ಈ ದಿನ ಖಾತೆ ಸೇರಲಿದೆ ಪಿಎಂ ಕಿಸಾನ್ ನಿಧಿಯ 2000 ರೂಪಾಯಿ .! ಕೃಷಿ ಸಚಿವರ ಘೋಷಣೆ

PM Kisan : ಕಾರ್ಯಕ್ರಮವೊಂದರಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪಿಎಂ ಕಿಸಾನ್ ನಿಧಿಯ 11 ನೇ ಕಂತಿನ ದಿನಾಂಕಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆ ಮಾಡಿದ್ದಾರೆ. ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.  

Written by - Ranjitha R K | Last Updated : May 19, 2022, 02:21 PM IST
  • ಈ ದಿನದಂದು ಪಿಎಂ ಕಿಸಾನ್ ಹಣ ರೈತರ ಖಾತೆಗೆ
  • ಕಾರ್ಯಕ್ರಮದಲ್ಲಿ ದಿನಾಂಕ ಘೋಷಿಸಿದ ಕೇಂದ್ರ ಸಚಿವ
  • ೧೧ ನೇ ಖಾತೆಗಾಗಿ ಅಗತ್ಯವಿದೆ ಇ-ಕೆವೈಸಿ
ಈ ದಿನ ಖಾತೆ ಸೇರಲಿದೆ ಪಿಎಂ ಕಿಸಾನ್  ನಿಧಿಯ 2000 ರೂಪಾಯಿ .! ಕೃಷಿ ಸಚಿವರ ಘೋಷಣೆ  title=
Pm Kisan (file photo)

ಬೆಂಗಳೂರು : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತುಗಾಗಿ ದೇಶಾದ್ಯಂತ 12.50 ಕೋಟಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ರೈತರ ಈ ನಿರೀಕ್ಷೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತೆರೆ ಎಳೆದಿದ್ದಾರೆ. 11 ನೇ ಕಂತಿನ ಹಣ ರೈತ ಖಾತೆಗೆ ಯಾವಾಗ ಬರಲಿದೆ ಎನ್ನುವ ದಿನಾಂಕವನ್ನು ಸಚಿವರು ಘೋಷಿಸಿದ್ದಾರೆ.  

ಕಾರ್ಯಕ್ರಮವೊಂದರಲ್ಲಿ ಘೋಷಿಸಿದ ಕೃಷಿ ಸಚಿವ  : 
ಪಿಎಂ ಕಿಸಾನ್ ನಿಧಿಯ 11 ನೇ ಕಂತಿನ  ಹಣ ವರ್ಗಾವಣೆ ದಿನಾಂಕವನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್  ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರು ಈ ಘೋಷಣೆ ಮಾಡಿದ್ದಾರೆ.  ಕೇಂದ್ರ ಸರ್ಕಾರ  ರೈತರಿಗಾಗಿ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ 6 ಸಾವಿರ ರೂ. ವರ್ಗಾಯಿಸಲಾಗುವುದು. 

ಇದನ್ನೂ  ಓದಿ : ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ 115 ಕಿಮೀ ವರೆಗೆ ರೇಂಜ್ .! ಇತರ ವೈಶಿಷ್ಟ್ಯ ಹೀಗಿದೆ

ಮೇ 31 ರಂದು ರೈತರ ಖಾತೆಗೆ ಹಣ : 
ಮೇ 31 ರಂದು ಮತ್ತೆ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಸಚಿವರಿಂದ ದಿನಾಂಕ ಘೋಷಣೆಯಾದ ಬಳಿಕ ರೈತರ ಇದೀಗ ರೈತರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. 

ಅಗತ್ಯವಿದೆ ಇ-ಕೆವೈಸಿ  :
ಈ ಬಾರಿ 11ನೇ ಕಂತಿನ ಲಾಭ ಪಡೆಯಲು ಇ-ಕೆವೈಸಿ ಮಾಡುವುದು ಅಗತ್ಯ.  12 ಮತ್ತು ಒಂದೂವರೆ ಕೋಟಿಗಳಲ್ಲಿ ಸುಮಾರು 80 ಪ್ರತಿಶತ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಇ-ಕೆವೈಸಿ ಮಾಡಬಹುದು. ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. 

ಇದನ್ನೂ  ಓದಿ : TVS iQube Electric Scooter: ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ. ವರೆಗೆ ಚಲಿಸುವ ಈ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳಿವು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News