Credit Card Usage Tips: ಇತ್ತೀಚಿನ ದಿನಗಳಲ್ಲಿ ಜನರು ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟುಗಳನ್ನು ನಡೆಸುವುದು ಸಾಮಾನ್ಯವಾಗಿದೆ. ಜನರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಣ್ಣಪುಟ್ಟ ವ್ಯವಹಾರಗಳಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರಗಳನ್ನು ಕೂಡ ನಡೆಸುತ್ತಾರೆ. ಏಕೆಂದರೆ ಹೆಚ್ಚು ವಹಿವಾಟುಗಳನ್ನು ಮಾಡಿದವರಿಗೆ ಹೆಚ್ಚು ರಿವಾರ್ಡ್ ಪಾಯಿಂಟ್ ಗಳು ಸಿಗುತ್ತವೆ ಮತ್ತು ನಂತರ ನೀವು ಆ ರಿವಾರ್ಡ್ ಪಾಯಿಂಟ್‌ ಗಳನ್ನು ಬಳಸಿ ಉಡುಗೊರೆಗಳು, ಶಾಪಿಂಗ್ ಅಥವಾ ಕ್ಯಾಶ್‌ಬ್ಯಾಕ್ ಪಡೆಯಬಹುದು. ಆದರೆ, ಕ್ರೆಡಿಟ್ ಕಾರ್ಡ್ ಬಳಸುವಾಗ, ನಾವು ಶಾಲಾ ಪಡೆದು ಶಾಂಪಿಂಗ್ ಮಾಡುತ್ತಿದ್ದೇವೆ ಎಂಬ ಸಂಗತಿಯನ್ನು ಜನರು ನಂತರ ಮರೆತುಬಿಡುತ್ತಾರೆ. ಹೌದು,  ಕ್ರೆಡಿಟ್ ಕಾರ್ಡ್ ಒಂದು ರೀತಿಯ ಸಾಲವಾಗಿದೆ. ಪ್ರತಿಯೊಬ್ಬರೂ ಅದನ್ನು ನಂತರ ಮರುಪಾವತಿಸಬೇಕು ಮತ್ತು ಸಣ್ಣ ತಪ್ಪು ಕೂಡ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಇಂದಿನ ಈ ಲೇಖನದಲ್ಲಿ ನಾವು ಕ್ರೆಡಿಟ್ ಕಾರ್ಡ್ ಬಳಸಿ ಯಾವ ಮೂರು ವಹಿವಾಟುಗಳನ್ನು ಮಾಡಬಾರದು ಮತ್ತು ಅದರಿಂದ ಆಗುವ ನಷ್ಟ ಎಂದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Business News In Kannada)

COMMERCIAL BREAK
SCROLL TO CONTINUE READING

ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಬೇಡಿ
ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸುವಾಗ ಎಲ್ಲಾ ಬ್ಯಾಂಕಿನ ಏಜೆಂಟ್ ಗಳು ಕಾರ್ಡಿನ ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ. ಅದರಲ್ಲಿ ಅವರು ಕ್ರೆಡಿಟ್ ಕಾರ್ಡ್ ಸಹಾಯದಿಂದ ನೀವು ಹಣವನ್ನು ಕೂಡ ವಿಥ್ ಡ್ರಾ ಮಾಡಬಹುದು ಎಂಬುದನ್ನೂ ಕೂಡ ಹೇಳುತ್ತಾರೆ. ಆದಾಗ್ಯೂ, ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಳಸಿ ನಗದು ವಿಥ್ ಡ್ರಾ ಮಾಡಿದರೆ ಮೊದಲ ದಿನದಿಂದಲೇ ನಿಮಗೆ ಭಾರಿ ಬಡ್ಡಿ ಬೀಳುತ್ತದೆ ಎಂಬ ಸಂಗತಿಯನ್ನು ಅವರು ಹೇಳುವುದಿಲ್ಲ. ಈ ಬಡ್ಡಿ ತಿಂಗಳಿಗೆ ಶೇ. 2.5 ರಿಂದ ಶೇ.3.5 ರಷ್ಟಿರುತ್ತದೆ. ಇದಲ್ಲದೆ ನೀವು ಫ್ಲಾಟ್ ವಹಿವಾಟು ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ಒಂದೆಡೆ, ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಶಾಪಿಂಗ್‌ಗೆ ಬಿಲ್ ಪಾವತಿಸಲು ನಿಮಗೆ ಒಂದು ತಿಂಗಳ ಸಮಯ ಸಿಗುತ್ತದೆ ಮತ್ತು ನಿಗದಿತ ದಿನಾಂಕದವರೆಗೆ ನೀವು ಬಿಲ್ ಪಾವತಿಸದಿದ್ದರೆ, ನಿಮಗೆ ಬಡ್ಡಿ ವಿಧಿಸಲಾಗುತ್ತದೆ. ಇನ್ನೊಂದೆಡೆ, ಎಟಿಎಂನಿಂದ ಹಿಂಪಡೆದ ಹಣವನ್ನು ಮರುಪಾವತಿಸಲು ಸಮಯಾವಕಾಶ ಇರುವುದಿಲ್ಲ ಮತ್ತು ಬಡ್ಡಿ, ಆದರೆ ಮೇಲೆ ಚಕ್ರಬಡ್ಡಿ ಹೆಚ್ಚಾಗಲು ಪ್ರಾರಂಭಿಸುತ್ತದೆ.


ಅಂತರರಾಷ್ಟ್ರೀಯ ವಹಿವಾಟುಗಳನ್ನು ತಪ್ಪಿಸಿ
ಪ್ರತಿಯೊಂದು ಕ್ರೆಡಿಟ್ ಕಾರ್ಡ್‌ನ ವೈಶಿಷ್ಟ್ಯವೆಂದರೆ ಅದನ್ನು ವಿದೇಶದಲ್ಲಿಯೂ ಬಳಸಬಹುದು. ಕ್ರೆಡಿಟ್ ಕಾರ್ಡ್‌ನ ಈ ವೈಶಿಷ್ಟ್ಯವು ಅನೇಕ ಜನರನ್ನು ಆಕರ್ಷಿಸುತ್ತದೆ, ಆದರೆ ಅನೇಕ ಜನರಿಗೆ ಇದರ ಹಿಂದಿನ ಮರ್ಮ ಅರ್ಥವಾಗಿರುವುದಿಲ್ಲ. ನೀವು ವಿದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ, ನೀವು ವಹಿವಾಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅದು ಹೆಚ್ಚುತ್ತಲೇ ಇರುತ್ತದೆ ಮತ್ತು ಕಡಿಮೆಯಾಗುತ್ತಲೇ ಇರುತ್ತದೆ. ಹೀಗಾಗಿ ಒಂದು ವೇಳೆ, ನೀವು ವಿದೇಶದಲ್ಲಿ ನಗದು ಬದಲಿಗೆ ಕಾರ್ಡ್ ಅನ್ನು ಬಳಸಲು ಯೋಚಿಸುತ್ತಿದ್ದರೆ, ಇದಕ್ಕಾಗಿ ನೀವು ಕ್ರೆಡಿಟ್ ಕಾರ್ಡ್ ಜಾಗದಲ್ಲಿ ಪ್ರಿಪೇಯ್ಡ್ ಕಾರ್ಡ್ ಅನ್ನು ಬಳಸಬಹುದು.


ಇದನ್ನೂ ಓದಿ-PM Kisan 16th Installment: ಈ ರೈತರಿಗೆ ಸಿಗಲ್ಲ 16ನೇ ಕಂತಿನ ₹2000, ಕಾರಣ ಇಲ್ಲಿದೆ!


ಒಂದು ಕ್ರೆಡಿಟ್ ಕಾರ್ಡ್ ಬಳಸಿ ಮತ್ತೊಂದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವುದನ್ನು ಮಾಡಬೇಡಿ
ಬ್ಯಾಲೆನ್ಸ್ ವರ್ಗಾವಣೆ ಅನೇಕ ಕ್ರೆಡಿಟ್ ಕಾರ್ಡ್‌ಗಳಲ್ಲಿ ಲಭ್ಯವಿರುವ ಮತ್ತೊಂದು ವೈಶಿಷ್ಟ್ಯವಾಗಿದೆ. ಇದನ್ನು ಬಳಸಿಕೊಂಡು, ನೀವು ಒಂದು ಕ್ರೆಡಿಟ್ ಕಾರ್ಡ್‌ನ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಬಹುದು. ಒಂದು ಕ್ರೆಡಿಟ್ ಕಾರ್ಡ್‌ನಲ್ಲಿ ಶಾಪಿಂಗ್ ಬಿಲ್ ಪಾವತಿಸಲು ನೀವು ಮೊದಲು 30-45 ದಿನಗಳ ಸಮಯಾವಕಾಶ ತೆಗೆದುಕೊಂಡಿರುತ್ತಿರಿ ಮತ್ತು ನಂತರ ನೀವು ಇನ್ನೊಂದು ಕ್ರೆಡಿಟ್ ಕಾರ್ಡ್‌ನಲ್ಲಿ ಮೊದಲ ಪಾವತಿಯನ್ನು ಮಾಡುತ್ತೀರಿ. ಈ ರೀತಿಯಲ್ಲಿ, ಶಾಪಿಂಗ್ ಬಿಲ್ ಪಾವತಿಸಲು ನಿಮಗೆ 30-45 ಹೆಚ್ಚುವರಿ ದಿನಗಳು  ನೀವು 2-3 ತಿಂಗಳ ಸಮಯವನ್ನು ಪಡೆಯುತ್ತೀರಿ.


ಇದನ್ನೂ ಓದಿ-TrueCaller ನಂತಹ ಸೇವೆ ಆರಂಭಕ್ಕೆ ಮುಂದಾದ ಸರ್ಕಾರ, ಸ್ಕ್ರೀನ್ ಮೇಲೆ ಕರೆ ಮಾಡುವವರ ಸರಿಯಾದ ಹೆಸರು ಕಾಣಿಸಿಕೊಳ್ಳಲಿದೆ!


ಆದರೆ ಈ ರೀತಿ ಬ್ಯಾಲೆನ್ಸ್ ವರ್ಗಾವಣೆಯು ಉಚಿತವಲ್ಲ, ಅದಕ್ಕಾಗಿ ನೀವು ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಬ್ಯಾಂಕ್‌ಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಇನ್ನೂ ದೊಡ್ಡ ಅನಾನುಕೂಲತೆಯನ್ನು ತಂದೊಡ್ಡುತ್ತದೆ.  ಕ್ರೆಡಿಟ್ ಕಾರ್ಡ್ ಒಂದು ರೀತಿಯ ಸಾಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಒಂದು ಕ್ರೆಡಿಟ್ ಕಾರ್ಡ್‌ನ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್ ಮಾಡಿದ ಸಾಲವನ್ನು ತೀರಿಸಲು ಬಳಸಿದರೆ, ನೀವು ಒಂದು ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹಣದ ಕೊರತೆ ಎದುರಾದಾಗ ಬ್ಯಾಲೆನ್ಸ್ ವರ್ಗಾವಣೆಗೆ ತೊಂದರೆ ಇಲ್ಲ ಆದರೆ ಅದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಏಕೆಂದರೆ ಇಂತಹ ಹೆಚ್ಚಿನ ವಹಿವಾಟುಗಳು ನಿಮ್ಮ CIBIL ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ