿಂದೆ ಇಡಿ ಇರುತ್ತದೆ ಎಂದು ಜನರು ತಮಾಷೆಯಾಗಿ ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Udaipur Murder Case : ISIS ನ ವಿಡಿಯೋ ನೋಡಿ ಕನ್ಹಯ್ಯಾ ಲಾಲ್ ಕೊಂದ ಪಾಪಿಗಳು!

ನಂತರ ಮಾತನಾಡಿದ ಅವರು, "ಈ ವ್ಯವಸ್ಥೆಯನ್ನು ವಿಭಿನ್ನ ರಾಜಕೀಯ ದೃಷ್ಟಿಕೋನ ಹೊಂದಿರುವ ಜನರಿಗೆ ಬಳಸಲಾಗುತ್ತದೆ. ನನಗೆ ಆದಾಯ ತೆರಿಗೆಯಿಂದ ಅಂತಹ ಪ್ರೇಮ ಪತ್ರ ಬಂದಿದೆ.ಅವರು ಈಗ 2004 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಅಫಿಡವಿಟ್‌ನಲ್ಲಿರುವ ಮಾಹಿತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದರು.

ಎನ್‌ಸಿಪಿ ರಾಜ್ಯ ಮುಖ್ಯಸ್ಥ ಮಹೇಶ್ ಭರತ್ ತಾಪಸೆ ಅವರು ಸಮಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, "ಇದು ಸಂಪೂರ್ಣವಾಗಿ ಕಾಕತಾಳೀಯವೇ ಅಥವಾ ಇನ್ನೇನಾದರೂ ಇದೆಯೇ ?" ಎಂದು ಅವರು ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ, ಶಿವಸೇನಾ ಸಂಸದ ಮತ್ತು ವಕ್ತಾರ ಸಂಜಯ್ ರಾವುತ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಜುಲೈ 1 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ.

ಇದನ್ನೂ ಓದಿ : Nupur Sharma Row : ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!

ಪವಾರ್ ಮತ್ತು ರಾವುತ್, ಜಯಂತ್ ಪಾಟೀಲ್ ಮತ್ತು ಬಾಳಾಸಾಹೇಬ್ ಥೋರಟ್ ಸೇರಿದಂತೆ ಇತರ ಎಂವಿಎ ನಾಯಕರು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ವಿರೋಧಿಗಳ ವಿರುದ್ಧ ದುರುಪಯೋಗಪಡಿಸಿಕೊಂಡಿರುವುದಲ್ಲದೆ ದ್ವೇಷದ ರಾಜಕೀಯವನ್ನು ಮಾಡುತ್ತಿದೆ' ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News