ಬೆಂಗಳೂರು: ಜಾಗತಿಕವಾಗಿ ಚಿನ್ನದ ಎರಡನೇ ಅತಿ ದೊಡ್ಡ ಗ್ರಾಹಕ ಭಾರತ. ಈ ಅಮೂಲ್ಯವಾದ ಲೋಹದ ಮೊದಲ ಅತಿ ದೊಡ್ಡ ಗ್ರಾಹಕ ಚೀನಾ. ದೇಶದ ಬಹುಪಾಲು ಚಿನ್ನದ ಬೇಡಿಕೆಯನ್ನು ಆಮದು ಮತ್ತು ಚಿನ್ನಾಭರಣದ ದೇಶೀಯ ಮರುಬಳಕೆಯ ಮೂಲಕ ಪೂರೈಸಲಾಗುತ್ತದೆ. ಆಮದು ಸುಂಕಗಳು ಮತ್ತು ಇತರ ತೆರಿಗೆಗಳು ಸಹ ಚಿನ್ನದ ಬೆಲೆಯಲ್ಲಿ ಸೇರುತ್ತವೆ. ಇದು ಭಾರತದೊಳಗೆ ಚಿನ್ನದ ಅಂತಿಮ ಬೆಲೆಯನ್ನು ರೂಪಿಸುತ್ತದೆ.


COMMERCIAL BREAK
SCROLL TO CONTINUE READING

ಬಾಂಡ್ ಇಳುವರಿ ಮತ್ತು ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು ಚಿನ್ನದ ಬೆಲೆಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಕುಗ್ಗಿದೆ. 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ 100 ರೂಪಾಯಿಯಷ್ಟು ಕಡಿಮೆಯಾಗಿದ್ದು, 55,550 ರೂ. ಗೆ ವಹಿವಾಟು ನಡೆಸುತ್ತಿದೆ. ಇನ್ನೂ ಬೆಳ್ಳಿಯ ಬೆಲೆ ತಟಸ್ಥವಾಗಿ ಉಳಿದಿದ್ದು, 1 ಕೆಜಿಗೆ 74,500 ರೂ. ಆಗಿದೆ. 


ಇದನ್ನೂ ಓದಿ:  'ವರ್ಷ 2040 ರವರೆಗೆ 27-28 ಟ್ರಿಲಿಯನ್ ಡಾಲರ್ ಗೆ ತಲುಪಲಿದೆ ಭಾರತದ ಆರ್ಥಿಕತೆ'


ಭಾರತದ ಕೆಲವು ಪ್ರಮುಖ ನಗರಗಳಲ್ಲಿನ ಇತ್ತೀಚಿನ ಚಿನ್ನದ ಬೆಲೆಗಳನ್ನು ನೋಡೋಣ : 


ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ, 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹55,550 ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ ₹61,755 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. 


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹55,650 ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ ₹60,700 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. 


ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹55,500 ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ ₹60,550 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. 


ಹೈದರಾಬಾದ್‌ ನಗರದಲ್ಲಿ 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹55,500 ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ ₹60,550 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ.


ಇದನ್ನೂ ಓದಿ:  ಶ್ರೀಮಂತರ ಸಂಖ್ಯೆಯಲ್ಲಿ ಕುಸಿತ, ಸಂಪತ್ತು ಕಡಿಮೆ, ಆದರೆ ಭಾರತಕ್ಕೆ ಒಳ್ಳೆಯ ಸುದ್ದಿ


ಕೊಲ್ಕತ್ತಾ ನಗರದಲ್ಲಿ 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹55,500 ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ. ಗೆ ₹60,550 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ.


ಭಾರತದ ಕೆಲವು ಪ್ರಮುಖ ನಗರಗಳಲ್ಲಿನ ಇತ್ತೀಚಿನ ಬೆಳ್ಳಿಯ ದರ ನೋಡೋಣ : 


ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ದರ ₹75,750 ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಮತ್ತು ಕೊಲ್ಕತ್ತಾದಲ್ಲಿ 1 ಕೆಜಿ ಬೆಳ್ಳಿ ದರ ₹74,500 ಆಗಿದೆ. ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಬೆಳ್ಳಿಯು ಕೆಜಿಗೆ ₹79,800 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.