World Wealth Report 2023: ಶ್ರೀಮಂತರ ಸಂಖ್ಯೆಯಲ್ಲಿ ಕುಸಿತ, ಸಂಪತ್ತು ಕಡಿಮೆ, ಆದರೆ ಭಾರತಕ್ಕೆ ಒಳ್ಳೆಯ ಸುದ್ದಿ

ವಿಶ್ವ ಸಂಪತ್ತು ವರದಿ 2023 : ಈ ವರ್ಷ ಅಧಿಕ ನಿವ್ವಳ ಮೌಲ್ಯದ ವ್ಯಕ್ತಿಗಳ(HNWIs) ಸಂಖ್ಯೆ ಮತ್ತು ಸಂಪತ್ತಿನಲ್ಲಿ ಕುಸಿತ ಕಂಡುಬಂದಿದ್ದು, ಇದು ಕಳೆದ 10 ವರ್ಷಗಳಲ್ಲಿ ಅತ್ಯಧಿಕವಾಗಿದ್ದು, ಇದನ್ನು ಕ್ಯಾಪ್ಜೆಮಿನಿಯ "ವಿಶ್ವ ಸಂಪತ್ತು ವರದಿ-2023" ವರದಿ ಮಾಡಿದೆ.   

Written by - Savita M B | Last Updated : Jun 10, 2023, 05:31 PM IST
  • 2022 ರಲ್ಲಿ ಭಾರತದ ಶ್ರೀಮಂತರ ನಿವ್ವಳ ಮೌಲ್ಯ ಹೆಚ್ಚಾಗಿದೆ.
  • ದೇಶದಲ್ಲಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಜನಸಂಖ್ಯೆಯಲ್ಲಿ ಶೇಕಡಾ 10.5 ರಷ್ಟು ಹೆಚ್ಚಳವಾಗಿದೆ.
  • ದೇಶದಲ್ಲಿ ಒಟ್ಟು 308 ಜನರು ಈಗ ಅತಿ ಶ್ರೀಮಂತರ ವರ್ಗಕ್ಕೆ ಬಂದಿದ್ದಾರೆ.
World Wealth Report 2023: ಶ್ರೀಮಂತರ ಸಂಖ್ಯೆಯಲ್ಲಿ ಕುಸಿತ, ಸಂಪತ್ತು ಕಡಿಮೆ, ಆದರೆ ಭಾರತಕ್ಕೆ ಒಳ್ಳೆಯ ಸುದ್ದಿ title=

High Net Worth Individual : ವಿಶ್ವದಾದ್ಯಂತ ಅಧಿಕ ನಿವ್ವಳ ಮೌಲ್ಯದ ವ್ಯಕ್ತಿಗಳ ಸಂಖ್ಯೆಯಲ್ಲಿ ಭಾರೀ ಕುಸಿತ ದಾಖಲಾಗಿದ್ದು, ಇದು ಕಳೆದ 10 ವರ್ಷಗಳಲ್ಲಿಯೇ ಅಧಿಕವಾಗಿದೆ. ಇನ್ನು ಶ್ರೀಮಂತರ ಎಂದರೆ ಅಪಾರವಾದ ಸಂಪತ್ತನ್ನು ಹೊಂದಿರುವ ಜನರು ಈ ಬಾರಿ HNWIಗಳನ್ನು ಮೀರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜೂನ್‌ 1,  2023ರಂದು ಪ್ರಕಟವಾದ ವರದಿಯಲ್ಲಿ, ಕಳೆದ ಒಂದು ವರ್ಷದಲ್ಲಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು, ಮಾರುಕಟ್ಟೆಯಲ್ಲಿ ಭಾರಿ ಕುಸಿತ, ವೆಚ್ಚದ ಬಿಕ್ಕಟ್ಟು ಮತ್ತು ಅನೀರಿಕ್ಷಿತ ಹಣದುಬ್ಬರದಿಂದಾಗಿ HNWI ಗಳು ಹಿನ್ನಡೆಯಾಗಿವೆ ಎಂದು ಹೇಳಲಾಗುತ್ತಿದೆ. ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿವೆ.. ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಲ್ಲದೇ, ಕಂಪನಿಗಳ ಲಾಭದ ಮೇಲೆಯೂ ಪರಿಣಾಮಬೀರುತ್ತದೆ. ಮತ್ತು ಇದರಿಂದ ತಂತ್ರಜ್ಞಾನ ಷೇರುಗಳ ಮೇಲೆ ಸಾಕಷ್ಟು ಒತ್ತಡವಿದೆ. 

ಇದನ್ನೂ ಓದಿ-Business Concept: ನೌಕರಿಯ ಕಿರಿಕಿರಿಯಿಂದ ಮುಕ್ತಿಪಡೆದು ಸ್ವಂತ ವ್ಯವಹಾರ ಆರಂಭಿಸಬೇಕೆ? ಈ ಲೇಖನ ನಿಮಗಾಗಿ

ಆಸ್ತಿ ಪ್ರಮಾಣದಲ್ಲಿ ಎಷ್ಟು ಕಡಿಮೆಯಾಗಿದೆ? 
ವರದಿಯ ಪ್ರಕಾರ, ಜಾಗತಿಕ HNWI ಸಂಪತ್ತು 2022 ರಲ್ಲಿ 3.6% ರಷ್ಟು ಕುಸಿದಿದ್ದು, ಇದು 2013 ಮತ್ತು 2022ರ ನಡುವಿನ ಅಗಾಧವಾದ ಕುಸಿತವಾಗಿದೆ. ಈ HNWI ಗಳ ಸಂಪತ್ತು ಮಾರುಕಟ್ಟೆಗಳಲ್ಲಿ ಕುಸಿದಿದ್ದು, ಸಂಪತ್ತಿನ ಇಳಿಕೆಯೊಂದಿಗೆ HNWI ಗಳ ಜನರ ಸಂಖ್ಯೆಯು 2022ರಲ್ಲಿ 3.3% ನಿಂದ 21.7 ಮಿಲಿಯನ್‌ಗೆ ಇಳಿಯುವ ನಿರೀಕ್ಷೆಯಿದೆ. ಕೆಲವು ಅಂಕಿ ಅಂಶಗಳ ಪ್ರಕಾರ ಉತ್ತರ ಅಮೆರಿಕಾರದಲ್ಲಿ ಅತಿದೊಡ್ಡ ಕುಸಿತ ಕಂಡುಬಂದಿದೆ. 

ಭಾರತದ ಸುದ್ದಿ ಹೇಗಿದೆ? 
ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ಮತ್ತು ಇಂಡೋನೇಷ್ಯಾಕ್ಕೆ 2022 ಇನ್ನೂ ಉತ್ತಮ ವರ್ಷ ಎಂದು ವರದಿಗಳಲ್ಲಿ ಹೇಳಲಾಗಿದೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ವಾರ್ಷಿಕ ಸರಾಸರಿ ಸಮೃದ್ಧಿ ಕಂಡುಬಂದಿದೆ. BSE ಸೆನ್ಸೆಕ್ಸ್‌ ವರ್ಷದಿಂದ ವರ್ಷಕ್ಕೆ 4.4% ನಷ್ಟು ಲಾಭವನ್ನು ದಾಖಲಿಸಿದರೆ, ನಿಫ್ಟಿ 50 4.3% ಗಳಿಸಿದೆ. ಇದಲ್ಲದೇ HNWI ಗಳ ಸಂಪತ್ತು ಮತ್ತು ಜನರ ಸಂಖ್ಯೆ ಎರಡರಲ್ಲೂ ತುಲನಾತ್ಮಕವಾಗಿ ಹೆಚ್ಚಳ ಕಂಡುಬಂದಿದೆ. 

ಇದನ್ನೂ ಓದಿ-Digital Lending ನಲ್ಲಿ ಡಿಫಾಲ್ಟ್ ಲಾಸ್ ಗ್ಯಾರಂಟಿ ಕುರಿತಾದ ಮಾರ್ಗಸೂಚಿಗಳು ಪ್ರಕಟ

ಕಳೆದ ವರ್ಷ ಭಾರತಕ್ಕೆ ಒಳ್ಳೆಯ ಸುದ್ದಿ ಬಂದಿತ್ತು
ಕೆಲವು ಜಾಗತಿಕ ಅಂಶಗಳಿಂದಾಗಿ HNWIಗಳು ಈ ವರ್ಷ ಪರಿಣಾಮ ಬೀರಬಹುದು, ಆದರೆ 2021 ರ ಡೇಟಾವನ್ನು ಆಧರಿಸಿದ ಹಿಂದಿನ ವರ್ಷದ ಕ್ಯಾಪ್ಜೆಮಿನಿಯ ವರದಿಯು ಭಾರತದಲ್ಲಿ HNWIನ ಜನಸಂಖ್ಯೆಯು 10.5% ಬೆಳವಣಿಗೆಯನ್ನು ದಾಖಲಿಸಿದ್ದು, ಒಟ್ಟು 308 ಜನರು ಅಲ್ಟ್ರಾ ವಿಭಾಗದಲ್ಲಿ ಬಂದಿದ್ದಾರೆ ಎಂದು ಕಂಡುಬಂದಿದೆ. ಗಣನೀಯ ಸಂಪತನ್ನು ಹೊಂದಿರುವವರ ಜಾಗತಿಕ ಮಟ್ಟದಲ್ಲಿಯೂ ಆಗ ಅದು 7.8%ರಷ್ಟು ಹೆಚ್ಚಾಗಿದ್ದು, ಅವರ ಜನಸಂಖ್ಯೆಯು 22.5 ಮಿಲಿಯನ್‌ಗೆ ಏರಿತು. ಒಟ್ಟಾರೆಯಾಗಿ ಸಂಪತ್ತಿನಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News