ನಿಮ್ಮ ಖಾತೆ ಸೇರಲಿದೆಯೇ ಪಿಎಂ ಕಿಸಾನ್ 11 ನೇ ಕಂತಿನ ಹಣ ? ತಕ್ಷಣ ಚೆಕ್ ಮಾಡಿಕೊಳ್ಳಿ
PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಮೇ 31 ರಂದು ರೈತರ ಖಾತೆಗೆ ವರ್ಗಾಯಿಸಲಾಗುವುದು. ಈ ಬಾರಿ ನಿಮ್ಮ ಖಾತೆಗೆ ಕಂತು ಹಣ ಬರುತ್ತದೋ ಇಲ್ಲವೋ ಎಂಬುದನ್ನು ಮೊದಲೇ ಪರಿಶೀಲಿಸುವುದು ಮುಖ್ಯ.
ಬೆಂಗಳೂರು : PM Kisan: ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಘೋಷಿಸಿದೆ. ಇದರಲ್ಲಿ ಈವರೆಗೆ 10 ಕಂತುಗಳನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. 11ನೇ ಕಂತನ್ನು ಮೇ 31 ರಂದು ಖಾತೆಗಳಿಗೆ ಕಳುಹಿಸಲಾಗುತ್ತದೆ. 11 ನೇ ಕಂತಿನ ಮೊದಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರೈತರಿಗೆ ಸೂಚಿಸಲಾಗಿದೆ.
ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮಾಡಿಸಬಹುದು ಇ-ಕೆವೈಸಿ :
ಈ ಬಾರಿ 11ನೇ ಕಂತಿನ 2000 ರೂಪಾಯಿ ನಿಮ್ಮ ಖಾತೆಗೆ ಬರುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್‌ಸೈಟ್‌ನಲ್ಲಿ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಅವಶ್ಯಕ ಎಂಬ ಮಾಹಿತಿ ನೀಡಲಾಗಿದೆ. ಅದನ್ನು ರೈತರು ಆನ್‌ಲೈನ್ ಅಥವಾ ಆಫ್‌ಲೈನ್ ಹೀಗೆ ಯಾವುದೇ ರೀತಿಯಲ್ಲಿ ಮಾಡಿಸಬಹುದು. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಹೋದರೆ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ. ಹಾಗಾಗಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ೧೧ನೇ ಕಂತು ಬರುತ್ತದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ
ಕಂತಿನ ಹಣ ಬರುತ್ತದೋ ಇಲ್ಲವೋ ಎಂಬುದನ್ನು ಈ ರೀತಿ ಪರಿಶೀಲಿಸಿಕೊಳ್ಳಿ :
1. ಮೊದಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ .
2. ಈಗ 'ಫಾರ್ಮರ್ ಕಾರ್ನರ್' ನಲ್ಲಿ ನೀಡಲಾದ Beneficiary List ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3.ಇಲ್ಲಿ ಕ್ಲಿಕ್ ಮಾಡಿದಾಗ ತೆರೆಯುವ ವೆಬ್‌ಪುಟದಲ್ಲಿ, ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಕೇಳಲಾಗುತ್ತದೆ.
4.ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ, Get Report ಮೇಲೆ ಕ್ಲಿಕ್ ಮಾಡಿ.
5. ಇಲ್ಲಿ ನಿಮ್ಮ ಮುಂದೆ ಒಂದು ಪಟ್ಟಿ ಇರುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ನೀವು ಕಾಣಬಹುದು.
6. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಪಿಎಂ ಕಿಸಾನ್ ನಿಧಿಯ 2000 ರೂ .ನಿಮ್ಮ ಖಾತೆಗೆ ಬರುತ್ತದೆ.
ಮೇ 31 ರಂದು ಖಾತೆಗೆ 2000 ರೂಪಾಯಿ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 6000 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತು ಮೇ 31 ರಂದು ಬಿಡುಗಡೆಯಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ : PPF: ತಿಂಗಳಿಗೆ 500 ರೂ. ಹೂಡಿಕೆ ಮಾಡಿ 61 ಲಕ್ಷ ರೂ.ಗಳನ್ನು ಪಡೆಯಿರಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.