ನವದೆಹಲಿ: Small Business Ideas- ನೀವು ಸಹ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರೆ ಮತ್ತು ನಿಮಗೆ ಹಣದ ಕೊರತೆಯಿದ್ದರೆ, ಈ ಸುದ್ದಿ ಓದಲು ಮರೆಯದಿರಿ. ನೀವು 2 ರಿಂದ 3 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿದರೆ, ಮೋದಿ ಸರ್ಕಾರ ನಿಮಗೆ ಸಹಾಯ ಮಾಡುತ್ತದೆ. ವಾಸ್ತವವಾಗಿ, ಮೋದಿ ಸರ್ಕಾರ ತನ್ನ ಮುದ್ರಾ ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲವನ್ನು ನೀಡುತ್ತದೆ. ಅಂದರೆ,  ವ್ಯವಹಾರದ ಶೇಕಡಾ 75-80ರಷ್ಟು ಸರ್ಕಾರ ಸಾಲವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಗಳಿಕೆ ಮಾಡಬಹುದು. ಈ ವ್ಯವಹಾರಗಳು  ಕಷ್ಟವೇನಲ್ಲ. ಪ್ರಾರಂಭಿಸಲು, ನಿಮ್ಮ ಬಳಿ ಕೇವಲ 2 ರಿಂದ 3 ಲಕ್ಷ ರೂಪಾಯಿ ಇರಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-PVR ಹಾಗೂ INOXಗಳ ವಿಲೀನ, ಮಂಡಳಿಯಿಂದ ಮಹತ್ವದ ನಿರ್ಧಾರ, ಷೇರುಗಳ ಮೇಲೆ ಏನು ಪ್ರಭಾವ?

1. ಹಪ್ಪಳ ಉತ್ಪಾದನಾ ಘಟಕವನ್ನು ಆರಂಭಿಸಿ
ಮುದ್ರಾ ಯೋಜನೆಯಡಿ ನೀವು ಹಪ್ಪಳ ಉತ್ಪಾದಿಸುವ ಘಟಕ ಆರಂಭಿಸಬಹುದು. ಇದಕ್ಕಾಗಿ ಆರಂಭಿಕ 2.05 ಲಕ್ಷ ರೂ.ಬಂಡವಾಳ ಬೇಕು. ಇದಕ್ಕಾಗಿ ನಿಮಗೆ 8.18 ಲಕ್ಷ ರೂ.ಗಳವರೆಗೆ ಸಾಲ ಸಿಗುತ್ತದೆ. ಸರ್ಕಾರದ ಅಂತರ್ಪ್ರಿನ್ಯೋರ್ ಸ್ಕೀಮ್ ಅಡಿ 1.91 ಲಕ್ಷ ರೂ. ಸಬ್ಸಿಡಿ ಕೂಡ ಸಿಗುತ್ತದೆ.


2. ಲೈಟ್ ಎಂಜಿನೀರಿಂಗ್ ಘಟಕ ಆರಂಭಿಸಿ
ಮುದ್ರಾ ಯೋಜನೆಯಡಿಯಲ್ಲಿ, ನೀವು ಲಘು ಎಂಜಿನಿಯರಿಂಗ್‌ನ ಉತ್ಪಾದನಾ ಘಟಕವನ್ನು ಪ್ರಾರಂಭಿಸಬಹುದು (ನಟ್ ಗಳು, ಬೋಲ್ಟ್‌ಗಳು, ವಾಷರ್ ಅಥವಾ ಕೀಲುಗಳು ಇತ್ಯಾದಿ).
ಎಷ್ಟು ಹೂಡಿಕೆ ಅಗತ್ಯವಿದೆ: ಈ ಘಟಕವನ್ನು ಸ್ಥಾಪಿಸಲು ನಿಮಗೆ 1.88 ಲಕ್ಷ ರೂ.ಅವಶ್ಯಕತೆ ಇದೆ
ಸಾಲ ಎಷ್ಟು ಸಿಗುತ್ತದೆ: ಮುದ್ರಾ ಯೋಜನೆಯಡಿ ಬ್ಯಾಂಕ್ ನಿಮಗೆ 2.21 ಲಕ್ಷ ರೂ.ಗಳನ್ನು ಟರ್ಮ್ ಸಾಲವಾಗಿ ಮತ್ತು 2.30 ಲಕ್ಷ ರೂ.ಗಳನ್ನು ಸಾಲದ ಬಂಡವಾಳವಾಗಿ ನೀಡುತ್ತದೆ.
ಎಷ್ಟು ಪ್ರಯೋಜನವಾಗಲಿದೆ: ಒಂದು ತಿಂಗಳಲ್ಲಿ ಸುಮಾರು 2500 ಕೆಜಿ ನಟ್-ಬೋಲ್ಡ್ ತಯಾರಿಸಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ, ಖರ್ಚುಗಳನ್ನು ತೆಗೆದುಹಾಕಿ ಸುಮಾರು 2 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯಬಹುದು.


ಇದನ್ನೂ ನೋಡಿ-
Post Office ಹೂಡಿಕೆದಾರರೆ ಗಮನಿಸಿ! ಏ.1 ರಿಂದ FD ಸೇರಿದಂತೆ ಹಲವು ನಿಯಮಗಳಲ್ಲಿ ಭಾರಿ ಬದಲಾವಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.