Ration card rules : ಪಡಿತರ ಚೀಟಿ ಮೂಲಕ  ಸರ್ಕಾರವು ಒದಗಿಸುವ ಉಚಿತ ಅಥವಾ ಸಬ್ಸಿಡಿ ಪಡಿತರ ಯೋಜನೆಯ ಲಾಭ ಪಡೆಯುತ್ತಿದ್ದರೆ ಈ ಸುದ್ದಿ ಓದಲೇ ಬೇಕು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ ಎಲ್ಲಾ ರಾಜ್ಯಗಳ ಬಡವರಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಪಡಿತರ ಚೀಟಿ ಪರಿಶೀಲನೆ ಕಾರ್ಯ ಬಹಳ ದಿನಗಳಿಂದ ನಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡುವುದು ಅವಶ್ಯಕ : 
ಇದರ ಅಡಿಯಲ್ಲಿ ಪಡಿತರ ಚೀಟಿದಾರರು ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿ ಮತ್ತು ಆಧಾರ್ ಲಿಂಕ್ ಮಾಡುವಂತೆ ಕೋರಲಾಗಿದೆ. ಸೆಪ್ಟೆಂಬರ್ 30 ರೊಳಗೆ ಆಧಾರ್ - ರೇಶನ್ ಕಾರ್ಡ್ ಲಿಂಕ್ ಆಗದೆ ಹೋದಲ್ಲಿ ಪಡಿತರ ಚೀಟಿಯನ್ನು ನಿಷ್ಕ್ರಿಯಗೊಳಿಸಲಾಗುವುದು. 


ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಮಾಸಿಕ 10,000 ರೂ. , ಕೇಂದ್ರ ಸರ್ಕಾರದ ಅದ್ಭುತ ಯೋಜನೆ ಇದು !


ಇಲ್ಲವಾದಲ್ಲಿ ಪಡಿತರ ಚೀಟಿ ಡಿಲೀಟ್ ಆಗುವುದು : 
ಈಗ ಇಂತಹ ಪರಿಸ್ಥಿತಿಯಲ್ಲಿ ಸೆ.30 ರವರೆಗೆ ಆಧಾರ್ ಕಾರ್ಡ್ ನೊಂದಿಗೆ  ಪಡಿತರ ಚೀಟಿ  ಲಿಂಕ್ ಮಾಡದಿರುವ ಪಡಿತರ ಚೀಟಿಯನ್ನು ನಕಲಿ ಎಂದು ಪರಿಗಣಿಸಿ ಡಿಲೀಟ್ ಮಾಡಲಾಗುವುದು. ಇದಾದ ಬಳಿಕ ಸಂಬಂಧಿಸಿದ ಪಡಿತರ ಚೀಟಿಯ ದತ್ತಾಂಶ ಲಭ್ಯವಾಗದಿದ್ದರೆ ಸರ್ಕಾರದಿಂದ ವಿತರಣೆಯಾಗುವ ಉಚಿತ ಪಡಿತರದ ಲಾಭ ಪಡೆಯುವುದು ಸಾಧ್ಯವಾಗುವುದಿಲ್ಲ. ಈ ಸಂಬಂಧ ಬಿಹಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೂರೈಕೆ ಕಚೇರಿಗಳಿಗೆ ಆದೇಶ ಹೊರಡಿಸಲಾಗಿದೆ. ಇದಾದ ಬಳಿಕ ರಾಜ್ಯದಲ್ಲಿ ಅಭಿಯಾನ ನಡೆಸುವ ಮೂಲಕ ಪಡಿತರ ಚೀಟಿದಾರರ ಆಧಾರ್ ಸೀಡಿಂಗ್ ಮಾಡುವಂತೆ ಕೋರಲಾಗಿದೆ.


ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, ಪಡಿತರ ಚೀಟಿಯಲ್ಲಿ ನಮೂದಿಸಿರುವ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಹಿರಿಯ ಸದಸ್ಯರಿಂದ ಪುಟ್ಟ ಮಗುವಿನವರೆಗೂ ಪ್ರತಿಯೊಬ್ಬರ ಆಧಾರ್ ಸಂಖ್ಯೆಯನ್ನು ನೀಡುವುದು ಅವಶ್ಯಕ. ಪಡಿತರ ಚೀಟಿಯನ್ನು  ಡಿಲೀಟ್ ಆಗದಂತೆ ನೋಡಿಕೊಳ್ಳಲು, ಸಂಬಂಧಪಟ್ಟ ಡೀಲರ್ ಅಥವಾ ಬ್ಲಾಕ್ ಪೂರೈಕೆ ಶಾಖೆಗೆ ಅರ್ಜಿಯೊಂದಿಗೆ ಆಧಾರ್ ಸಂಖ್ಯೆಯನ್ನು ನೀಡಬಹುದು.


ಇದನ್ನೂ ಓದಿ : ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.